Virat Kohli: ಐಪಿಎಲ್ 18ನೇ ಆವೃತ್ತಿಯು ಇದೀಗ ಕೊನೆಯ ಹಂತ ತಲುಪಿದ್ದು, ಆರ್ಸಿಬಿ ನೇರವಾಗಿ ಫೈನಲ್ಗೆ ಲಗ್ಗೆಯಿಟ್ಟಿದೆ. ಸೀಸನ್ ಆರಂಭದಿಂದಲೂ ಉತ್ತಮ ಪ್ರದರ್ಶನ ನೀಡುತ್ತ ಬಂದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಮುಂಬೈ ಇಂಡಿಯನ್ಸ್ ಮತ್ತು ಪಂಜಾಬ್ ಕಿಂಗ್ಸ್ ನಡುವಿನ ಕ್ವಾಲಿಫೈಯರ್-2 ಪಂದ್ಯದಲ್ಲಿ ಯಾರು ತಮ್ಮ ಎದುರು ಫೈನಲ್ ಕಾಳಗದಲ್ಲಿ ಆಡುತ್ತಾರೆ ಎಂಬ ಕುತೂಹಲದಲ್ಲಿದೆ. ಈ ಸಂಗತಿ ಸದ್ಯ ಆರ್ಸಿಬಿ ಅಭಿಮಾನಿ ಬಳಗಕ್ಕೆ ಕಾಡುತ್ತಿದ್ದು, ಭಾರೀ ವಿಶೇಷತೆಗಳಿಂದ ಕೂಡಿರುವ 18ನೇ ಸೀಸನ್ನಲ್ಲಿ ಚೊಚ್ಚಲ ಕಪ್ ಗೆಲ್ಲಲೇಬೇಕು ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದೆ.
ಇದನ್ನೂ ಓದಿ: ಇನ್ನೇನು ತಾಳಿ ಕಟ್ಟಬೇಕು ಅಷ್ಟರಲ್ಲೇ ಮುರಿದುಬಿತ್ತು ವರನ ಮದುವೆ ಕನಸು! ವಧು ಹೇಳಿದ ಮಾತು ಕೇಳಿ…. | Marriage Broken
2008ರಿಂದ ಶುರುವಾದ ಐಪಿಎಲ್ ಆವೃತ್ತಿಯಲ್ಲಿ ಒಂದೇ ತಂಡದ ಪರ ಆಡುತ್ತಿರುವ ವಿರಾಟ್ ಕೊಹ್ಲಿ, ಈ ವರ್ಷದ 18ನೇ ಆವೃತ್ತಿಯಲ್ಲಿ ಅದ್ಭುತ ಬ್ಯಾಟಿಂಗ್ ಮತ್ತು ಫೀಲ್ಡಿಂಗ್ ಪ್ರದರ್ಶನ ನೀಡಿ, ಎಲ್ಲರ ಗಮನ ಸೆಳೆದಿದ್ದಾರೆ. ತಂಡದ ಆಟಗಾರರು ಮತ್ತು ಅಭಿಮಾನಿಗಳ ಉತ್ಸಾಹವನ್ನು ತಮ್ಮ ಆಟದ ವೈಖರಿ ಮತ್ತು ಹುರಿದುಂಬಿಸುವ ಚೀರಾಟದಿಂದಲೇ ಹೆಚ್ಚಿಸುವ ಕಿಂಗ್ ಕೊಹ್ಲಿ, ತಮ್ಮ ದಾಖಲೆಗಳನ್ನು ಐಪಿಎಲ್ನಲ್ಲಿಯೂ ಮುಂದುವರಿಸಿದ್ದಾರೆ. ಇದು ಫ್ಯಾನ್ಸ್ಗಳ ಅಭಿಮಾನ, ಪ್ರೀತಿ ಮತ್ತು ಉತ್ಸಾಹವನ್ನು ಸದಾ ಹಸಿರಾಗಿರುವಂತೆ ಮಾಡಿದೆ ಎಂಬುದರಲ್ಲಿ ಅನುಮಾನವೇ ಇಲ್ಲ.
"ಐಪಿಎಲ್ 18ನೇ ಆವೃತ್ತಿಯ ಟ್ರೋಫಿಯನ್ನು ಆರ್ಸಿಬಿ ಗೆಲ್ಲಲಿದೆ ಮತ್ತು ಗೆಲ್ಲಬೇಕು ಎಂಬುದೇ ನನ್ನ ಆಶಯ" ಎಂದು ಮಾಜಿ ಸಿಎಸ್ಕೆ ಆಟಗಾರ, 'ಚಿನ್ನ ತಲಾ' ಸುರೇಶ್ ರೈನಾ ಅಭಿಪ್ರಾಯಿಸಿದ್ದಾರೆ. "ನಂ.18 ಮತ್ತು ವಿರಾಟ್ ಕೊಹ್ಲಿಗೆ ಅವಿನಾಭಾವ ಸಂಬಂಧವಿದೆ. ಅದರಲ್ಲಿ ಗೆಲುವಿನ ಗುಟ್ಟು, ಗಂಟಿದೆ. ಕಳೆದ 18 ವರ್ಷಗಳಿಂದ ಆರ್ಸಿಬಿ ಪರ ಆಡಿರುವ ಕೊಹ್ಲಿ, ತಂಡದ ಯಶಸ್ಸಿಗೆ ದೊಡ್ಡ ಹಾಗೂ ಪ್ರಮುಖ ಕಾರಣ ಎಂದರೆ ಖಂಡಿತ ತಪ್ಪಾಗಲಾರದು. ರಜತ್ ಪಟೀದಾರ್ ತಮಗೆ ಕೊಟ್ಟ ನಾಯಕತ್ವ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ" ಎಂದು ರೈನಾ ಹೇಳಿದ್ದಾರೆ.