ಕ್ರೀಡೆ

ಕೊಹ್ಲಿ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ ವಾಲ್​; ಸಣ್ಣ ಎತ್ತರದ ಆಟಗಾರರಿಗೆ ಹೆಚ್ಚಿನ ಅನುಕೂಲ ಎಂದ ರಾಹುಲ್​ ದ್ರಾವಿಡ್​ | Rahul Dravid

Rahul Dravid: ಭಾರತ ತಂಡದ ಮಾಜಿ ಕೋಚ್​ ರಾಹುಲ್ ದ್ರಾವಿಡ್, ಹಿರಿಯ ಕ್ರಿಕೆಟಿಗ ವಿರಾಟ್ ಕೊಹ್ಲಿಯನ್ನು "ಶಾರ್ಟ್-ಇಶ್" (ಸಣ್ಣ ಎತ್ತರದ) ಎಂದು ಉಲ್ಲೇಖಿಸಿದ್ದು, ಕಡಿಮೆ ಎತ್ತರದ ಬ್ಯಾಟ್ಸ್‌ಮನ್‌ಗಳು ಕ್ರೀಸ್‌ನಲ್ಲಿ ಹೆಚ್ಚು ಆಕರ್ಷಕವಾಗಿ ಕಾಣುತ್ತಾರೆ ಎಂದರು.

'ಹಾಲ್ ಚಾಲ್ ಔರ್ ಸವಾಲ್ ಪಾಡ್‌ಕ್ಯಾಸ್ಟ್' ನಲ್ಲಿ ಮಾತನಾಡಿರುವ ದ್ರಾವಿಡ್, ​ ಸುನಿಲ್ ಗವಾಸ್ಕರ್, ಸಚಿನ್ ತೆಂಡೂಲ್ಕರ್, ಬ್ರಿಯಾನ್ ಲಾರಾ, ರಿಕಿ ಪಾಂಟಿಂಗ್ ಮತ್ತು ಡಾನ್ ಬ್ರಾಡ್ಮನ್ ಅವರಂತಹ ಕಡಿಮೆ ಎತ್ತರದ ಆಟಗಾರರು ಯಾವಾಗಲೂ ಹೆಚ್ಚಿನ ಪ್ರಯೋಜನಗಳನ್ನು ಪಡೆಯುತ್ತಾರೆ ಎಂದರು.

ಸುನಿಲ್​ ಗವಾಸ್ಕರ್ ಅವರ ಸ್ಥಿರತೆ ಮತ್ತು ಸಮತೋಲನವು ಅವರನ್ನು ಹೇಗೆ ಆಕರ್ಷಿಸಿತು ಎಂಬುದನ್ನು ನೆನಪಿಸಿಕೊಂಡಿರುವ "ವಾಲ್",  ಅವರ ಸ್ಥಿರ ತಲೆ ಮತ್ತು ಶಾಂತ ಚಲನೆಗಳನ್ನು ಅನುಕರಿಸಲು ಪ್ರಯತ್ನಿಸುತ್ತಿದ್ದೆ ಎಂದು ತಿಳಿಸಿದ್ದಾರೆ.

ದ್ರಾವಿಡ್​​ ತಮ್ಮ "ಚಿಕ್ಕ" ಎಂಬ ಹೇಳಿಕೆ ವಿರಾಟ್ ಕೊಹ್ಲಿಗೆ ನೋವುಂಟು ಮಾಡಬಹುದಾದರೂ, ಕಿಂಗ್​ ಕೊಹ್ಲಿ ಇತರರಿಗಿಂತ ಏಕೆ ಭಿನ್ನವಾಗಿ ಕಾಣುತ್ತಾರೆ ಎಂಬುದಕ್ಕೆ ವಿವರಣೆ ನೀಡಿದರು. ವಿರಾಟ್ ಬೇರೆಯವರಷ್ಟು ಎತ್ತರವಾಗಿಲ್ಲವಾದರೂ​ ಆಕ್ರಮಣಕಾರಿ ಮತ್ತು ತಮ್ಮ ಫಿಟ್‌ನೆಸ್‌ ಮೂಲಕ ಹೃದಯಗಳ ಜೊತೆ ಜೊತೆಗೆ ಪಂದ್ಯಗಳನ್ನು ಗೆಲ್ಲುತಿದ್ದರು ಎಂದು ತಿಳಿಸಿದರು.(ಏಜೆನ್ಸೀಸ್​​)