ಕ್ರೀಡೆ

2027ರ ವಲ್ಡ್​ಕಪ್​ ಆಡ್ತಾರಾ ರೋಹಿತ್​ ಶರ್ಮಾ​: ಬ್ಯಾಲ್ಯದ ಕೋಚ್​ ಹೇಳಿದ್ದೇನು? Rohit Sharma

Rohit Sharma: 2027ರ ಅಕ್ಟೋಬರ್ ಮತ್ತು ನವೆಂಬರ್‌ನಲ್ಲಿ ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಮತ್ತು ನಮೀಬಿಯಾದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್​ ಶರ್ಮಾ ಆಡಬೇಕು ಎಂದು ಅವರ ಬಾಲ್ಯದ ಕೋಚ್ ದಿನೇಶ್ ಲಾಡ್ ಹೇಳಿದ್ದಾರೆ.

ಈ ಬಗ್ಗೆ ಐಎಎನ್‌ಎಸ್‌ ಜತೆ ಮಾತನಾಡಿದ ಲಾಡ್​, ರೋಹಿತ್ ಶರ್ಮಾ ಖಂಡಿತವಾಗಿಯೂ 2027ರ ಏಕದಿನ ವಿಶ್ವಕಪ್‌ ಆಡಬೇಕು. ಟ್ರೋಫಿ ಗೆಲ್ಲುವುದು ಅವರ ಕನಸಾಗಿತ್ತು, ಮತ್ತು 2011ರ ವಿಜೇತ ತಂಡದ ಭಾಗವಾಗಲು ಅವರಿಗೆ ಅವಕಾಶ ಸಿಕ್ಕಿರಲಿಲ್ಲ ಎಂದು ತಿಳಿಸಿದರು.

ಅಲ್ಲದೆ, ಮುಂದೂವರೆದು ಮಾತನಾಡಿದ ರೋಹಿತ್​ ಬ್ಯಾಲ್ಯದ ಕೋಚ್​, ರೋಹಿತ್ ಭವಿಷ್ಯದ ಬಗ್ಗೆ ಸಂಶಯ ವ್ಯಕ್ತಪಡಿಸಿದರು. ರೋಹಿತ್​ ಭಾರತ ತಂಡವನ್ನು ಮುನ್ನಡೆಸಬೇಕೆ ಅಥವಾ ಬೇಡವೇ ಎಂಬುದನ್ನು ಬಿಸಿಸಿಐ ಮತ್ತು ಆಯ್ಕೆದಾರರು ನಿರ್ಧರಿಸಬೇಕು. ಆದರೆ, ರೋಹಿತ್​ ಇನ್ನೂ 2027ರ ವಿಶ್ವಕಪ್ ತಂಡದ ಭಾಗವಾಗಬೇಕೆಂಬ ಹಸಿವು ಮತ್ತು ದೃಢಸಂಕಲ್ಪ ಹೊಂದಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.

2025 ಆರಂಭದಲ್ಲಿ ರೋಹಿತ್ ನಾಯಕತ್ವದಲ್ಲಿ ಭಾರತ ಚಾಂಪಿಯನ್ಸ್ ಟ್ರೋಫಿಯನ್ನು ಮುಂಡಿಗೇರಿಸಿಕೊಂಡಿತ್ತು. ಇಂಗ್ಲೆಂಡ್ ಪ್ರವಾಸಕ್ಕೂ ಮುನ್ನ ಮೇ ತಿಂಗಳಲ್ಲಿ ರೋಹಿತ್​ ಶರ್ಮಾ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದರು. ಕಳೆದ ವರ್ಷ ಬಾರ್ಬಡೋಸ್‌ನಲ್ಲಿ ನಡೆದ ಟಿ20 ವಿಶ್ವಕಪ್ ಗೆಲುವಿನ ನಂತರ 38 ವರ್ಷದ ರೋಹಿತ್ ಟಿ20 ಕ್ರಿಕೆಟ್‌ಗೆ ಗುಡ್​ ಬೈ ಹೇಳಿದರು.

ಭಾರತದ ಪರ 273 ಏಕದಿನ ಪಂದ್ಯಗಳಲ್ಲಿ, ರೋಹಿತ್ 48.76 ಸರಾಸರಿಯಲ್ಲಿ 11,168 ರನ್ ಗಳಿಸಿದ್ದಾರೆ, ಇದರಲ್ಲಿ 32 ಶತಕಗಳು ಮತ್ತು 58 ಅರ್ಧಶತಕಗಳು ಸೇರಿವೆ. ಒನ್​ಡೇ ಮಾದರಿಯಲ್ಲಿ ಮೂರು ದ್ವಿಶತಕಗಳನ್ನು ಗಳಿಸಿದ ವಿಶಿಷ್ಟ ದಾಖಲೆಯನ್ನು ಹಿಟ್​ಮ್ಯಾನ್​ ಹೊಂದಿದ್ದಾರೆ.(ಏಜೆನ್ಸೀಸ್​)