ಕ್ರೀಡೆ

ವಿಶ್ವಕಪ್​ ಉದ್ಘಾಟನಾ ಪಂದ್ಯಕ್ಕೆ ಕನ್ನಡಿಗ ಜಾವಗಲ್​ ಶ್ರೀನಾಥ್​ ರೆಫ್ರಿ

ದುಬೈ: ಟೀಮ್​ ಇಂಡಿಯಾದ ಮಾಜಿ ವೇಗಿ ಹಾಗೂ ಕನ್ನಡಿಗ ಜಾವಗಲ್​ ಶ್ರೀನಾಥ್​, ಅಕ್ಟೋಬರ್​ 5ರಂದು ಹಾಲಿ ಚಾಂಪಿಯನ್​ ಇಂಗ್ಲೆಂಡ್​ ಮತ್ತು ನ್ಯೂಜಿಲೆಂಡ್​ ತಂಡಗಳ ನಡುವೆ ಅಹಮದಾಬಾದ್​ನಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್​ ಟೂರ್ನಿಯ ಉದ್ಘಾಟನಾ ಪಂದ್ಯಕ್ಕೆ ಮ್ಯಾಚ್​ ರೆಫ್ರಿಯಾಗಿ ಐಸಿಸಿಯಿಂದ ಶುಕ್ರವಾರ ನೇಮಕಗೊಂಡಿದ್ದಾರೆ.

ಭಾರತದ ನಿತಿನ್​ ಮೆನನ್​ ಮತ್ತು ಶ್ರೀಲಂಕಾದ ಕುಮಾರ ಧರ್ಮಸೇನಾ ಪಂದ್ಯಕ್ಕೆ ಇಬ್ಬರು ಮೈದಾನದ ಅಂಪೈರ್​ಗಳಾಗಿರುತ್ತಾರೆ. ಪೌಲ್​ ವಿಲ್ಸನ್​ ತೃತೀಯ ಅಂಪೈರ್​ ಮತ್ತು ಸೈಕತ್​ 4ನೇ ಅಂಪೈರ್​ ಆಗಿರುತ್ತಾರೆ. ವಿಶ್ವಕಪ್​ನಲ್ಲಿ ಒಟ್ಟು 16 ಅಂಪೈರ್​ಗಳು ಕಾರ್ಯನಿರ್ವಹಿಸಲಿದ್ದಾರೆ. ಈ ಪೈಕಿ 12 ಐಸಿಸಿ ಎಲೈಟ್​ ಪ್ಯಾನಲ್​ನವರಾಗಿರುತ್ತಾರೆ.