ಕ್ರೀಡೆ

ವಿಶ್ವಕಪ್​ ವಿಜೇತ ವನಿತೆಯರಿಗೆ ತವರು ಮನೆಯಲ್ಲಿ ಅದ್ದೂರಿ ಸ್ವಾಗತ

ನವದೆಹಲಿ: ಚೊಚ್ಚಲ ಮಹಿಳಾ ಏಕದಿನ ವಿಶ್ವಕಪ್​ ಗೆದ್ದ ಭಾರತ ತಂಡದ ಆಟಗಾರ್ತಿಯರು, ರಾಷ್ಟ್ರಪತಿ, ಪ್ರಧಾನಿಯಿಂದ ಅಭಿನಂದನೆಗಳನ್ನು ಸ್ವೀಕರಿಸಿದ ಬಳಿಕ ಶುಕ್ರವಾರ ತವರು ನಗರ, ಮನೆಗಳಿಗೆ ತೆರಳಿದಾಗ ಅದ್ದೂರಿ ಸ್ವಾಗತವನ್ನು ಪಡೆದರು.

ಜೆಮೀಮಾ ರೋಡ್ರಿಗಸ್​, ರಾಧಾ ಯಾದವ್​ ಮತ್ತು ಉಪನಾಯಕಿ ಸ್ಮೃತಿ ಮಂದನಾಗೆ ಮುಂಬೈನಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಡ್ನಾವಿಸ್​ ಮತ್ತು ಉಪಮುಖ್ಯಮಂತ್ರಿ ಅಜಿತ್​ ಪವಾರ್​ ತಲಾ 2.25 ಕೋಟಿ ರೂ. ನೀಡಿ ಸನ್ಮಾನಿಸಿದರು.

ಶ್ರೀ ಚರಣಿಗೆ ಹೈದರಾಬಾದ್​ನಲ್ಲಿ ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು 2.5 ಕೋಟಿ ರೂ, ಒಂದು ಸಾವಿರ ಚದರ ಅಡಿ ನಿವೇಶನ ಮತ್ತು ಸರ್ಕಾರಿ ಉದ್ಯೋಗದ ಆರ್​ ನೀಡಿದರು. ರಿಚಾ ಘೋಷ್​ಗೆ ಬಂಗಾಳದ ಸಿಲಿಗುರಿಯಲ್ಲಿ ತೆರೆದ ಜೀಪಿನ ಮೆರವಣಿಗೆಯ ಸ್ವಾಗತ ನೀಡಲಾಯಿತು. ಹರ್ಲೀನ್​ ಡಿಯೋಲ್​ಗೆ ಪಂಜಾಬ್​ನ ಚಂಡೀಗಢದಲ್ಲಿ ಅಭಿಮಾನಿಗಳಿಂದ ಪ್ರೀತಿ ಸ್ವಾಗತ ದೊರೆಯಿತು.