ಶಾರ್ಜಾ: ಮಹಿಳೆಯರ ಮಿನಿ ಐಪಿಎಲ್ ಎಂದೇ ಹೆಸರಾಗಿರುವ ಮಹಿಳಾ ಟಿ20 ಚಾಲೆಂಜ್ ಟೂರ್ನಿಗೆ ಬುಧವಾರ ಚಾಲನೆ ಸಿಗಲಿದೆ. ಸ್ಟಾರ್ ಆಟಗಾರ್ತಿ ಹರ್ವನ್ ಪ್ರೀತ್ ಕೌರ್ ನಾಯಕತ್ವದ ಹಾಲಿ ಚಾಂಪಿಯನ್ ಸೂಪರ್ನೋವಾಸ್ ಹಾಗೂ ಭಾರತ ತಂಡದ ಮಾಜಿ ನಾಯಕಿ ಮಿಥಾಲಿ ರಾಜ್ ಸಾರಥ್ಯದ ಹಾಲಿ ರನ್ನರ್ಅಪ್ ವೆಲಾಸಿಟಿ
ಕಳೆದ ಫೆಬ್ರವರಿ ಹಾಗೂ ಮಾರ್ಚ್ ತಿಂಗಳಲ್ಲಿ ನಡೆದ ಮಹಿಳಾ ಟಿ20 ವಿಶ್ವಕಪ್ ಬಳಿಕ ನಡೆಯುತ್ತಿರುವ ಮೊದಲ ಪ್ರಮುಖ ಮಹಿಳಾ ಟೂರ್ನಿ ಇದಾಗಿದೆ. ಕಳೆದ 7 ತಿಂಗಳಿಂದಲೂ ಕ್ರಿಕೆಟ್ ಚಟುವಟಿಕೆಗಳಿಂದ ದೂರ ಉಳಿದಿದ್ದ ಮಹಿಳಾ ಆಟಗಾರ್ತಿಯರಿಗೆ ಈ ಲೀಗ್ ಮಹತ್ವ ಪಡೆದಿದೆ.
ನಾಲ್ಕು ಪಂದ್ಯಗಳ ಟೂರ್ನಿಯಲ್ಲಿ 3 ತಂಡಗಳು ಪ್ರಶಸ್ತಿಗಾಗಿ ಸೆಣಸಲಿವೆ. ಮೂರು ತಂಡಗಳು ಪರಸ್ಪರ ಸೆಣಸಲಿದ್ದು, ಅಗ್ರ ಎರಡು ತಂಡಗಳು ನವೆಂಬರ್ 9 ರಂದು ನಡೆಯಲಿರುವ ಫೈನಲ್ ಪಂದ್ಯದಲ್ಲಿ ಎದುರಾಗಲಿವೆ. ಭಾರತ ಅಲ್ಲದೆ, ಶ್ರೀಲಂಕಾ, ಬಾಂಗ್ಲಾದೇಶ, ನ್ಯೂಜಿಲೆಂಡ್ ತಂಡದ ಆಟಗಾರ್ತಿಯರು ಟೂರ್ನಿಯಲ್ಲಿ ಭಾಗವಹಿಸುತ್ತಿದ್ದಾರೆ.
ಹರ್ವನ್ ಪ್ರೀತ್ ಕೌರ್ ಸಾರಥ್ಯದ ಸೂಪರ್ನೋವಾಸ್ ತಂಡವೇ ಕಳೆದ ಎರಡು ಬಾರಿಯೂ ಚಾಂಪಿಯನ್ ಆಗಿತ್ತು. ಮಹಿಳಾ ಕ್ರಿಕೆಟ್ಗೆ ಉತ್ತೇಜನ ನೀಡುವ ಸಲುವಾಗಿ 2018ರಿಂದ ಬಿಸಿಸಿಐ ಮಹಿಳೆಯರಿಗೂ ಟಿ20 ಟೂರ್ನಿ ಆಯೋಜಿಸುತ್ತಾ ಬಂದಿದೆ.
ಮಹಿಳಾ ಮಿನಿ ಐಪಿಎಲ್ನಲ್ಲಿ ಬೆಂಗಳೂರಿನ ಅನಘಾ
ಬೆಂಗಳೂರು: ಮಹಿಳಾ ಕ್ರಿಕೆಟ್ ಈಗ ಅತ್ಯುತ್ತಮ ಅಭಿವೃದ್ಧಿ ಕಾಣುತ್ತಿದ್ದು, ಇದಕ್ಕೆ ಕರ್ನಾಟಕದ ಕೊಡುಗೆಯೂ
ಈಜು, ಕರಾಟೆಯಲ್ಲಿ ಸೈ ಎನಿಸಿಕೊಂಡಿರುವ ಅನಘಾ, ಕ್ರಿಕೆಟ್ನಲ್ಲಿ ರಾಷ್ಟ್ರಮಟ್ಟದ ಆಟಗಾರ್ತಿಯಾಗುವ ಸೂಚನೆ ನೀಡಿದ್ದಾರೆ. ತಂದೆ ಮುರಳಿಪ್ರಸಾದ್ ಹಾಗೂ ಬಾಲ್ಯದ ಕೋಚ್, ಹೆರಾನ್ಸ್ ಕ್ಲಬ್ನ ಮುರಳೀಧರ್ ಅವರ ಮಾರ್ಗದರ್ಶನದಲ್ಲಿ ಪಳಗಿರುವ ಅನಘಾ, ಕೇವಲ 5 ವರ್ಷದ ಅಂತರದಲ್ಲಿ ಕರ್ನಾಟಕ ರಾಜ್ಯ ಜೂನಿಯರ್, ಸೀನಿಯರ್ ತಂಡಗಳನ್ನು ಪ್ರತಿನಿಧಿಸಿದ್ದಾರೆ. ಎಡಗೈ ಸ್ಪಿನ್ನರ್ ಆಗಿರುವ ಅನಘಾ, ದೇಶೀಯ ಕ್ರಿಕೆಟ್ನಲ್ಲಿ ಎಲ್ಲ ವಯೋಮಿತಿಯಿಂದ 300ಕ್ಕೂ ಹೆಚ್ಚು ವಿಕೆಟ್ ಕಬಳಿಸಿದ್ದಾರೆ. ಬ್ಯಾಟಿಂಗ್ನಲ್ಲಿ ಸೈ ಎನಿಸಿಕೊಂಡಿರುವ ಅನಘಾ, ಮಧ್ಯಮ ಕ್ರಮಾಂಕದಲ್ಲಿ ತಂಡಕ್ಕೆ ಆಧಾರವಾಗಬಲ್ಲರು. 2 ವರ್ಷಗಳಿಂದ 16, 19, 23 ವಯೋಮಿತಿ ರಾಜ್ಯದಲ್ಲಿ ಗಮನಾರ್ಹ ನಿರ್ವಹಣೆ ತೋರಿದ್ದಾರೆ. 16 ವಯಸ್ಸಿನಲ್ಲೇ ಸೀನಿಯರ್ ತಂಡದಲ್ಲೂ ಸ್ಥಾನ ಪಡೆದ ಅನಘಾ ತನಗಿಂತ ಹಿರಿಯ ಆಟಗಾರ್ತಿಯರ ಎದುರು ಬಲಿಷ್ಠ ನಿರ್ವಹಣೆ ಮೂಲಕ ಗಮನಸೆಳೆದಿದ್ದಾರೆ. ಸದ್ಯ ರಣಜಿ ಮಾಜಿ ಆಟಗಾರ ಕೆ. ಜಸ್ವಂತ್ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ.
ಮಿಥಾಲಿ ತಂಡದಲ್ಲಿ ಅನಘಾ: ಹಿರಿಯ ಆಟಗಾರ್ತಿ ಮಿಥಾಲಿ ರಾಜ್ ನಾಯಕತ್ವದ ವೆಲಾಸಿಟಿ ತಂಡದಲ್ಲಿ ಅನಘಾ ಸ್ಥಾನ ಪಡೆದಿದ್ದಾರೆ. ಕರ್ನಾಟಕದ ಮತ್ತೋರ್ವ ಆಟಗಾರ್ತಿ ವೇದಾ ಕೃಷ್ಣಮೂರ್ತಿ ಕೂಡ ಇದೇ ತಂಡದಲ್ಲಿದ್ದಾರೆ. ಮಿಥಾಲಿ ರಾಜ್ ರಾಷ್ಟ್ರೀಯ ತಂಡಕ್ಕೆ ಪದಾರ್ಪಣೆ ಮಾಡಿದಾಗ ಅನಘಾ ಹುಟ್ಟೇ ಇರಲಿಲ್ಲ. ಇದೀಗ ಅವ ರೊಂದಿಗೆ ಡಗೌಟ್ ಹಂಚಿಕೊಳ್ಳುವ ಅವಕಾಶ ಒದಗಿ ಬಂದಿದೆ.
ಮುಂದಿನ ದಿನಗಳಲ್ಲಿ ಮತ್ತಷ್ಟು ಸಾಧನೆ ಮಾಡುತ್ತಾಳೆ ಎಂಬ ವಿಶ್ವಾಸವಿದೆ. ಅವರ ಕಠಿಣ ಪರಿಶ್ರಮವೇ ಇಲ್ಲಿವರೆಗೂ ತಂದು ನಿಲ್ಲಿಸಿದೆ. ಭವಿಷ್ಯದಲ್ಲಿ ಉತ್ತಮ ಸಾಧನೆ ಮಾಡಲಿ ಎಂಬುದೇ ನಮ್ಮ ಆಶಯ. ದಿಗ್ಗಜೆ ಮಿಥಾಲಿ ರಾಜ್ ಜತೆ ಅನಘಾ ಡಗೌಟ್ ಹಂಚಿಕೊಳ್ಳುತ್ತಿರುವುದು ಸಂತೋಷದ ವಿಷಯ. | ಮುರಳಿಪ್ರಸಾದ್ ಅನಘಾ ತಂದೆ