ಕ್ರೀಡೆ

ಮಹಿಳೆಯರ ಏಷ್ಯಾಕಪ್ ಟಿ20 ಟೂರ್ನಿ: ಇಂದು ಭಾರತ-ಬಾಂಗ್ಲಾ ಮೊದಲ ಸೆಮೀಸ್

ಡಂಬುಲಾ: ಹ್ಯಾಟ್ರಿಕ್ ಗೆಲುವಿನಿಂದ ಬೀಗುತ್ತಿರುವ ಹಾಲಿ ಚಾಂಪಿಯನ್ ಭಾರತ ಹಾಗೂ ರನ್ನರ್ ಅಪ್ ಬಾಂಗ್ಲಾದೇಶ ತಂಡಗಳು ಮಹಿಳೆಯರ ಟಿ20 ಏಷ್ಯಾಕಪ್ ಟೂರ್ನಿಯ ಸೆಮಿೈನಲ್‌ನಲ್ಲಿ ಮುಖಾಮುಖಿಯಾಗಲಿವೆ. ಶುಕ್ರವಾರ ನಡೆಯಲಿರುವ ಪಂದ್ಯದಲ್ಲಿ ಹರ್ಮಾನ್‌ಪ್ರೀತ್ ಕೌರ್ ಪಡೆ ೇವರಿಟ್ ಆಗಿ ಕಣಕ್ಕಿಳಿಲಿದ್ದು, ಭಾರತ ಸತತ 9ನೇ ಬಾರಿ ೈನಲ್‌ಗೇರುವ ತವಕದಲ್ಲಿದೆ.

ಲೀಗ್‌ನ ಮೂರು ಪಂದ್ಯಗಳಲ್ಲಿ ಜಯಿಸಿ ಎ ಗುಂಪಿನ ಅಗ್ರಸ್ಥಾನಿಯಾಗಿರುವ ಭಾರತ ತಂಡಕ್ಕೆ ಶೆಾಲಿ ವರ್ಮ ಹಾಗೂ ಉಪನಾಯಕಿ ಸ್ಮತಿ ಮಂದನಾ ಉತ್ತಮ ಆರಂಭ ಒದಗಿಸುವ ನಿರೀಕ್ಷೆಯಲ್ಲಿದ್ದಾರೆ. ಶೆಾಲಿ ವರ್ಮ (158 ರನ್) ಟೂರ್ನಿಯ 2ನೇ ಗರಿಷ್ಠ ರನ್ ಸ್ಕೋರರ್ ಆಗಿದ್ದು, ಭರ್ಜರಿ ಾರ್ಮ್‌ನಲ್ಲಿದ್ದಾರೆ. ನೇಪಾಳ ವಿರುದ್ಧ ಪಂದ್ಯದಲ್ಲಿ ಮಧ್ಯಮ ಕ್ರಮಾಂಕ ಬ್ಯಾಟರ್‌ಗಳಿಗೆ ಅವಕಾಶ ನೀಡಿದ್ದ ಸ್ಮತಿ ಮಂದನಾ ಆರಂಭಿಕರಾಗಿ ಮತ್ತೆ ಕಣಕ್ಕಿಳಿಯಲಿದ್ದಾರೆ. ವಿಶ್ರಾಂತಿ ಪಡೆದಿದ್ದ ಹರ್ಮಾನ್‌ಪ್ರೀತ್ ಸಹ ತಂಡಕ್ಕೆ ಮರಳಲಿದ್ದು, ಮತ್ತೊಮ್ಮೆತಂಡವನ್ನು ಯಶಸ್ವಿಯಾಗಿ ಚಾಂಪಿಯನ್ ಪಟ್ಟಕ್ಕೇರಿಸುವ ತವಕದಲ್ಲಿದ್ದಾರೆ. ರಿಚಾ ೋಷ್ ಸಹ ಉತ್ತಮ ಲಯದಲ್ಲಿದ್ದು, ಉತ್ತಮ ಆರಂಭ ದೊರೆತರೆ ಬೃಹತ್ ಮೊತ್ತ ಪೇರಿಸುವ ಸಾಧ್ಯತೆಗಳಿವೆ.

ರೇಣುಕಾ ಸಿಂಗ್, ಪೂಜಾ ವಸಕರ್ ಹಾಗೂ ಆರುಂಧತಿ ರೆಡ್ಡಿ ಬೌಲಿಂಗ್‌ಗೆ ಆಲ್ರೌಂಡರ್ ದೀಪ್ತಿ ಶರ್ಮ ಬಲ ತುಂಬಲಿದ್ದಾರೆ. 7 ಬಾರಿ ಚಾಂಪಿಯನ್ ಭಾರತ, ಟೂರ್ನಿಗೂ ಮುನ್ನ ಮೇನಲ್ಲಿ ನಡೆದ ಟಿ20 ಸರಣಿಯಲ್ಲಿ ಬಾಂಗ್ಲಾದೇಶ ವಿರುದ್ಧ ಕ್ಲೀನ್‌ಸ್ವೀಪ್ ಸಾಧಿಸಿತ್ತು. ಆದರೆ ಬಾಂಗ್ಲಾದೇಶ ಬೌಲರ್‌ಗಳ ಎದುರು ಭಾರತ ಬ್ಯಾಟರ್‌ಗಳಿಗೆ ನೈಜ ಸವಾಲು ಎದುರಾಗಲಿದೆ. ನಹೀದಾ ಅಖ್ತರ್, ಲೆಗ್ ಸ್ಪಿನ್ನರ್ ರಬೇಯಾ ಖಾನ್ ತಲಾ ಐದು ವಿಕೆಟ್ ಕಬಳಿಸಿದ್ದಾರೆ.

ಮುಖಾಮುಖಿ-13

ಭಾರತ-11

ಬಾಂಗ್ಲಾದೇಶ-2

ಆರಂಭ: ಮಧ್ಯಾಹ್ನ 2.00

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಡಿಸ್ನಿ ಹಾಟ್‌ಸ್ಟಾರ್.