Pakistan War: ಭಾರತ ಮತ್ತು ಪಾಕಿಸ್ತಾನ ನಡುವೆ ಉದ್ವಿಗ್ನ ಸ್ಥಿತಿ ಮತ್ತಷ್ಟು ಹೆಚ್ಚಿದ್ದು, ಗಡಿಭಾಗಗಳಲ್ಲಿ ಹೈ ಅಲರ್ಟ್ ಮಾಡಲಾಗಿದೆ. ಕತ್ತಲಲ್ಲಿ ದಾಳಿ ಮಾಡಿದ ಪಾಕ್ಗೆ ಹಾಡಹಗಲೇ ತಕ್ಕ ಉತ್ತರ ಕೊಟ್ಟಿರುವ ಭಾರತ, ಉಗ್ರರ 9 ಅಡಗುತಾಣ ಸೇರಿದಂತೆ ಹಲವು ಪ್ರದೇಶಗಳ ಮೇಲೆ ಡ್ರೋನ್ ಮತ್ತು ಕ್ಷಿಪಣಿ ದಾಳಿ ನಡೆಸಿದೆ. ಪ್ರಸ್ತುತ ಎರಡು ದೇಶಗಳ ನಡುವೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ದೇಶದಲ್ಲಿ ಬಿಗಿ ಭದ್ರತೆ ಒದಗಿಸಲಾಗಿದೆ.
ಇದನ್ನೂ ಓದಿ: ‘ಆಪರೇಷನ್ ಸಿಂಧೂರ’ ಸಂಭವಿಸಿದ ದಿನವೇ ಹುಟ್ಟಿದ 12 ನವಜಾತ ಶಿಶುಗಳಿಗೆ ‘ಸಿಂಧೂರ’ ಹೆಸರು! ಪೋಷಕರು ಸಂತಸ | Operation Sindoor
ಇನ್ನು ಸುಮ್ಮನಿದ್ದ ಭಾರತಕ್ಕೆ ಯುದ್ಧ ಸವಾಲು ಹಾಕಿದ ಪಾಕ್ ಈಗ ಭಾರತೀಯ ಸೇನೆ ದಾಳಿಯಿಂದ ಅಕ್ಷರಶಃ ನಲುಗಿ ಹೋಗಿದೆ. ತನ್ನ ದೇಶದ ಹಲವು ತಾಣಗಳು ಭಾರತದ ದಾಳಿಗೆ ಛಿದ್ರಗೊಂಡಿವೆ. ಇಷ್ಟಾದರೂ ಸೊಕ್ಕು ಬಿಡದ ಪಾಕ್, ಪ್ರತೀಕಾರ ತೀರಿಸಿಕೊಳ್ಳುವುದಾಗಿ ಹೇಳಿದೆ. ಇತ್ತೀಚಿನ ಬೆಳವಣಿಗೆಗಳ ಕುರಿತು ಮಾತನಾಡಿರುವ ಟೀಮ್ ಇಂಡಿಯಾ ಮಾಜಿ ಹಿರಿಯ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್, "ಸುಮ್ಮನಿರುವ ಅವಕಾಶ ಇದ್ದಾಗ ಯುದ್ಧ ಆಯ್ಕೆ ಮಾಡಿಕೊಂಡಿದ್ದು ಇದೇ ಪಾಕ್. ಯುದ್ಧವನ್ನು ಮಾಡಲು ಮುಂದಾದ ಪಾಕಿಸ್ತಾನ, ತಮ್ಮ ಉಗ್ರರ ಆಸ್ತಿಗಳನ್ನು ಉಳಿಸಿಕೊಳ್ಳಲು ಉಗ್ರಗಾಮಿಗಳಾಗಿದ್ದಾರೆ" ಎಂದರು.
"ಈ ನಡೆಯ ಸಾಕು ಅವರ ಬಗ್ಗೆ ಬಹಳಷ್ಟು ಹೇಳಲು. ಪಾಕಿಸ್ತಾನ ಎಂದಿಗೂ ಮರೆಯದ ರೀತಿಯಲ್ಲಿ ನಮ್ಮ ಪಡೆಗಳು ಅತ್ಯಂತ ಸೂಕ್ತವಾಗಿ ಉತ್ತರ ನೀಡುತ್ತಿವೆ" ಎಂದು ಸೆಹ್ವಾಗ್ ತಮ್ಮ ಎಕ್ಸ್ ಖಾತೆಯಲ್ಲಿ ಬರೆದು ಪೋಸ್ಟ್ ಹಂಚಿಕೊಂಡಿದ್ದಾರೆ. ಸೆಹ್ವಾಗ್ರಂತೆ ಕ್ರೀಡಾಪಟುಗಾಳಾದ ನೀರಜ್ ಚೋಪ್ರಾ, ಪಿವಿ ಸಿಂಧು, ವೆಂಕಟೇಶ್ ಪ್ರಸಾದ್ ಮತ್ತಿತರರು ಭಾರತ-ಪಾಕ್ ಪರಿಸ್ಥಿತಿ ಕುರಿತು ಪ್ರತಿಕ್ರಿಯಿಸಿದ್ದಾರೆ,(ಏಜೆನ್ಸೀಸ್).