India: ಮುಂಬರುವ ಇಂಡಿಯಾ ಎ ಮತ್ತು ಆಸ್ಟ್ರೇಲಿಯಾ ಎ ಸರಣಿಯಲ್ಲಿ ಭಾರತದ ಸೂಪರ್‌ಸ್ಟಾರ್ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಆಯ್ಕೆಯಾಗುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.
ಈ ಸರಣಿಯು ಸೆಪ್ಟೆಂಬರ್ 30, ಅಕ್ಟೋಬರ್ 3 ಮತ್ತು ಅಕ್ಟೋಬರ್ 5 ರಂದು ಕಾನ್ಪುರದ ಗ್ರೀನ್ ಪಾರ್ಕ್ ಕ್ರೀಡಾಂಗಣದಲ್ಲಿ ಭಾರತ ಎ ತಂಡ ಮತ್ತು ಆಸ್ಟ್ರೇಲಿಯಾ ಎ ವಿರುದ್ಧ ಮೂರು ಅನಧಿಕೃತ ಏಕದಿನ ಪಂದ್ಯಗಳನ್ನು ಆಡಲಿದೆ. ಅಲ್ಲದೆ, ಕೊಹ್ಲಿ ಮತ್ತು ರೋಹಿತ್ ಅವರನ್ನು ಒನ್ ಡೇ ಪಂದ್ಯಗಳಿಗೆ ಆಯ್ಕೆ ಮಾಡಬಹುದು ಎಂದು ತಿಳಿಸಿದೆ.
ರೋಹಿತ್ ಮತ್ತು ಕೊಹ್ಲಿ ಮೇ 2025 ರಲ್ಲಿ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದರು. 2025ರ ಐಪಿಎಲ್ ನಂತರ ಯಾವುದೇ ಸ್ಪರ್ಧಾತ್ಮಕ ಪಂದ್ಯವನ್ನು ಆಡಿಲ್ಲ. ಅಲ್ಲದೆ, ಕೊಹ್ಲಿ ಈ ತಿಂಗಳು ಭಾರತಕ್ಕೆ ಪ್ರಯಾಣ ಬೆಳೆಸಬಹುದು ಮತ್ತು ಬೆಂಗಳೂರಿನಲ್ಲಿ ಒಂದು ಸುತ್ತಿನ ಫಿಟ್ನೆಸ್ ಟೆಸ್ಟ್ಗೆ ಒಳಗಾಗಬಹುದು ಎಂದು ವರದಿಯಾಗಿದೆ.
ಕೊಹ್ಲಿ ಮತ್ತು ರೋಹಿತ್ ಕೊನೆಯ ಬಾರಿಗೆ ಭಾರತ ಪರ ಆಡಿದ್ದು 2025ರ ಮಾರ್ಚ್,9 ರಂದು ದುಬೈನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿಯ ಫೈನಲ್ನಲ್ಲಿ ನ್ಯೂಜಿಲೆಂಡ್ ವಿರುದ್ಧ ಆಡಿದ್ದರು. ಫೈನಲ್ ಪಂದ್ಯದಲ್ಲಿ 252 ರನ್‌ಗಳ ಗುರಿ ಬೆನ್ನಟ್ಟಿದ ಭಾರತವು ಚೇಸ್ನಲ್ಲಿ ರೋಹಿತ್ 83 ಎಸೆತಗಳಲ್ಲಿ 76 ರನ್ ಗಳಿಸಿದರು ಮತ್ತು ಪಂದ್ಯಶ್ರೇಷ್ಠ (POTM) ಪ್ರಶಸ್ತಿಯನ್ನು ಸಹ ಪಡೆದರು.
ಚಾಂಪಿಯನ್ಸ್ ಟ್ರೋಫಿಯ ಮೊದಲ ಸೆಮಿಫೈನಲ್‌ನಲ್ಲಿ ವಿರಾಟ್ ಆಸ್ಟ್ರೇಲಿಯಾ ವಿರುದ್ಧ 98 ಎಸೆತಗಳಲ್ಲಿ 84 ರನ್ ಗಳಿಸಿದರು. ಫೆಬ್ರವರಿ 23 ರಂದು ದುಬೈನಲ್ಲಿ ಪಾಕಿಸ್ತಾನ ವಿರುದ್ಧ 111 ಎಸೆತಗಳಲ್ಲಿ 100 ರನ್ ಗಳಿಸಿ ಅಜೇಯರಾಗಿದ್ದರು. ಕೊಹ್ಲಿ ಮತ್ತು ರೋಹಿತ್ ಭಾರತ ಎ ಪರ ಆಡಿದರೆ, ಆಸ್ಟ್ರೇಲಿಯಾ ತಂಡದ ವಿರುದ್ಧ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಮೂರು ಪಂದ್ಯಗಳ ಏಕದಿನ ಸರಣಿಗೆ ಸಜ್ಜಾಗಲು ಸಹಾಯವಾಗುತ್ತದೆ ಎಂದು ಹೇಳಲಾಗಿದೆ.
ಮುಂದಿನ ತಿಂಗಳು ಭಾರತದ ತಂಡ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದ್ದು, ಆಲ್ಲಿ 3 ಪಂದ್ಯಗಳ ಏಕದಿನ ಮತ್ತು 5 ಪಂದ್ಯಗಳ ಟಿ20ಐ ಸರಣಿಯಲ್ಲಿ ಆಡಲಿದೆ. ಏಕದಿನ ಪಂದ್ಯವು ಅಕ್ಟೋಬರ್ 19, 23 ಮತ್ತು 25 ರಂದು ಪರ್ತ್, ಅಡಿಲೇಡ್ ಮತ್ತು ಸಿಡ್ನಿಯಲ್ಲಿ ನಡೆಯಲಿದ್ದು, ಐದು ಟಿ20ಐಗಳು ಕ್ರಮವಾಗಿ ಅಕ್ಟೋಬರ್ 29, ಅಕ್ಟೋಬರ್ 31, ನವೆಂಬರ್ 2, ನವೆಂಬರ್ 6 ಮತ್ತು ನವೆಂಬರ್ 8 ರಂದು ಕ್ಯಾನ್‌ಬೆರಾ, ಮೆಲ್ಬೋರ್ನ್, ಹೊಬಾರ್ಟ್, ಗೋಲ್ಡ್ ಕೋಸ್ಟ್ ಮತ್ತು ಬ್ರಿಸ್ಬೇನ್‌ನಲ್ಲಿ ನಡೆಯಲಿವೆ.
ಆಸ್ಟ್ರೇಲಿಯಾ ವಿರುದ್ಧದ 46 ಏಕದಿನ ಪಂದ್ಯಗಳಲ್ಲಿ ರೋಹಿತ್ 2407 ರನ್ ಗಳಿಸಿದ್ದರೆ. ಅಲ್ಲದೆ, ಕೊಹ್ಲಿ ಒನ್ ಡೇ ಸ್ವರೂಪದಲ್ಲಿ ಆಡಿರುವ 50 ಪಂದ್ಯಗಳಲ್ಲಿ ಒಟ್ಟು 2451 ರನ್ ಗಳಿಸಿದ್ದಾರೆ. (ಏಜೆನ್ಸೀಸ್)