ಕ್ರೀಡೆ

ಬಾಂಗ್ಲಾದೇಶ ವಿರುದ್ಧ ಪ್ರವಾಸಿ ವಿಂಡೀಸ್‌ಗೆ ಆರಂಭಿಕ ಆಘಾತ

raghukittur

ಚಿತ್ತಗಾಂಗ್: ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಮೆಹಿದಿ ಹಸನ್ ಮಿರಾಜ್ (103ರನ್, 168 ಎಸೆತ, 13 ಬೌಂಡರಿ) ಶತಕದಾಟದ ನೆರವಿನಿಂದ ಬಾಂಗ್ಲಾದೇಶ ತಂಡ ಮೊದಲ ಟೆಸ್ಟ್ ಪಂದ್ಯದಲ್ಲಿ ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧ ಬೃಹತ್ ಮೊತ್ತ ಪೇರಿಸಿದೆ. ಜಹೂರ್ ಅಹಮದ್ ಚೌಧರಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ 5 ವಿಕೆಟ್‌ಗೆ 242 ರನ್‌ಗಳಿಂದ ದಿನದಾಟ ಆರಂಭಿಸಿದ ಬಾಂಗ್ಲಾ ತಂಡ 430 ರನ್‌ಗಳಿಗೆ ಸರ್ವಪತನ ಕಂಡಿತು.

ಬಳಿಕ ಇನಿಂಗ್ಸ್ ಆರಂಭಿಸಿದ ವೆಸ್ಟ್ ಇಂಡೀಸ್ ಆರಂಭಿಕ ಆಘಾತ ಎದುರಿಸಿದ್ದು ಎರಡನೇ ದಿನದಾಟದ ಅಂತ್ಯಕ್ಕೆ 2 ವಿಕೆಟ್‌ಗೆ 75 ರನ್ ಪೇರಿಸಿದ್ದು, ಇನಿಂಗ್ಸ್ ಮುನ್ನಡೆ ಸಾಧಿಸಲು ಇನ್ನು 355 ರನ್ ಗಳಿಸಬೇಕಿದೆ.

ಬಾಂಗ್ಲಾದೇಶ : 430 (ಶಕೀಬ್ ಅಲ್ ಹಸನ್ 68, ಮೆಹಿದಿ ಹಸನ್ ಮಿರಾಜ್ 103, ನಯೀಮ್ ಹಸನ್ 24, ಜೊಮೆಲ್ ವಾರಿಕನ್ 133ಕ್ಕೆ 4, ರಾಖಿಮ್ ಕಾರ್ನ್‌ವೆಲ್ 114ಕ್ಕೆ 2), ವೆಸ್ಟ್ ಇಂಡೀಸ್: 29 ಓವರ್‌ಗಳಲ್ಲಿ 2 ವಿಕೆಟ್‌ಗೆ 75 (ಕ್ರೇಗ್ ಬ್ರಾಥ್‌ವೇಟ್ 49*, ನಕೃಮಾಹ ಬೊನ್ನೆರ್ 17*, ಮುಸ್ತಾಫಿಜುರ್ ರೆಹಮಾನ್ 18ಕ್ಕೆ 2).