ಕ್ರೀಡೆ

ಇಂದು ಭಾರತ- ಆಸೀಸ್ ಮಹಿಳೆಯರ ಮೊದಲ ಟಿ20: ಪಂದ್ಯದ ಆರಂಭ, ನೇರಪ್ರಸಾರ ಮಾಹಿತಿ ಇಲ್ಲಿದೆ!

ಮುಂಬೈ: ಏಕದಿನ ಸರಣಿಯಲ್ಲಿ ವೈಟ್‌ವಾಷ್ ಮುಖಭಂಗ ಅನುಭವಿಸಿರುವ ಭಾರತ ತಂಡ, ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧದ 3 ಪಂದ್ಯಗಳ ಮಹಿಳಾ ಟಿ20 ಸರಣಿಗೆ ಸಜ್ಜಾಗಿದೆ. ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ಶುಕ್ರವಾರ ಮೊದಲ ಟಿ20 ಪಂದ್ಯ ನಡೆಯಲಿದ್ದು, ಹರ್ಮಾನ್‌ಪ್ರೀತ್ ಬಳಗ ಶುಭಾರಂಭದ ನಿರೀಕ್ಷೆಯಲ್ಲಿದೆ. ಸೆಪ್ಟೆಂಬರ್-ಅಕ್ಟೋಬರ್‌ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ತಯಾರಿಗೆ ಈ ಸರಣಿ ಪ್ರಮುಖ ವೇದಿಕೆ ಎನಿಸಿದೆ.

ಆದರೆ ಇತ್ತೀಚೆಗೆ ಇಂಗ್ಲೆಂಡ್ ವಿರುದ್ಧ ಟಿ20 ಸರಣಿ ಸೋಲು, ಏಕದಿನ ಸರಣಿಯಲ್ಲಿನ ಫೀಲ್ಡಿಂಗ್ ವೈಲ್ಯ ಜತೆಗೆ ಹರ್ಮಾನ್‌ಪ್ರೀತ್ ಕೌರ್ ಬ್ಯಾಟಿಂಗ್ ವೈಲ್ಯ ತಂಡಕ್ಕೆ ಪ್ರಮುಖ ಹಿನ್ನಡೆ ತಂದಿದೆ. ಇತ್ತ ಆಸ್ಟ್ರೇಲಿಯಾ ತಂಡ ಸತತ ಮೂರು ಬಾರಿ ಟಿ20ವಿಶ್ವಕಪ್ ಪ್ರಶಸ್ತಿ ಜಯಿಸಿದೆ. 2022ರಲ್ಲಿ ತವರಿನಲ್ಲಿ ಕೊನೆಯದಾಗಿ ನಡೆದ ಆಸೀಸ್ ವಿರುದ್ಧದ 5 ಪಂದ್ಯಗಳ ಟಿ20 ಸರಣಿಯಲ್ಲಿ 0-4 ರಿಂದ ಭಾರತ ಸೋಲುಂಡಿದೆ. ಇದುವರೆಗೂ ಉಭಯ ತಂಡಗಳು 31 ಬಾರಿ ಮುಖಾಮುಖಿಯಾಗಿದ್ದು, ಭಾರತ 6 ಬಾರಿ ಗೆದ್ದರೆ, ಆಸ್ಟ್ರೇಲಿಯಾ 23 ಜಯದೊಂದಿಗೆ ಪ್ರಾಬಲ್ಯ ಸಾಧಿಸಿದೆ. 1 ಪಂದ್ಯ ಟೈಯಾಗಿದ್ದು, ಇನ್ನೊಂದು ರದ್ದುಗೊಂಡಿದೆ.

ಆರಂಭ: ರಾತ್ರಿ 7.30, ನೇರಪ್ರಸಾರ: ಸ್ಪೋರ್ಟ್ಸ್ 18, ಜಿಯೋಸಿನಿಮಾ.

ಮುಖಾಮುಖಿ- 31

ಭಾರತ- 6

ಆಸ್ಟ್ರೇಲಿಯಾ-23

ಟೈ-1

ರದ್ದು-1