Irfan Pathan: ಭಾರತ ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್ಗೆ ಹಠಾತ್ ವಿದಾಯ ಹೇಳಲು ಸತತ ವೈಫಲ್ಯವೇ ಕಾರಣ ಎಂದು ಭಾರತದ ಮಾಜಿ ಆಟಗಾರ ಇರ್ಫಾನ್ ಪಠಾನ್ ಹೇಳಿದ್ದಾರೆ.
ಈ ಬಗ್ಗೆ ಲಲ್ಲಂಟಾಪ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಪಠಾನ್, ಒಬ್ಬ ದೊಡ್ಡ ಆಟಗಾರನು ತನ್ನ ಮೊದಲ ಕುಸಿತವನ್ನು ಎದುರಿಸಿದಾಗ, ಅವನಿಗೆ ಬೆಂಬಲ ನೀಡಬೇಕು ಎಂದು ನಾನು ಭಾವಿಸುತ್ತೇನೆ. ಕೊಹ್ಲಿ ಸಹ ಅದಕ್ಕೆ ಅರ್ಹರು. ಏಕೆಂದರೆ, ವಿರಾಟ್ ತಂಡಕ್ಕಾಗಿ ಅನೇಕ ಪಂದ್ಯಗಳನ್ನು ಗೆಲ್ಲಿಸಿದ್ದಾರೆ. ಆದರೆ, ಈ ಕುಸಿತ ಐದು ವರ್ಷಗಳ ಕಾಲ ಮುಂದುವರಿದರೆ, ಅದು ಸರಿಯಲ್ಲ. ಆಟಗಾರನಿಗಿಂತ ತಂಡ ಮುಖ್ಯವಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ರಷ್ಯಾ-ಯುಕ್ರೇನ್ ಯುದ್ಧ: ಸೋಮವಾರ ಡೊನಾಲ್ಡ್ ಟ್ರಂಪ್ ಜತೆ ಯುಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿಮಾತುಕತೆ| Volodymyr Zelensky
ಅಲ್ಲದೆ, ಕೊಹ್ಲಿಯ ವೃತ್ತಿಜೀವನದಲ್ಲಿ ಕಳೆದ ಐದು ವರ್ಷಗಳಲ್ಲಿ ಕಳಪೆ ಫಾರ್ಮ್ನಿಂದ ಸರಾಸರಿಯಲ್ಲಿ ದೊಡ್ಡ ಕುಸಿತ ಕಂಡಿತು. ಆದರೆ, ವಿರಾಟ್, ಜೋ ರೂಟ್ ಮತ್ತು ಸ್ಟೀವನ್ ಸ್ಮಿತ್‌ರಂತಹ ಆಟಗಾರರನ್ನು ಹಿಂದಿಕ್ಕಿದರು. ವೃತ್ತಿ ಜೀವನದ ಕೊನೆಯಲ್ಲಿ ನಿವೃತ್ತಿಯ ಪ್ರಶ್ನೆಗಳು ಅಷ್ಟೊಂದು ಜೋರಾಗಿಲ್ಲದಿದ್ದರೂ, ಟೀಕೆಗಳು ಕೊಹ್ಲಿಯನ್ನು ಮುಂದಿನ ಪೀಳಿಗೆಗೆ ಅವಕಾಶ ನೀಡುವಂತೆ ಮಾಡಿತು ಎಂದು ಪಠಾಣ್ ತಿಳಿಸಿದ್ದಾರೆ.
ಮುಂದುವರೆದು ಮಾತನಾಡಿದ ಪಠಾಣ್, ವಿರಾಟ್ರನ್ನು ಎದುರಾಳಿ ಬೌಲಿಂಗ್ ದಾಳಿಗೆ ಒಮ್ಮೆ ತಲೆ ನೋವ ಉಂಟುಮಾಡಲು ಶುರು ಮಾಡಿದ ನಂತರ ಕೊಹ್ಲಿ ನನ್ನ ಸಮಯ ಮುಗಿಯುತ್ತಿದೆ ಎಂದು ತಿಳಿದುಕೊಂಡರು. ಒಬ್ಬ ಆಟಗಾರನು ಒಂದೇ ರೀತಿ ಔಟ್ ಆದಾಗ, ಎದುರಾಳಿ ತಂಡವು ಪ್ಲಾನ್ ಎ ಮೂಲಕವೇ ಔಟ್ ಮಾಡುತ್ತದೆ. ಎದುರಾಳಿಗಳು ಪ್ಲಾನ್ ಬಿ ಗೆ ಹೋಗಬೇಕಾಗಿಲ್ಲ. ಪ್ಲಾನ್ ಎ ನಿಂದ ಪ್ಲಾನ್ ಬಿ ಗೆ ನಿಮ್ಮನ್ನು ಕೊಂಡೊಯ್ಯುವುದು ಚಾಂಪಿಯನ್ ಆಟಗಾರನ ಕೆಲಸ ಎಂದು ಪಠಾಣ್ ಹೇಳಿದರು.
ಟೆಸ್ಟ್ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ ಅವರ ಸಮಸ್ಯೆ ಏನೆಂದರೆ ಅವರು ನಿರಂತರವಾಗಿ ಒಂದೇ ರೀತಿ ಔಟ್ ಆಗುತ್ತಿದ್ದರು. ಇದರರ್ಥ ಅವರು ಕೆಟ್ಟ ಆಟಗಾರ ಎಂದಲ್ಲ. ಕೊಹ್ಲಿ ಒಬ್ಬ ಉತ್ತಮ ಆಟಗಾರ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.(ಏಜೆನ್ಸೀಸ್)