ಅಹಮದಾಬಾದ್: ಏಕದಿನ ವಿಶ್ವಕಪ್ ಟ್ರೋಫಿ ಎತ್ತಿ ಹಿಡಿಯುವಲ್ಲಿ ವಿಫಲರಾಗಿದ್ದರೂ, ರೋಹಿತ್ಶರ್ಮ ಅವರೇ ಇನ್ನೂ 2 ವರ್ಷಗಳ ಕಾಲ ಟೀಮ್ ಇಂಡಿಯಾದ ನಾಯಕರಾಗಿ ಮುಂದುವರಿಯುವ ಸಾಧ್ಯತೆ ಕಾಣಿಸಿದೆ.
ಫೈನಲ್ ಸೋಲು ಕನಸುಭಗ್ನಗೊಳಿಸಿದ್ದರೂ, ಭಾರತ ತಂಡಕ್ಕೆ ಇನ್ನೂ 2 ವರ್ಷ ರೋಹಿತ್ ನಾಯಕತ್ವ ಅಗತ್ಯವೆನಿಸಿದೆ. ಯಾಕೆಂದರೆ ತಂಡದ ಯುವ ಆಟಗಾರರು ಇನ್ನೂ ನಾಯಕತ್ವಕ್ಕೆ ಸ್ವೀಕರಿಸಲು ಪಕ್ವ ಆದಂತಿಲ್ಲ.
ಫಿಟ್ನೆಸ್ ಸಮಸ್ಯೆ ನಡುವೆ ಹಾರ್ದಿಕ್ ಪಾಂಡ್ಯ ಟಿ20 ಸಾರಥ್ಯ ವಹಿಸಿಕೊಂಡರೂ, ಏಕದಿನ ಮತ್ತು ಟೆಸ್ಟ್ ತಂಡಕ್ಕೆ ನಾಯಕರಾಗಿ ರೋಹಿತ್ ಅವರೇ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಮತ್ತು ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ವರೆಗೆ ಮುಂದುವರಿಯುವ ನಿರೀಕ್ಷೆ ಇದೆ.