ಕ್ರೀಡೆ

ಭಾರತದ ವಿರುದ್ಧ ಸರಣಿಗೂ ಮುನ್ನ ಶ್ರೀಲಂಕಾಗೆ ಶಾಕ್; ತಂಡದ ನಾಯಕತ್ವದಿಂದ ಕೆಳಗಿಳಿದ ಸ್ಟಾರ್​ ಆಲ್ರೌಂಡರ್

ಕೊಲಂಬೊ: ಜುಲೈ 26ರಿಂದ ಭಾರತದ ವಿರುದ್ಧ ಆರಂಭವಾಗಲಿರುವ ಏಕದಿನ ಹಾಗೂ ಟಿ20 ಸರಣಿಗೂ ಮುನ್ನ ಶ್ರೀಲಂಕಾ ಕ್ರಿಕೆಟ್​ ತಂಡಕ್ಕೆ ಶಾಕ್​ ಎದುರಾಗಿದ್ದು, ನಾಯಕತ್ವದಿಂದ ಸ್ಪಿನ್ನರ್​ ವನಿಂದು ಹಸರಂಗಾ ಕೆಳಗಿಳಿದಿದ್ದಾರೆ. ಭಾರತದ ವಿರುದ್ಧದ ಸರಣಿಗೂ ಮುನ್ನ ಸ್ಪಿನ್ನರ್​ನ ಈ ನಿರ್ಧಾರ ಶ್ರೀಲಂಕಾ ಕ್ರಿಕೆಟ್​ ಮಂಡಳಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದ್ದು, ಹೊಸ ನಾಯಕನಿಗಾಗಿ ಹುಡುಕಾಟ ನಡೆಸುತ್ತಿದೆ.

ಇತ್ತೀಚಿಗೆ ಮುಕ್ತಾಯಗೊಂಡ 09ನೇ ಆವೃತ್ತಿಯ ಟಿ20 ವಿಶ್ವಕಪ್​ನಲ್ಲಿ ಕಪ್​ ಗೆಲ್ಲುವ ಗುರಿಯೊಂದಿಗೆ ಕಣಕ್ಕಿಳಿದ ಶ್ರೀಲಂಕಾ ಕ್ರಿಕೆಟ್​ ತಂಡವು ಹೀನಾಯ ಪ್ರದರ್ಶನದಿಂದಾಗಿ ಸೂಪರ್ 08 ಪ್ರವೇಶಿಸದೆ ನಿರ್ಗಮಿಸಿತ್ತು. ಈ ಹಿನ್ನೆಲೆಯಲ್ಲಿ ವನಿಂದು ಹಸರಂಗಾ ರಾಜೀನಾಮೆ ನೀಡಿದ್ದಾರೆ ಎಂದು ವರದಿಯಾಗಿದೆ.

ಶ್ರೀಲಂಕಾ ಕ್ರಿಕೆಟ್​ ಆಟಗಾರನಾಗಿ ನನ್ನ ಅತ್ಯುತ್ತಮ ಸೇವೆಯನ್ನು ಹೊಂದಿರುತ್ತದೆ. ನಾನು ಯಾವಾಗಲೂ ನನ್ನ ತಂಡ ಮತ್ತು ನಾಯಕತ್ವವನ್ನು ಬೆಂಬಲಿಸಿ ನಿಲ್ಲುತ್ತೇನೆ ಎಂದು ವನಿಂದು ಹಸರಂಗಾ ಶ್ರೀಲಂಕಾ ಕ್ರಿಕೆಟ್​ ಮಂಡಳಿಗೆ ಸಲ್ಲಿಸಲಾಗಿರುವ ರಾಜೀನಾಮೆ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ವನಿಂದು ಹಸರಂಗಾ ನಾಯಕನಾಗಿ ತಂಡವನ್ನು 10 ಪಂದ್ಯಗಳಲ್ಲಿ ಮುನ್ನಡೆಸಿದ್ದಾರೆ.