ಕ್ರೀಡೆ

WPL-2025: ಮುಗ್ಗರಿಸಿದ ಮುಂಬೈ ಇಂಡಿಯನ್ಸ್​; ಅಗ್ರಸ್ಥಾನಕ್ಕೇರಿದ ಡೆಲ್ಲಿ ಕ್ಯಾಪಿಟಲ್ಸ್​

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ಸ್ಪಿನ್ನರ್​ಗಳಾದ ಜೆಸ್​ ಜೊನಾಸೆನ್​ (25ಕ್ಕೆ 3) ಮತ್ತು ಮಿನ್ನು ಮಣಿ (17ಕ್ಕೆ 3) ಬಿಗಿ ಬೌಲಿಂಗ್​ ದಾಳಿ ಮತ್ತು ನಾಯಕಿ ಮೆಗ್​ ಲ್ಯಾನಿಂಗ್​ (60*ರನ್​, 49 ಎಸೆತ, 9 ಬೌಂಡರಿ) ಅರ್ಧಶತಕದ ಆಸರೆಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ತಂಡ ವುಮೆನ್ಸ್​ ಪ್ರೀಮಿಯರ್​ ಲೀಗ್​ (ಡಬ್ಲ್ಯುಪಿಎಲ್​) 3ನೇ ಆವೃತ್ತಿಯಲ್ಲಿ ಮಾಜಿ ಚಾಂಪಿಯನ್​ ಮುಂಬೈ ಇಂಡಿಯನ್ಸ್​ ವಿರುದ್ಧ 9 ವಿಕೆಟ್​ಗಳಿಂದ ಗೆಲುವು ದಾಖಲಿಸಿದೆ. ಟೂರ್ನಿಯಲ್ಲಿ 4ನೇ ಗೆಲುವು ಒಲಿಸಿಕೊಂಡ ಡೆಲ್ಲಿ ಕ್ಯಾಪಿಟಲ್ಸ್​ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಲಗ್ಗೆಯಿಟ್ಟಿದೆ.

ಉದ್ಯಾನನಗರಿಯ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಟಾಸ್​ ಸೋತು ಮೊದಲು ಬ್ಯಾಟಿಂಗ್​ಗೆ ಇಳಿದ ಮುಂಬೈ ಪ್ರಮುಖ ಬ್ಯಾಟರ್​ಗಳ ವೈಲ್ಯದ ನಡುವೆ 9 ವಿಕೆಟ್​ಗೆ 123 ರನ್​ ಗಳಿಸಿತು. ಪ್ರತಿಯಾಗಿ ಡೆಲ್ಲಿ ತಂಡ 14.3 ಓವರ್​ಗಳಲ್ಲಿ 1 ವಿಕೆಟ್​ಗೆ 124 ರನ್​ ಗಳಿಸಿ ಗೆಲುವು ಸಾಧಿಸಿತು. ಶೆಾಲಿ ವರ್ಮ (43 ರನ್​, 28 ಎಸೆತ, 4 ಬೌಂಡರಿ, 3 ಸಿಕ್ಸರ್​) ಡೆಲ್ಲಿಗೆ ಬಿರುಸಿನ ಆರಂಭ ಒದಗಿಸಿದರು.

ಮುಂಬೈ ಇಂಡಿಯನ್ಸ್​: 9 ವಿಕೆಟ್​ಗೆ 123 (ಯಸ್ತಿಕಾ 11, ಮ್ಯಾಥ್ಯೂಸ್​ 22, ಸೀವರ್​ 18, ಹರ್ಮಾನ್​ಪ್ರೀತ್​ 22, ಕೆರ್​ 17, ಅಮನ್​ಜೋತ್​ 17, ಸಜನಾ 5, ಕಮಲಿನಿ 1, ಜೊನಾಸೆನ್​ 25ಕ್ಕೆ 3, ಮಿನ್ನು ಮಣಿ 17ಕ್ಕೆ 3, ಸುದರ್​ಲ್ಯಾಂಡ್​ 21ಕ್ಕೆ 1, ಶಿಖಾ 16ಕ್ಕೆ 1). ಡೆಲ್ಲಿ ಕ್ಯಾಪಿಟಲ್ಸ್​: 14.3 ಓವರ್​ಗಳಲ್ಲಿ 1 ವಿಕೆಟ್​ಗೆ 124 (ಲ್ಯಾನಿಂಗ್​ 60*, ಶೆಾಲಿ 43, ಜೆಮೀಮಾ 15*, ಅಮನ್​ಜೋತ್​ 12ಕ್ಕೆ 1).