ಕ್ರೀಡೆ

ಹಾಲಿ ಚಾಂಪಿಯನ್ ಇಂಗ್ಲೆಂಡ್‌ಗೆ ಇಂದು ಆಫ್ಘನ್ ಸವಾಲು

ನವದೆಹಲಿ: ಆರಂಭಿಕ ಪಂದ್ಯದ ಸೋಲಿನ ಆಘಾತ ಬಳಿಕ ಗೆಲುವಿನ ಹಳಿ ಏರಿರುವ ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡ ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಭಾನುವಾರ, ಸತತ 2 ಸೋಲಿನಿಂದ ತತ್ತರಿಸಿರುವ ಅ್ಘಾನಿಸ್ತಾನ ತಂಡವನ್ನು ಎದುರಿಸಲಿದೆ. ರಾಷ್ಟ್ರ ರಾಜಧಾನಿಯ ಅರುಣ್ ಜೇಟ್ಲಿ ಮೈದಾನ ಪಂದ್ಯಕ್ಕೆ ಆತಿಥ್ಯ ವಹಿಸಲಿದೆ.

ಸೋಲಿನ ಆರಂಭದೊಂದಿಗೆ ರನ್‌ರೇಟ್‌ನಲ್ಲೂ ಭಾರೀ ಕುಸಿತ ಕಂಡಿದ್ದ ಇಂಗ್ಲೆಂಡ್, ಬಾಂಗ್ಲಾ ವಿರುದ್ಧ ಭರ್ಜರಿ ಗೆಲುವಿನೊಂದಿಗೆ ಪುಟಿದೆದ್ದಿದೆ. ಜೋಸ್ ಬಟ್ಲರ್ ಬಳಗ ಬ್ಯಾಟಿಂಗ್-ಬೌಲಿಂಗ್ ಸಂಘಟಿತ ಪ್ರದರ್ಶನದ ಲಯ ಮುಂದುವರಿಸುವ ಹಂಬಲದಲ್ಲಿದೆ.

ಡೇವಿಡ್ ಮಲಾನ್, ಜೋ ರೂಟ್ ಸತತ ಅರ್ಧಶತಕಗಳೊಂದಿಗೆ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಜಾನಿ ಬೇರ್‌ಸ್ಟೋ ತಂಡದ ಯಶಸ್ಸಿಗೆ ಉಪಯುಕ್ತ ಕೊಡುಗೆ ನೀಡಿದ್ದಾರೆ. ನಾಯಕ ಬಟ್ಲರ್, ಹ್ಯಾರಿ ಬ್ರೂಕ್ ಮತ್ತು ಲಿಯಾಮ್ ಲಿವಿಂಗ್‌ಸ್ಟೋನ್ ಒಳಗೊಂಡ ಮಧ್ಯಮ ಕ್ರಮಾಂಕ ಸದ್ದು ಮಾಡಬೇಕಿದೆ. ಬಾಂಗ್ಲಾದೇಶ ಎದುರು ಕ್ರಿಸ್ ವೋಕ್ಸ್, ಸ್ಯಾಮ್ ಕರ‌್ರನ್ ಉತ್ತಮ ಲಯದಲ್ಲಿ ಕಾಣಿಸಿಕೊಂಡಿದ್ದಾರೆ. ಮೊಯಿನ್ ಅಲಿ ಬದಲಿಗೆ ಸ್ಥಾನ ಪಡೆದ ರೀಸ್ ಟಾಪ್ಲೆ ಪರಿಣಾಮಕಾರಿಯಾಗಿದ್ದು, ಮತ್ತೊಂದು ಅವಕಾಶದ ನಿರೀಕ್ಷೆಯಲ್ಲಿದ್ದಾರೆ.

ವಿಶ್ವಕಪ್ ಮುಖಾಮುಖಿ-2

ಇಂಗ್ಲೆಂಡ್-2

ಆ್ಘಾನಿಸ್ತಾನ-0

ಏಕದಿನ ಸೆಣಸಾಟ-2

ಇಂಗ್ಲೆಂಡ್-2

ಆ್ಘಾನಿಸ್ತಾನ-0

ಪಂದ್ಯ ಆರಂಭ: ಮಧ್ಯಾಹ್ನ 2ಕ್ಕೆ

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್,