ನವದೆಹಲಿ: ಮ್ಯಾಚ್ ಫಿಕ್ಸಿಂಗ್ ಆರೋಪದಲ್ಲಿ ವೆಸ್ಟ್ ಇಂಡೀಸ್ ವಿಕೆಟ್ ಕೀಪರ್ ಡೆವೊನ್ ಥಾಮಸ್ಗೆ ಐಸಿಸಿ 5 ವರ್ಷಗಳ ನಿಷೇಧದ ಶಿಕ್ಷೆ ವಿಧಿಸಿದೆ. ಥಾಮಸ್ ವಿರುದ್ಧ ಏಳು ನಿಯಮಗಳನ್ನು ಉಲ್ಲಂಘಿಸಿದ ಆರೋಪ ಕೇಳಿಬಂದಿತ್ತು. ಆ ಬಳಿಕ ನಡೆದ ತನಿಖೆಯಲ್ಲಿ ಥಾಮಸ್ ಈ ಆರೋಪಗಳೆಲ್ಲ ನಿಜ ಎಂದು ತಿಳಿಸಿದ್ದರು.
ವೆಸ್ಟ್ ಇಂಡೀಸ್ ಆಟಗಾರ ಡೆವೊನ್ ಥಾಮಸ್ ಶ್ರೀಲಂಕಾ ಪ್ರೀಮಿಯರ್ ಲೀಗ್, ಎಮಿರೇಟ್ಸ್ ಟಿ10 ಲೀಗ್ ಮತ್ತು ಕೆರಿಬಿಯನ್ ಪ್ರೀಮಿಯರ್ನ ಮೂರು ಟಿ20 ಲೀಗ್ನ ಭ್ರಷ್ಟಾಚಾರ ವಿರೋಧಿ ನಿಯಮಗಳನ್ನು ಉಲ್ಲಂಘಿಸಿರುವುದ ಆರೋದಡಿ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಐದು ವರ್ಷಗಳ ನಿಷೇಧ ಹೇರಿದೆ.
ಕಳೆದ ವರ್ಷ ಮೇ 23 ರಂದೇ ಥಾಮಸ್ ವಿರುದ್ಧ ಮ್ಯಾಚ್ ಫಿಕ್ಸಿಂಗ್ ಆರೋಪ ಕೇಳಿಬಂದಿತ್ತು. ಆ ಬಳಿಕ ಥಾಮಸ್ರನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಲಾಗಿತ್ತು.
34 ವರ್ಷದ ಬ್ಯಾಟ್ಸ್‌ಮನ್ ಡೆವೊನ್ ಥಾಮಸ್ 2009 ರಲ್ಲಿ ವೆಸ್ಟ್ ಇಂಡೀಸ್ ಪರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. ಆ ಬಳಿಕ 2011 ರ ವಿಶ್ವಕಪ್‌ನಲ್ಲಿ ವೆಸ್ಟ್ ಇಂಡೀಸ್ ತಂಡದ ಭಾಗವಾಗಿದ್ದ ಥಾಮಸ್ 2022 ರಲ್ಲಿ ವಿಂಡೀಸ್ ಪರ ತಮ್ಮ ಕೊನೆಯ ಅಂತರಾಷ್ಟ್ರೀಯ ಪಂದ್ಯವನ್ನು ಆಡಿದ್ದರು. ಡೆವೊನ್ ಥಾಮಸ್ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಇದುವರೆಗೆ ವೆಸ್ಟ್ ಇಂಡೀಸ್ ಪರ ಒಂದು ಟೆಸ್ಟ್, 21 ಏಕದಿನ ಮತ್ತು 12 ಟಿ20 ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ ಕ್ರಮವಾಗಿ 31, 238 ಮತ್ತು 51 ರನ್ ಕಲೆಹಾಕಿದ್ದಾರೆ.