ಕ್ರೀಡೆ

ಇಂದಿನಿಂದ ಮಹಿಳೆಯರ ಟಿ20 ತ್ರಿಕೋನ ಸರಣಿ

ಕ್ಯಾನ್​ಬೆರಾ: ಮುಂದಿನ ತಿಂಗಳು ಆರಂಭವಾಗಲಿರುವ ಮಹಿಳೆಯರ ಟಿ20 ವಿಶ್ವಕಪ್​ಗೆ ಪೂರ್ವಭಾವಿಯಾಗಿ ಭಾರತ, ಇಂಗ್ಲೆಂಡ್ ಮತ್ತು ಆತಿಥೇಯ ಆಸ್ಟ್ರೇಲಿಯಾ ಒಳಗೊಂಡ ತ್ರಿಕೋನ ಸರಣಿ ಶುಕ್ರವಾರದಿಂದ ನಡೆಯಲಿದೆ.

ಮೊದಲ ಹಣಾಹಣಿಯಲ್ಲಿ ಭಾರತ ತಂಡ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ. 2017ರ ಏಕದಿನ ವಿಶ್ವಕಪ್ ಫೈನಲ್​ನಲ್ಲಿ ಇಂಗ್ಲೆಂಡ್ ಎದುರು ಕೇವಲ 9 ರನ್​ನಿಂದ ಭಾರತ ತಂಡ ಸೋಲನುಭವಿಸಿತ್ತು.

ಇದೀಗ ಇಂಗ್ಲೆಂಡ್ ವಿರುದ್ಧವೇ ಟಿ20 ವಿಶ್ವಕಪ್​ಗೆ ಪೂರ್ವಭ್ಯಾಸ ಕೈಗೊಳ್ಳುವ ಅವಕಾಶ ಲಭಿಸಿದೆ. ಲೀಗ್​ನಲ್ಲಿ ಡಬಲ್ ರೌಂಡ್ ರಾಬಿನ್ ಬಳಿಕ ಫೆ. 12ರಂದು ಮೆಲ್ಬೋರ್ನ್​ನಲ್ಲಿ ಫೈನಲ್ ನಡೆಯಲಿದೆ. ಫೆ.21ರಿಂದ ಮಾರ್ಚ್ 8ರವರೆಗೆ ಟಿ20 ವಿಶ್ವಕಪ್ ನಡೆಯಲಿದೆ.