ಬೆಂಗಳೂರು: 18ನೇ ಆವೃತ್ತಿಯ ಐಪಿಎಲ್ ಆರಂಭವಾಗುವುದಕ್ಕೆ ಒಂದು ವಾರ (ಮಾರ್ಚ್ 22) ಉಳಿದಿದ್ದು, ಆಟಗಾರರು ಈಗಾಗಲೇ ತಮ್ಮ ಫ್ರಾಂಚೈಸಿಗಳನ್ನು ಕೂಡಿಕೊಳ್ಳುತ್ತಿದ್ದು, ಅಭ್ಯಾಸವನ್ನು ನಡೆಸುತ್ತಿದ್ದಾರೆ. ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್ ಕಲ್ಕತ್ತಾ ನೈಟ್ರೈಡರ್ಸ್ ಹಾಗೂ ಆರ್ಸಿಬಿ ಮುಖಾಮುಖಿಯಾಗಲಿದ್ದು, ಎರಡು ತಂಡಗಳು ಈಗಾಗಲೇ ಭರ್ಜರಿ ತಯಾರಿ ನಡೆಸಿದ್ದು, ನೂತನ ನಾಯಕರೊಂದಿಗೆ ಕಣಕ್ಕಿಳಿಯುತ್ತಿರುವ ಕಾರಣ ಯಾರ ತಂತ್ರ ಕೈಹಿಡಿಯಲಿದೆ ಎಂಬುದನ್ನು ಕಾಡು ನೋಡಬೇಕಿದೆ.
ಚಾಂಪಿಯನ್ಸ್ ಟ್ರೋಫಿ ಗೆಲುವಿನ ಬಳಿಕ ವೆಕೇಷನ್ ಮೂಡ್ಗೆ ಜಾರಿದ್ದ ವಿರಾಟ್ ಕೊಹ್ಲಿ (Virat Kohli) ಬೆಂಗಳೂರಿಗೆ ಆಗಮಿಸಿದ್ದು, ಆರ್ಸಿಬಿ (RCB) ತಂಡವನ್ನು ಕೂಡಿಕೊಂಡಿದ್ದಾರೆ. ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ಅಭ್ಯಾಸ ಆರಂಭಿಸಿದ್ದ ಆಟಗಾರರಿಗೆ ಇದೀಗ ಹೊಸ ಜೋಶ್ ಬಂದಂತಾಗಿದ್ದು, ಟೂರ್ನಿ ಆರಂಭಕ್ಕೆ ಒಂದು ವಾರ ಉಳಿದಿರುವಾಗಲೇ ವಿರಾಟ್ ಕೊಹ್ಲಿ ತಂಡವನ್ನು ಕೂಡಿಕೊಂಡಿರುವುದು ಆರ್ಸಿಬಿಗೆ ದೊಡ್ಡ ಬಲ ಬಂದಂತಾಗಿದೆ.
ವಿರಾಟ್ ಕೊಹ್ಲಿ ಬೆಂಗಳೂರಿಗೆ ಆಗಮಿಸಿರುವ ವಿಡಿಯೋವನ್ನು ಆರ್ಸಿಬಿ (RCB) ಫ್ರಾಂಚೈಸಿ ತನ್ನ ಟ್ವಿಟರ್ ಖಾತೆಯಲ್ಲಿ ಎರಡು ವಿಡಿಯೋಗಳನ್ನು ಪೋಸ್ಟ್ ಮಾಡಿದ್ದು, ವಿರಾಟ್ ಕೊಹ್ಲಿಯನ್ನು ತಂಡದ ಸಿಬ್ಬಂದಿ ಹಾಗೂ ಅಭಿಮಾನಿಗಳು ಬರ ಮಾಡಿಕೊಳ್ಳುತ್ತಿರುವುದನ್ನು ನೋಡಬಹುದಾಗಿದೆ. ವಿರಾಟ್ ಕೊಹ್ಲಿಯ ಆಕ್ರಮಣಕಾರಿ ಪ್ರದರ್ಶನ ಈ ಬಾರಿಯಾದರೂ ಐಪಿಎಲ್ ಟ್ರೋಫಿ ಗೆಲ್ಲುವಿನತ್ತ ಕೊಂಡೊಯ್ಯಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.
ಇನ್ನೂ ವಿರಾಟ್ ಕೊಹ್ಲಿ ಆರ್ಸಿಬಿ ಫ್ರಾಂಚೈಸಿ ಕೊಡಿಕೊಳ್ಳುವುದಕ್ಕೂ ಮುನ್ನ ಹೊಸ ಹೇರ್ಸ್ಟೈಲ್ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಬೆಂಕಿಯನ್ನು ಹಚ್ಚಿದ್ದರು. ಮುಂಬೈ ಮೂಲದ ಆಕಿಮ್ ಹಾಲೀಮ್ ವಿರಾಟ್ ಕೊಹ್ಲಿಗೆ ಹೊಸ ಲುಕ್ ನೀಡಿದ್ದು, ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಹೊಸ ಟ್ರೆಂಡ್ ಸೃಷಿಸಿದೆ.