ವಾಲಿಬಾಲ್ ಪಂದ್ಯಾವಳಿಯಲ್ಲಿ ಪ್ರಥಮ ಬಹುಮಾನ ಪಡೆದ ವೈಟಿಜಿ ಯೂತ್ ಕ್ಲಬ್‌ತಂಡದೊಂದಿಗೆ ಪ್ರಮುಖರಾದ ಬಿ.ಜಿ.ಸಿದ್ದೇಶಗೌಡ, ಬಾಣ್ದಾರ್ ಸುಬಾನ್ ಸಾಬ್, ರೆಡ್ಡಿಬಾಬು ಇತರರಿದ್ದರು. 
ಕ್ರೀಡೆ

ವಾಲಿಬಾಲ್ ಪಂದ್ಯಾವಳಿಯಲ್ಲಿ ಯಶ್ವಂತನಗರ ಯೂತ್ ಕ್ಲಬ್ ತಂಡ ಪ್ರಥಮ

ಸಂಡೂರು: ಕೃಷ್ಣಾನಗರದ ಪ್ರೌಢಶಾಲೆ ಆವರಣದಲ್ಲಿ ಭಾನುವಾರ ಕೃಷ್ಣಾನಗರ ಯೂತ್‌ಕ್ಲಬ್‌ನಿಂದ ಆಯೋಜಿಸಿದ್ದ ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾವಳಿಯಲ್ಲಿ ಯಶ್ವಂತನಗರ ಯೂತ್ ಕ್ಲಬ್ ತಂಡ ಪ್ರಥಮ, ಕೃಷ್ಣಾನಗರ ಯೂತ್-ಎ ತಂಡ ದ್ವಿತೀಯ ಸ್ಥಾನ ಮತ್ತು ಯಶ್ವಂತನಗರ ಜೈ ಭೀಮ್ ತಂಡ ತೃತೀಯ ಸ್ಥಾನ ಪಡೆದವು.

ಸಂಡೂರು, ಯಶ್ವಂತನಗರ, ಸೋಮಲಾಪುರ, ತೋರಣಗಲ್, ನರಸಿಂಗಾಪುರ ಸೇರಿದಂತೆ ಒಟ್ಟು 14 ತಂಡಗಳು ಭಾಗವಹಿಸಿದ್ದವು. ಪಂದ್ಯಾವಳಿಯನ್ನು ಮಾಜಿ ವಾಡಾ ಅಧ್ಯಕ್ಷ ರೋಷನ್ ಜಮೀರ್ ಉದ್ಘಾಟಿಸಿದರು.

ಗ್ರಾಪಂ ಅಧ್ಯಕ್ಷೆ ರೇಣುಕಮ್ಮ ದೇವೇಂದ್ರಪ್ಪ, ಭುಜಂಗನಗರ ಬಿ.ಜಿ.ಸಿದ್ದೇಶ್ ಗೌಡ, ಹಿರಿಯ ವಾಲಿಬಾಲ್ ಆಟಗಾರ ರಹಮತ್ ಮಾತನಾಡಿದರು. ವಾಲಿಬಾಲ್ ಪಂದ್ಯಾವಳಿಗಳಿಗೆ ನಿವೃತ್ತಿ ಘೋಷಿಸಿದ ಎ.ನಾಗರಾಜ್, ನೌಶಾದ್, ವಂಶಿ ಗಂಗಾವತಿ ಅವರನ್ನು ಸನ್ಮಾನಿಸಲಾಯಿತು.

ತಾಪಂ ಮಾಜಿ ಸದಸ್ಯ ಬಾಣದಾರ್ ಸುಭಾನ್ ಸಾಬ್, ಗ್ರಾಪಂ ಸದಸ್ಯರಾದ ಆಶಾಬೀ, ವಿರೂಪಾಕ್ಷಿ, ರೆಡ್ಡಿ ಬಾಬು, ಚಂದ್ರಪ್ಪ ಬಿಂಗಿ, ಆಯೋಜಕರಾದ ನಾಗರಾಜ್, ಇರ್ಫಾನ್, ಮುಜ್ಜು, ನಿಶಾನಿ ಮೆಹಬೂಬ್ ಬಾಷಾ ಇದ್ದರು.