ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರು ತಮ್ಮ ಎರಡನೇ ಗರ್ಭಧಾರಣೆಯ ಬಗ್ಗೆ ಕೆಲವು ಸಮಯದಿಂದ ಸುದ್ದಿಯಲ್ಲಿದ್ದಾರೆ. ಗರ್ಭಧಾರಣೆಯ ಸುದ್ದಿಯ ನಡುವೆ, ಅನುಷ್ಕಾ ಕೂಡ ಜನಮನದಿಂದ ದೂರವನ್ನು ಕಾಯ್ದುಕೊಳ್ಳುತ್ತಿದ್ದಾರೆ. ಆದ್ರೆ ವಿಚಾರ ಅದಲ್ಲ ವಿರಾಟ್ ಅನುಷ್ಕಾ ಗರ್ಭಧಾರಣೆಗೂ ಮುನ್ನವೇ ಒಂದು ನಿರ್ಧಾರ ತೆಗೆದುಕೊಂಡಿದ್ದಾರೆ.
ಈ ಬಗ್ಗೆ ಅನುಷ್ಕಾ ಶರ್ಮಾ ಕೂಡಾ ಒಂದು ಇಂಟರ್ವ್ಯೂನಲ್ಲಿ ವಿರಾಟ್ ತಮ್ಮ ಮಕ್ಕಳ ಭವಿಷ್ಯಕ್ಕಾಗಿ ತಗೆದುಕೊಂಡ ನಿರ್ಧಾರದ ವಿಚಾರದ ಬಗ್ಗೆ ಪ್ರಸ್ತಾಪಿಸಿದ್ರು. ವಿರಾಟ್ ಕೊಹ್ಲಿ ಅನುಷ್ಕಾ ಮತ್ತು ಮಕ್ಕಳಿಗೆ ಹೆಚ್ಚು ಸಮಯ ಕೊಡುತ್ತೇನೆ. ನನ್ನ ವೃತ್ತಿಯಿಂದಾಗಿ ಕುಟುಂಬಕ್ಕೆ ಕಾಲಾವಕಾಶ ಕೊಡೋದನ್ನ ಮಿಸ್ ಮಾಡಿಕೊಳ್ಳುವುದು ನನಗೆ ಇಷ್ಟವಿಲ್ಲ ಹಾಗಾಗಿ ನಾನು ಕುಟುಂಬಕ್ಕೆ ಹೆಚ್ಚು ಸಮಯ ನೀಡುವ ವಿಚಾರದ ಬಗ್ಗೆ ಅನುಷ್ಕಾ ಜತೆ ಮಾತನಾಡಿದ್ದ ವಿಚಾರವಾಗಿ ಅನುಷ್ಕಾ ಶೋ ಒಂದರಲ್ಲಿ ಹೇಳಿಕೊಂಡಿದ್ರು.
ಮಕ್ಕಳ ಭವಿಷ್ಯಕ್ಕಾಗಿ ವಿರಾಟ್ ತೆಗೆದುಕೊಂಡ ನಿರ್ಧಾರವೇನು?
ಆದ್ರೆ ಇದೀಗ ವಿರಾಟ್ ಮಕ್ಕಳ ಭವಿಷ್ಯಕ್ಕಾಗಿ ಮತ್ತೊಂದು ನಿರ್ಧಾರ ಮಾಡಿದ್ದರಂತೆ. ಯಶಸ್ವಿ ಕ್ರಿಕೆಟಿಗ ವಿರಾಟ್ ವೃತ್ತಿಜೀವನದ ಯಾವುದೇ ಅಂಶ ಅಥವಾ ವಿಚಾರಗಳು ತಮ್ಮ ಮಕ್ಕಳ ಮೇಲೆ ಪರಿಣಾಮ ಬೀರದಂತೆ ಎಚ್ಚರ ವಹಿಸೋದನ್ನ ನಿರ್ಧರಿಸಿದ್ದರಂತೆ.
ಮಕ್ಕಳು ದೊಡ್ಡವರಾದಾಗ ಅವರ ಯಾವುದೇ ಸಾಧನೆ ಅಥವಾ ಟ್ರೋಫಿಗಳನ್ನು ಮನೆಯಲ್ಲಿ ಇಡಲು ಬಯಸುವುದಿಲ್ಲ ಎಂದು ವಿರಾಟ್ ಕೊಹ್ಲಿ ಹೇಳಿಕೊಂಡಿದ್ದಾರೆ.