ನವದೆಹಲಿ: 16 ಬಾರಿ WWE ಚಾಂಪಿಯನ್ ಜಾನ್ ಸೆನಾ ಅವರು ಇನ್-ರಿಂಗ್ ಸ್ಪರ್ಧೆಗಳಿಂದ ನಿವೃತ್ತಿ ಘೋಷಿಸಿದ್ದಾರೆ. ಟೊರೊಂಟಒದಲ್ಲಿ ನಡೆದ ಮೆನ್ ಇನ್ ದಿ ಬ್ಯಾಂಕ್ ಕ್ರೀಡಾಕೂಟದಲ್ಲಿ ಈ ಬಗ್ಗೆ ಅವರು ಹೇಳಿದ್ದು, 2025ರಿಂದ ಜಾರಿಗೆ ಬರುವಂತೆ ತಮ್ಮ ನಿರ್ಧಾರವನ್ನು ಪ್ರಕಟಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
WWEನ ದಂತಕಥೆ ಎಂದೇ ಕರೆಲಯ್ಪಡುವ ಜಾನ್ ಸೆನಾ ಅವರು ನಿವೃತ್ತಿಯ ವಿಚಾರ ಮಾತನಾಡುತ್ತಿದ್ದಂತೆ ನೆರದಿದ್ದ ಪ್ರೇಕ್ಷಕರು ತಮ್ಮ ನಿರ್ಧಾರವನ್ನು ಹಿಂಪಡೆಯುವಂತೆ ಸೂಚಿಸಿದರು. ಜಾನ್ ಸೆನಾ ನಿವೃತ್ತಿಯ ಸುದ್ದಿ ಹಲವರಿಗೆ ಆಘಾತವನ್ನುಂಟು ಮಾಡಿದ್ದು, ಮತ್ತೊಮ್ಮೆ ಪರಿಶೀಲಿಸುವಂತೆ ಮನವಿ ಮಾಡಿದ್ದಾರೆ.
ನಾನು WWEನಿಂದ ನಿವೃತ್ತಿ ಹೊಂದುತ್ತಿದ್ದು, ಇದು 2025ರಲ್ಲಿ ಜಾರಿಗೆ ಬರುತ್ತದೆ. 2025ರ ರಾಯಲ್ ರಂಬಲ್, ಎಲಿಮಿನೇಷನ್ ಚೇಂಬರ್ ಮತ್ತು ನಂತರ ಲಾಸ್ ವೇಗಾಸ್‌ನಲ್ಲಿ ರೆಸಲ್ಮೇನಿಯಾ 41 ನಲ್ಲಿ ನಾನು ಭಾಗವಹಿಸುತ್ತೇನೆ ಎಂದು ಹೇಳುವ ಮೂಲಕ 47 ವರ್ಷದ ಜಾನ್ ಸೆನಾ ಅವರು ತಮ್ಮ ನಿವೃತ್ತಿಯ ಕುರಿತು ಹೇಳಿದ್ದಾರೆ.
2002ರಲ್ಲಿ WWEಗೆ ಪದಾರ್ಪಣೆ ಮಾಡಿದ ಜಾನ್ ಸೆನಾ ದಿ ರಾಕ್, ಟ್ರಿಪಲ್ ಹೆಚ್, ಸಿಎಮ್ ಪಂಕ್ ಮತ್ತು ರಾಂಡಿ ಓರ್ಟನ್‌ನಂತಹವರನ್ನು ಸೋಲಿಸುವ ಮೂಲಕ ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.