ಬೆಂಗಳೂರು: ಸತತ ಎರಡು ಬಾರಿ ವಿಶ ್ವಟೆಸ್ಟ್ ಚಾಂಪಿಯನ್‌ಷಿಪ್‌ನಲ್ಲಿ ಟೀಮ್ ಇಂಡಿಯಾ ಸೋತ ಬಳಿಕ ರೋಹಿತ್ ಶರ್ಮ ನಾಯಕತ್ವದ ಬಗ್ಗೆ ಮಾಜಿ ಕ್ರಿಕೆಟಿಗರು ಬೇಸರ ವ್ಯಕ್ತಪಡಿಸಿದ್ದು, ಅದೇ ಹಾದಿಯಲ್ಲಿ ಭಾರತ ಕ್ರಿಕೆಟ್ ತಂಡದ ಆಯ್ಕೆಗಾರರ ಮಾಜಿ ಮುಖ್ಯಸ್ಥ ಎಂಎಸ್‌ಕೆ ಪ್ರಸಾದ್ ಸಹ ರಾಷ್ಟ್ರೀಯ ತಂಡದ ಆಯ್ಕೆಗಾರರನ್ನು ಪ್ರಶ್ನಿಸಿದ್ದಾರೆ.
ನಾಯಕ ರೋಹಿತ್‌ರಿಂದ ನಿರೀಕ್ಷಿತ ಮಟ್ಟದ ನಿರ್ವಹಣೆ ಕಂಡುಬಾರದ ಹಿನ್ನಲೆ ಟೆಸ್ಟ್ ತಂಡದ ನಾಯಕತ್ವಕ್ಕೆ ವಿರಾಟ್ ಕೊಹ್ಲಿ ಅವರನ್ನು ಪರಿಗಣಿಸದಿರುವುದಕ್ಕೆ ಆಯ್ಕೆ ಸಮಿತಿಯನ್ನು ಪ್ರಶ್ನಿಸಿದ್ದಾರೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಭವಿಷ್ಯದಲ್ಲಿ ಹಾರ್ದಿಕ್ ಪಾಂಡ್ಯ ಟೆಸ್ಟ್ ತಂಡದ ನಾಯಕರಾಗುತ್ತಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಎಂಎಸ್‌ಕೆ ಪ್ರಸಾದ್, ಈ ಪ್ರಶ್ನೆಗೆ ಉತ್ತರ ನೀಡಬೇಕೆ ಎಂಬುದು ನನಗೆ ತಿಳಿದಿಲ್ಲ. ಆಯ್ಕೆಗಾರರು ರೋಹಿತ್ ಶರ್ಮ ಅವರಿಗಿಂತ ಉತ್ತಮ ನಾಯಕನ ಹುಡುಕಾಟದಲ್ಲಿದ್ದರೆ, ವಿರಾಟ್ ಕೊಹ್ಲಿ ೇವರಿಟ್ ಆಗಿರುತ್ತಾರೆ.
ವಿರಾಟ್ ಯಾಕೆ ಮರಳಿ ಟೀಮ್ ಇಂಡಿಯಾದ ಟೆಸ್ಟ್ ನಾಯಕ ಆಗಬಾರದು ? ಕೊಹ್ಲಿ ಅವರ ಮನಸ್ಥಿತಿ ಯಾವ ರೀತಿ ಎಂಬುದು ತಿಳಿದಿಲ್ಲ. ಅಜಿಂಕ್ಯರಹಾನೆ ಅವರು ದೇಶೀಯ ಟೂರ್ನಿ ಹಾಗೂ ಡಬ್ಲುೃಟಿಸಿ ೈನಲ್‌ನಲ್ಲಿ ನೀಡಿದ ಪ್ರದರ್ಶನದ ಬಳಿಕ ಮರಳಿ ಉಪನಾಯಕ ಆಗಿದ್ದಾರೆ, ಅದೇ ರೀತಿ ಕೊಹ್ಲಿ ಸಹ ಏಕೆ ನಾಯಕಬಾದರು ಎಂದು ಪ್ರಶ್ನಿಸಿದ್ದಾರೆ.
2022ರ ಜನವರಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿ ಸೋಲಿನ ಬಳಿಕ ಕೊಹ್ಲಿ ಟೀಮ್ ಇಂಡಿಯಾ ನಾಯಕತ್ವ ಸಂಪೂರ್ಣವಾಗಿ ತ್ಯಜಿಸಿದ್ದರು.
ರೋಹಿತ್ ನಾಯಕತ್ವಕ್ಕೆ ಗಾವಸ್ಕರ್ ಟೀಕೆ: ನಾನು ರೋಹಿತ್‌ರಿಂದ ಇನ್ನಷ್ಟು ಉನ್ನತ ನಿರ್ವಹಣೆ ನಿರೀಕ್ಷಿಸುತ್ತಿದ್ದೆ. ಟೆಸ್ಟ್ ಕ್ರಿಕೆಟ್‌ನಲ್ಲಿ ವಿದೇಶದಲ್ಲಿ ಹೆಚ್ಚಿನ ಗೆಲುವು ಕಂಡಾಗ ಸಾಮರ್ಥ್ಯ ಗೊತ್ತಾಗುತ್ತದೆ. ಐಪಿಎಲ್ ಅನುಭವದ ನಡುವೆಯೂ ಟಿ20 ವಿಶ್ವಕಪ್‌ನಲ್ಲೂ ಭಾರತಕ್ಕೆ ೈನಲ್‌ಗೇರಲು ಸಾಧ್ಯವಾಗಲಿಲ್ಲ’ ಎಂದು ಸೋಮವಾರವಷ್ಟೇ 74ನೇ ಜನ್ಮದಿನದ ಸಂಭ್ರಮ ಆಚರಿಸಿಕೊಂಡ ಗಾವಸ್ಕರ್ ಹೇಳಿದ್ದಾರೆ. ಆಸೀಸ್ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ೈನಲ್‌ನಲ್ಲೂ ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ನಿರ್ಧಾರದ ಬಗ್ಗೆ ನಾಯಕ ರೋಹಿತ್ ಶರ್ಮ ಮತ್ತು ಕೋಚ್ ರಾಹುಲ್ ದ್ರಾವಿಡ್ ಉತ್ತರದಾಯಿಗಳಾಗುತ್ತಾರೆ. ಟ್ರಾವಿಸ್ ಹೆಡ್ ಬೌನ್ಸರ್‌ಗೆ ದೌರ್ಬಲ್ಯ ಹೊಂದಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದ್ದರೂ, ಅವರು 80 ರನ್ ಗಳಿಸುವವರೆಗೂ ಬೌನ್ಸರ್ ಯಾಕೆ ಎಸೆಯಲಿಲ್ಲ ಎಂದು ಗಾವಸ್ಕರ್ ಕಿಡಿಕಾರಿದ್ದಾರೆ.