ಕ್ರೀಡೆ

ಗೌತಮ್ ಗಂಭೀರ್ ಎರಡು ವರ್ಷದ ವೇತನ ದೇಣಿಗೆ

ನವದೆಹಲಿ: ಟೀಮ್ ಇಂಡಿಯಾ ಮಾಜಿ ಆಟಗಾರ ಹಾಗೂ ಸಂಸದ ಗೌತಮ್ ಗಂಭೀರ್, ಎರಡು ವರ್ಷದ ವೇತನವನ್ನು ಪಿಎಂ-ಕೇರ್ಸ್​ಗೆ ದೇಣಿಗೆ ನೀಡಿದ್ದಾರೆ. ಪೂರ್ವ ದೆಹಲಿಯ ಬಿಜೆಪಿ ಸಂಸದರಾಗಿರುವ ಗಂಭೀರ್ ಟ್ವಿಟರ್​ನಲ್ಲಿ ಈ ವಿಷಯ ಹಂಚಿಕೊಂಡಿದ್ದಾರೆ. ಜತೆಗೆ ಜನರು ಹೆಚ್ಚು ದೇಣಿಗೆ ನೀಡಲು ಮುಂದೆ ಬರಬೇಕು ಎಂದು ವಿನಂತಿಸಿಕೊಂಡಿದ್ದಾರೆ.

ಗಂಭೀರ್ ಇದಕ್ಕೂ ಮೊದಲು ಸಂಸದರ ಒಂದು ತಿಂಗಳ ವೇತನದ ಜತೆಗೆ ಸಂಸದರ ನಿಧಿಯಿಂದ 1 ಕೋಟಿ ರೂಪಾಯಿ ನೀಡಿದ್ದರು. ವೈದ್ಯಕೀಯ ಪರಿಕರಗಳ ಖರೀದಿಗಾಗಿ ದೆಹಲಿ ಸರ್ಕಾರಕ್ಕೆ 50 ಲಕ್ಷ ರೂ. ದೇಣಿಗೆ ನೀಡಿದ್ದರು.

50 ಸಾವಿರ ಸುರಕ್ಷತಾ ಕಿಟ್ ನೀಡಿದ ಶಾರೂಕ್: ಬಾಲಿವುಡ್ ಸ್ಟಾರ್ ನಟ ಶಾರೂಕ್ ಖಾನ್ ತಮ್ಮ ಒಡೆತನದ ರೆಡ್ ಚಿಲ್ಲಿಸ್ ಎಂಟರ್​ಟೈನ್​ವೆುಂಟ್, ಕೋಲ್ಕತ ನೈಟ್​ರೈಡರ್ಸ್ ಹಾಗೂ ಮೀರ್ ಫೌಂಡೇಷನ್ ವತಿಯಿಂದ ಮಹಾರಾಷ್ಟ್ರ ಹಾಗೂ ಪಶ್ಚಿಮ ಬಂಗಾಳ ಸರ್ಕಾರಗಳಿಗೆ 50 ಸಾವಿರ ಸುರಕ್ಷತಾ ಕಿಟ್ ನೀಡುವುದಾಗಿ ಘೋಷಿಸಿದ್ದಾರೆ.

5 ಲಕ್ಷ ರೂ .ಘೊಷಿಸಿದ ಅಪೂರ್ವಿ: ಕಾಮನ್ವೆಲ್ತ್ ಗೇಮ್್ಸ ಸ್ವರ್ಣ ಪದಕ ವಿಜೇತೆ ಅಪೂರ್ವಿ ಚಂಡೆಲಾ, 5 ಲಕ್ಷ ರೂಪಾಯಿ ದೇಣಿಗೆ ಘೊಷಿಸಿದ್ದಾರೆ. ಶೂಟರ್ 3 ಲಕ್ಷ ರೂ. ಪಿಎಂ-ಕೇರ್ಸ್​ಗೆ ನೀಡಿದರೆ, 2 ಲಕ್ಷ ರೂಪಾಯಿ ಮೊತ್ತವನ್ನು ರಾಜಸ್ಥಾನ ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡಲಿದ್ದಾರೆ. ಭಾರತೀಯ ಬ್ಯಾಡ್ಮಿಂಟನ್ ಸಂಸ್ಥೆ 10 ಲಕ್ಷ ರೂಪಾಯಿ ಘೊಷಿಸಿದೆ. ಭಾರತ ತಂಡದ ಫೀಲ್ಡಿಂಗ್ ಕೋಚ್ ಆರ್.ಶ್ರೀಧರ್ 4 ಲಕ್ಷ ರೂಪಾಯಿ ದೇಣಿಗೆ ನೀಡಿದ್ದಾರೆ. ತೇಜ್​ಪಾಲ್ ಕೊಥಾರಿ 5 ಲಕ್ಷ ರೂ.ದೇಣಿಗೆ: ಮಾಜಿ ಕ್ರಿಕೆಟಿಗ ಹಾಗೂ ಕರ್ನಾಟಕ ರಾಜ್ಯ 19 ವಯೋಮಿತಿ ತಂಡದ ಆಯ್ಕೆ ಸಮಿತಿ ಸದಸ್ಯ ತೇಜ್​ಪಾಲ್ ಕೊಥಾರಿ ಮುಖ್ಯಮಂತ್ರಿ ಪರಿಹಾರಿ ನಿಧಿಗೆ 5 ಲಕ್ಷ ರೂಪಾಯಿ ದೇಣಿಗೆ ನೀಡುವುದಾಗಿ ಘೊಷಿಸಿದ್ದಾರೆ. 56 ವರ್ಷದ ತೇಜ್​ಪಾಲ್ ಕರ್ನಾಟಕದ ಪರ 3 ಪ್ರಥಮ ದರ್ಜೆ ಪಂದ್ಯಗಳನ್ನಾಡಿದ್ದಾರೆ.