IPL 2025: ಮಾ.22ರಿಂದ ಶುರುವಾದ ಐಪಿಎಲ್ 18ನೇ ಆವೃತ್ತಿಯ ಪಂದ್ಯಗಳು ಕ್ರಿಕೆಟ್ ಅಭಿಮಾನಿಗಳ ಉತ್ಸಾಹ, ಕುತೂಹಲವನ್ನು ಮತ್ತಷ್ಟು ದುಪ್ಪಟ್ಟಾಗಿಸಿದೆ. ಒಂದಕ್ಕಿಂತ ಒಂದು ಪಂದ್ಯ ರೋಚಕತೆಯತ್ತ ಸಾಗುತ್ತಿದ್ದು, ನೋಡುಗರಲ್ಲಿ ಕೌತುಕ ಹುಟ್ಟುಹಾಕುತ್ತಿದೆ. ಪ್ರಸ್ತುತ 10 ಬಲಿಷ್ಠ ತಂಡಗಳ ಪೈಕಿ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಡೆಲ್ಲಿ ಕ್ಯಾಪಿಟಲ್ಸ್, ಪಂಜಾಬ್ ಕಿಂಗ್ಸ್, ಗುಜರಾತ್ ಟೈಟನ್ಸ್ ತಂಡಗಳು ಉತ್ತಮ ಆಲ್ರೌಂಡ್ ಪ್ರದರ್ಶನ ನೀಡುವುದರ ಜತೆಗೆ ಅಂಕಪಟ್ಟಿಯ ಟಾಪ್ ನಾಲ್ಕು ಸ್ಥಾನಗಳಿಗೆ ಭಾರೀ ಪೈಪೋಟಿ ನೀಡುತ್ತಿವೆ.
ಐಪಿಎಲ್ ಆರಂಭದ ಪಂದ್ಯದಿಂದ ನಿನ್ನೆಯ (ಏ.15) ಪಂಜಾಬ್ ಕಿಂಗ್ಸ್ ಮತ್ತು ಕೆಕೆಆರ್ ನಡುವಿನ ಹಲವು ಪಂದ್ಯಗಳು ರೋಚಕತೆಗೆ ಸಾಕ್ಷಿಯಾಗುತ್ತಿವೆ. ಆರ್ಸಿಬಿ, ಪಂಜಾಬ್ ಕಿಂಗ್ಸ್, ಡೆಲ್ಲಿ ಕ್ಯಾಪಿಟಲ್ಸ್, ಕೆಕೆಆರ್, ಲಖನೌ ಸೂಪರ್ ಜೈಂಟ್ಸ್ ತಂಡಗಳು ಅದ್ಭುತ ಆಲ್ರೌಂಡ್ ಪ್ರದರ್ಶನ ನೀಡುವ ಮೂಲಕ ಕ್ರಿಕೆಟ್ ಪ್ರೇಮಿಗಳ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿವೆ. ಆಯಾ ತಂಡದ ಬೌಲರ್ಗಳು ಮತ್ತು ಬ್ಯಾಟರ್ಗಳು ಒಬ್ಬರಿಗಿಂತ ಮತ್ತೊಬ್ಬರು ಅತ್ಯುತ್ತಮ ಕೊಡುಗೆ ನೀಡುವಲ್ಲಿ ಮುಂಚೂಣಿಯಲ್ಲಿದ್ದಾರೆ. ಪ್ರಸ್ತುತ ಯಾವ ತಂಡಗಳು ಐಪಿಎಲ್ ಅಂಕಪಟ್ಟಿಯಲ್ಲಿ ಮೊದಲ 4 ಸ್ಥಾನದಲ್ಲಿವೆ, ಯಾರ ಬಳಿ ಆರೆಂಜ್ ಮತ್ತು ಪರ್ಪಲ್ ಕ್ಯಾಪ್ ಇದೆ? ಎಂಬುದರ ವಿವರ ಹೀಗಿದೆ.
ಇದನ್ನೂ ಓದಿ: ನಾನು ಧರಿಸಿದ್ದ ಡ್ರೆಸ್, ಆತನ ಬಾಯಲ್ಲಿ… ಶಾಕಿಂಗ್ ಸಂಗತಿ ಬಿಚ್ಚಿಟ್ಟ ನಟಿ ವಿನ್ಸಿ ಅಲೋಶಿಯಸ್ | Actress Talk
1. ಗುಜರಾತ್ ಟೈಟನ್ಸ್ - (ಪಂದ್ಯ 6, ಗೆಲುವು 4, 2 ಸೋಲು) 8 ಅಂಕ
2. ಡೆಲ್ಲಿ ಕ್ಯಾಪಿಟಲ್ಸ್- ( ಪಂದ್ಯ 5, ಗೆಲುವು 4, ಸೋಲು 1) 8 ಅಂಕ
3. ಆರ್ಸಿಬಿ- (ಪಂದ್ಯ 6, ಗೆಲುವು 4, 2 ಸೋಲು) 8 ಅಂಕ
4. ಪಂಜಾಬ್ ಕಿಂಗ್ಸ್- (ಪಂದ್ಯ 6, ಗೆಲುವು 4, 2 ಸೋಲು) ಅಂಕ
ಇದನ್ನೂ ಓದಿ: ಶ್ರೇಯಸ್ ಅಯ್ಯರ್ ಎದುರೇ ತಮ್ಮ ತಂಡದ ಬ್ಯಾಟರ್ಗಳಿಗೆ ಅವಮಾನ ಮಾಡಿದ ಅಂಜಿಕ್ಯಾ ರಹಾನೆ! Ajinkya Rahane
1. ನಿಕೋಲಸ್ ಪೂರನ್ (ಎಲ್ಎಸ್ಜಿ)- 357 ರನ್, 7 ಪಂದ್ಯ
1. ನೂರ್ ಅಹ್ಮದ್ (ಸಿಎಸ್ಕೆ)- 12 ವಿಕೆಟ್, 7 ಪಂದ್ಯ,(ಏಜೆನ್ಸೀಸ್).