ಬೆಂಗಳೂರು: ಕ್ರಿಕೆಟ್ ಎನ್ನುವುದು ಇಂದಿನ ಯುವ ಪೀಳಿಗೆಯಲ್ಲಿ ಸಖತ್ ಕ್ರೇಜ್ ಹುಟ್ಟಿಸಿರುವ ಆಟವಾಗಿದೆ. ಸೆಲೆಬ್ರೆಟಿಗಳಿಂದ ಹಿಡಿದು ಸಾಮಾನ್ಯ ಜನರವರೆಗೂ ಕ್ರಿಕೆಟ್ ಗಮನ ಸೆಳೆಯುತ್ತದೆ. ಕ್ರಿಕೆಟ್ ಆಟಗಾರರ ಆಟದ ವೈಖರಿ ಮಾತ್ರವಲ್ಲ ಅವರ ಪ್ರತಿಯೊಂದು ಹೆಜ್ಜೆಯನ್ನು ಫ್ಯಾನ್ಸ್ ಫಾಲೋ ಮಾಡುತ್ತಿರುತ್ತಾರೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಿನ್ನೆ ನಡೆದ ವಿಶ್ವಕಪ್ ಪಂದ್ಯದಲ್ಲಿ ಆತಿಥೇಯ ಭಾರತ, ಎದುರಾಳಿ ನೆದರ್ಲೆಂಡ್ಸ್ ವಿರುದ್ಧ 160 ರನ್ಗಳ ಭಾರೀ ಅಂತರದಲ್ಲಿ ಭರ್ಜರಿ ಗೆಲುವು ದಾಖಲಿಸುವ ಮೂಲಕ ಅಜೇಯ ಓಟವನ್ನು ಮುಂದುವರಿಸಿದೆ. ನಿನ್ನೆ ಪಂದ್ಯದಲ್ಲಿ ಟೀಮ್ ಇಂಡಿಯಾ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಸಂಘಟಿತ ಪ್ರದರ್ಶನವನ್ನು ನೀಡಿತು. ಈ ಪಂದ್ಯದಲ್ಲಿ ರೋಹಿತ್ ಶರ್ಮಾ ಜೊತೆಗೆ ವಿರಾಟ್ ಕೊಹ್ಲಿ, ಶುಭಮನ್ ಗಿಲ್ ಅರ್ಧಶತಕ ಬಾರಿಸಿದರು. ಶ್ರೇಯಸ್ ಅಯ್ಯರ್ ಮತ್ತು ಕೆಎಲ್ ರಾಹುಲ್ ಇಬ್ಬರೂ ಶತಕ ಬಾರಿಸಿದರು. ಈ ಪಂದ್ಯ ಸ್ಮರಣೀಯ ಕ್ಷಣವೊಂದಕ್ಕೆ ಸಾಕ್ಷಿಯಾಯಿತು.
ನಿನ್ನೆ ಪಂದ್ಯ ಪ್ರಾರಂಭವಾಗುವ ಮೊದಲು ಭಾರತ ತಂಡದ ಆಟಗಾರರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪ್ರ್ಯಾಕ್ಟಿಸ್ ಮಾಡಿದ್ದಾರೆ. ಈ ವೇಳೆ ವಿರಾಟ್ ಕೊಹ್ಲಿ ಅವರಿಗೆ ಶುಭನಮ್ ಗಿಲ್ ಅವರು ಚಮಕ್ ಕೊಟ್ಟಿಸಿದ್ದಾರೆ. ಈ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
ವಿಡಿಯೋದಲ್ಲಿ ಏನಿದೆ?: ಭಾರತ ತಂಡದ ಆಟಗಾರರು ಪ್ರಾಕ್ಟಿಸ್ ಮಾಡುತ್ತಿರುತ್ತಾರೆ. ಈ ವೇಳೆ ವಿರಾಟ್ ಬ್ಯಾಟ್ ಹಿಡಿದುಕೊಂಡು ಮುಂದೆ ಸಾಗುತ್ತಿದ್ದರು. ಈ ವೇಳೆ ಶುಭಮನ್ ಗಿಲ್ ಕಾಲನ್ನು ಮೇಲಕ್ಕೆ ಎತ್ತಿ ಎಕ್ಸಸೈಜ್ ಮಾಡುತ್ತಾ ಹಿಂದೆ ಇಂದ ಬರುತ್ತಾರೆ. ಈ ವೇಳೆ ವಿರಾಟ್ ಒಂದು ಕ್ಷಣ ಹೆದರಿ ನಿಲ್ಲುತ್ತಾರೆ. ಈ ವೇಳೆ ತಮಾಷೆಯಾಗಿ ವಿರಾಟ್, ಶುಭಮನ್ ಗಿಲ್ ಕಡೆ ಬ್ಯಾಟ್ ಬಿಸಿ ಹೊಡೆಯುವಂತೆ ಮಾಡುತ್ತಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಈ ವಿಡಿಯೋ ನೋಡಿದ ಅಭಿಮಾನಿಗಳು ಮೆಚ್ಚುಗೆ ಸೂಚಿಸಿ, ಸೋ...ಫನ್ನಿ.... ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಈ ವಿಡಿಯೋ ವಿರಾಟ್ ಅಭಿಮಾನಿಗಳಿಗೆ ಸಖತ್ ಇಷ್ಟವಾಗಿದೆ.