ನ್ಯೂಯಾರ್ಕ್: ಟೋಕಿಯೊ ಒಲಿಂಪಿಕ್ಸ್ ಮುಂದೂಡಿಕೆಯಿಂದಾಗಿ ದಿನಾಂಕ ಸಂಘರ್ಷ ಎದುರಿಸುತ್ತಿದ್ದ 2021ರ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಷಿಪ್ ಮರುನಿಗದಿಯಾಗಿದೆ. 2021ರ ಆಗಸ್ಟ್ನಲ್ಲಿ ನಡೆಯಬೇಕಾಗಿದ್ದ ಕ್ರೀಡಾಕೂಟವನ್ನು ಈಗ 2022ರ ಜುಲೈನಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ. ಅಮೆರಿಕದ ಒರೆಗೋನ್ನಲ್ಲೇ ಕ್ರೀಡಾಕೂಟ ನಡೆಯಲಿದೆ ಎಂದು ವಿಶ್ವ ಅಥ್ಲೆಟಿಕ್ಸ್ ಸಂಸ್ಥೆ ತಿಳಿಸಿದೆ.
ಒರೆಗೋನ್ನಲ್ಲಿ 2022ರ ಜುಲೈ 15ರಿಂದ 24ರವರೆಗೆ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಷಿಪ್ ನಡೆಯಲಿದೆ ಎಂದು ವಿಶ್ವ ಅಥ್ಲೆಟಿಕ್ಸ್ ಸಂಸ್ಥೆ ಬುಧವಾರ ಹೊಸ ವೇಳಾಪಟ್ಟಿಯನ್ನು ಪ್ರಕಟಿಸಿದೆ.
2022ರ ಜುಲೈ-ಆಗಸ್ಟ್ನಲ್ಲಿ ಯುರೋಪ್ನಲ್ಲಿ ಎರಡು ಪ್ರಮುಖ ಕ್ರೀಡಾಕೂಟಗಳು ಆಯೋಜನೆಗೊಂಡಿವೆ. ಅವುಗಳೆಂದರೆ ಬರ್ವಿುಂಗ್ಹ್ಯಾಂ ಕಾಮನ್ವೆಲ್ತ್ ಗೇಮ್್ಸ ಮತ್ತು ಮ್ಯೂನಿಚ್ನ ಯುರೋಪಿಯನ್ ಚಾಂಪಿಯನ್ಷಿಪ್. ಹೀಗಾಗಿ ಇವೆರಡು ಕ್ರೀಡಾಕೂಟಗಳ ಸಂಘಟಕರ ಜತೆಗೆ ರ್ಚಚಿಸಿದ ಬಳಿಕವೇ ವಿಶ್ವ ಅಥ್ಲೆಟಿಕ್ಸ್ ಸಂಸ್ಥೆ, ವಿಶ್ವ ಚಾಂಪಿಯನ್ಷಿಪ್ನ ಹೊಸ ದಿನಾಂಕವನ್ನು ನಿಗದಿಪಡಿಸಿದೆ. ಈ ಮೂಲಕ ಅಥ್ಲೀಟ್ಗಳಿಗೆ 2022ರ ಈ ಮೂರೂ ಪ್ರಮುಖ ಕ್ರೀಡಾಕೂಟಗಳಲ್ಲಿ ಸ್ಪರ್ಧಿಸುವ ಅವಕಾಶವನ್ನು ಮಾಡಿಕೊಟ್ಟಿದೆ.
ಬೇಸಗೆ ಋತುವಿನಲ್ಲಿ ಬರುವ ಈ ಮೂರೂ ಕ್ರೀಡಾಕೂಟಗಳು ಅಥ್ಲೀಟ್ಗಳಿಗೆ ಬಹುದೊಡ್ಡ ಅವಕಾಶವಾಗಿರುತ್ತದೆ ಎಂದು ವಿಶ್ವ ಅಥ್ಲೆಟಿಕ್ಸ್ ಅಧ್ಯಕ್ಷ ಸೆಬಾಸ್ಟಿಯನ್ ಕೋಯಿ ಹೇಳಿದ್ದಾರೆ.
ಡಿಸೆಂಬರ್ವರೆಗಿಲ್ಲ ಒಲಿಂಪಿಕ್ಸ್ ಅರ್ಹತೆ
ಲಂಡನ್: ಕರೊನಾ ಸೋಂಕಿನ ಕಾರಣದಿಂದಾಗಿ ವಿಶ್ವ ಅಥ್ಲೆಟಿಕ್ಸ್ ಸಂಸ್ಥೆ ಮುಂದಿನ ಡಿಸೆಂಬರ್ವರೆಗೆ ಒಲಿಂಪಿಕ್ಸ್ ಅರ್ಹತೆಯ ಅವಧಿಯನ್ನು ಅಮಾನತಿನಲ್ಲಿಟ್ಟಿದೆ. ಇದರಿಂದ ಏಪ್ರಿಲ್ 6ರಿಂದ ನವೆಂಬರ್ 30ರವರೆಗೆ ಯಾವುದೇ ಒಲಿಂಪಿಕ್ಸ್ ಅರ್ಹತಾ ಸ್ಪರ್ಧೆಗಳು ನಡೆಯುವುದಿಲ್ಲ. ಈ ಅವಧಿಯಲ್ಲಿ ಯಾವುದಾದರೂ ಸ್ಪರ್ಧೆಗಳು ನಡೆದು ಅದರಲ್ಲಿ ಅಥ್ಲೀಟ್ಗಳು ಒಲಿಂಪಿಕ್ಸ್ ಅರ್ಹತೆಯ ಮಾನದಂಡವನ್ನು ಮುಟ್ಟಿದರೂ ಅದನ್ನು ಪರಿಗಣಿಸಲಾಗುವುದಿಲ್ಲ. ಅಲ್ಲದೆ ಈ ಅವಧಿಯ ಸ್ಪರ್ಧೆಯ ಫಲಿತಾಂಶವನ್ನು ವಿಶ್ವ ರ್ಯಾಂಕಿಂಗ್ಗೂ ಪರಿಗಣಿಸಲಾಗುವುದಿಲ್ಲ. ಅಥ್ಲೆಟಿಕ್ಸ್ ಆಯೋಗ ಮತ್ತು ತನ್ನ ಅಂಗಸಂಸ್ಥೆಗಳ ಜತೆಗೆ ರ್ಚಚಿಸಿ ವಿಶ್ವ ಅಥ್ಲೆಟಿಕ್ಸ್ (ಡಬ್ಲು್ಯಎ) ಮಂಗಳವಾರ ಈ ತೀರ್ಮಾನ ಕೈಗೊಂಡಿದೆ. ಜತೆಗೆ ಟೋಕಿಯೊ ಒಲಿಂಪಿಕ್ಸ್ಗೆ ಈಗಾಗಲೆ ಅರ್ಹತೆ ಸಂಪಾದಿಸಿರುವ 6,500ಕ್ಕೂ ಅಧಿಕ ಕ್ರೀಡಾಪಟುಗಳು 2021ರ ಕೂಟದಲ್ಲೂ ಸ್ಪರ್ಧಿಸುವ ಅವಕಾಶ ಪಡೆಯಲಿದ್ದಾರೆ ಎಂದು ಐಒಸಿ ನೂತನ ಅರ್ಹತಾ ನಿಯಮಗಳಲ್ಲಿ ಸ್ಪಷ್ಟಪಡಿಸಲಾಗಿದೆ.