ಕೊಲಂಬೊ: ಭಾರತ, ಆತಿಥೇಯ ಶ್ರೀಲಂಕಾ ಮತ್ತು ದಣ ಆಫ್ರಿಕಾವನ್ನು ಒಳಗೊಂಡ ಮಹಿಳೆಯರ ತ್ರಿಕೋನ ಏಕದಿನ ಸರಣಿಗೆ ಶನಿವಾರ ಚಾಲನೆ ಸಿಗಲಿದೆ. ಹಾಲಿ ವರ್ಷದ ಮಹಿಳೆಯರ ವಿಶ್ವಕಪ್ ಪೂರ್ವಸಿದ್ಧತೆಗೆ ವೇದಿಕೆಯಾಗಿರುವ ಟೂರ್ನಿಯಲ್ಲಿ ಭಾರತ ಮತ್ತು ಶ್ರೀಲಂಕಾ ತಂಡಗಳ ನಡುವೆ ಉದ್ಘಾಟನಾ ಪಂದ್ಯ ನಡೆಯಲಿದೆ.
ಹರ್ಮಾನ್ಪ್ರೀತ್ ಕೌರ್ ಸಾರಥ್ಯದ ಭಾರತ ತಂಡ ಇತ್ತೀಚೆಗೆ ವುಮೆನ್ಸ್ ಪ್ರೀಮಿಯರ್ ಲೀಗ್ನಲ್ಲಿ ಮಿಂಚಿದ ವೇಗಿ ಕಾಶ್ವಿ ಗೌತಮ್, ಶ್ರೀ ಚರಣಿ, ಪ್ರತಿಕಾ ರಾವಲ್ರಂಥ ಹೊಸಮುಖಗಳಿಂದ ಕೂಡಿದೆ. ಉಳಿದಂತೆ ಅನುಭವಿ ಆಟಗಾರ್ತಿಯರಾದ ಸ್ಮೃತಿ ಮಂದನಾ, ಹರ್ಲೀನ್ ಡಿಯೋಲ್, ಯಸ್ತಿಕಾ ಭಾಟಿಯಾ, ರಿಚಾ ಘೋಷ್, ಸ್ನೇಹಾ ರಾಣಾ, ಜೆಮೀಮಾ ರೋಡ್ರಿಗಸ್, ದೀಪ್ತಿ ಶರ್ಮ ಬಲ ತುಂಬಲಿದ್ದಾರೆ. ಆತಿಥೇಯ ಶ್ರೀಲಂಕಾ ತಂಡದಲ್ಲಿ ಕೆಲ ಪ್ರಮುಖ ಬದಲಾವಣೆಗಳಾಗಿವೆ.
ಮೊದಲ ಪಂದ್ಯ: ಭಾರತ-ಶ್ರೀಲಂಕಾ, ಆರಂಭ: ಬೆಳಗ್ಗೆ 10.00, ನೇರಪ್ರಸಾರ: ಫ್ಯಾನ್ಕೋಡ್ ಆ್ಯಪ್.