ಮಹಿಳಾ ಕಬಡ್ಡಿ ವಿಶ್ವಕಪ್​: ಭಾರತಕ್ಕೆ ಹ್ಯಾಟ್ರಿಕ್​ ಜಯ, ಸೆಮೀಸ್​ ಪ್ರವೇಶ 
ಕ್ರೀಡೆ

ಮಹಿಳಾ ಕಬಡ್ಡಿ ವಿಶ್ವಕಪ್​: ಭಾರತಕ್ಕೆ ಹ್ಯಾಟ್ರಿಕ್​ ಜಯ, ಸೆಮೀಸ್​ ಪ್ರವೇಶ

ಬೆಂಗಳೂರು: ಭಾರತ ತಂಡ ಮಹಿಳಾ ಕಬಡ್ಡಿ ವಿಶ್ವಕಪ್​ನಲ್ಲಿ (Womens kabaddi world cup) ಹ್ಯಾಟ್ರಿಕ್​ ಗೆಲುವಿನ ಸಾಧನೆ ಮಾಡಿದೆ. ಈ ಮೂಲಕ ಸೆಮಿಫೈನಲ್​ ಪ್ರವೇಶವನ್ನು ಖಾತ್ರಿಪಡಿಸಿಕೊಂಡಿದೆ.

ಬಾಂಗ್ಲಾದೇಶದ ಢಾಕಾದಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಭಾರತ ತಂಡ ಗುರುವಾರ ನಡೆದ ತನ್ನ 3ನೇ ಲೀಗ್​ ಪಂದ್ಯದಲ್ಲಿ ಜರ್ಮನಿ ವಿರುದ್ಧ 63-22 ಅಂಕಗಳಿಂದ ಭರ್ಜರಿ ಗೆಲುವು ಸಾಧಿಸಿತು. ಭಾರತ ತಂಡ ಮೊದಲೆರಡು ಪಂದ್ಯಗಳಲ್ಲಿ ಥಾಯ್ಲೆಂಡ್​ ಮತ್ತು ಆತಿಥೇಯ ಬಾಂಗ್ಲಾದೇಶ ವಿರುದ್ಧ ಗೆದ್ದಿತ್ತು.

ಶುಕ್ರವಾರ ನಡೆಯಲಿರುವ ತನ್ನ 4ನೇ ಹಾಗೂ ಕೊನೇ ಲೀಗ್​ ಪಂದ್ಯದಲ್ಲಿ ಉಗಾಂಡ ವಿರುದ್ಧ ಆಡಲಿದೆ.