ಮುಂಬೈ: ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮ ಜೋಡಿಗೆ ಕಳೆದ ಜನವರಿ ತಿಂಗಳಲ್ಲಿ ಹಿಂದೆ ಹೆಣ್ಣುಮಗವಿನ ಜನನವಾಯಿತು. ಈ ಜೋಡಿ ಇದುವರೆಗೂ ತಮ್ಮ ಮಗುವಿನ ಫೋಟೋವನ್ನು ಎಲ್ಲೂ ಬಿಡುಗಡೆಗೊಳಿಸಿಲ್ಲ. ಸಾರ್ವಜನಿಕವಾಗಿ ಕಂಡರೂ ಮಗುವಿನ ಮುಖಮುಚ್ಚಿಕೊಂಡೇ ಈ ಜೊಡಿ ಓಡಾಡುತ್ತದೆ. ಮೂರು ದಿನಗಳ ಹಿಂದಷ್ಟೇ ಈ ಜೋಡಿ ಇಂಗ್ಲೆಂಡ್ಗೆ ಪ್ರಯಾಣ ಬೆಳೆಸಿತು. ಈ ವೇಳೆ ಮುಂಬೈ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಈ ಜೋಡಿಯ ಫೋಟೋ ತೆಗೆಯಲು ಮಾಧ್ಯಮ ಮಂದಿ ಕಾಯುತ್ತಿದ್ದ ನಿಂತಿದ್ದರು. ಆದರೆ, ಈ ಜೋಡಿ ಮಗುವಿನ ಮುಖಮುಚ್ಚಿಕೊಂಡೆ ಹೆಜ್ಜೆಹಾಕಿತು. ಈ ಸುದ್ದಿಯನ್ನು ಮಾಧ್ಯಮಗಳಲ್ಲಿ ಗಮನಿಸಿದ ನೆಟ್ಟಿಗರು, ಹೀಗೆ ಮಗುವಿನ ಮುಖ ಮುಚ್ಚಿದರೆ, ಮಗುವಿಗೆ ಉಸಿರುಕಟ್ಟುತ್ತದೆ ಎಂದು ಕೊಹ್ಲಿ ದಂಪತಿಗೆ ಎಚ್ಚರಿಕೆಯ ಜತೆಗೆ ಕಾಲೆಳೆದಿದ್ದಾರೆ.
ವಿರಾಟ್ ಕೊಹ್ಲಿ ದಂಪತಿ ಮಗುವನ್ನು ಅತಿಯಾಗಿ ಮುಚ್ಚಿಡಬಾರದು. ಹೀಗೆ ಮಾಡಿದರೆ ಉಸಿರುಗಟ್ಟುತ್ತದೆ. ಇದು ಅತಿಯಾಯಿತು ಎಂದರೆ, ಇನ್ನು ಕೆಲಮಂದಿ ತಮ್ಮ ಮುಖಮುಚ್ಚಿಕೊಳ್ಳುವ ಸಲುವಾಗಿ ಮಗುವನ್ನುಹಿಗೆ ಬಿಗಿದಪ್ಪಿಕೊಳ್ಳುವುದು ಎಷ್ಟು ಸರಿ ಎಂದು ಹೇಳಿದ್ದಾರೆ.
ಪತ್ನಿ ಅನುಷ್ಕಾ ಹಾಗೂ ಮಗಳು ವಮಿಕಾ ಕಂಡರೆ ಮುಗಿ ಬೀಳುವ ಮಾಧ್ಯಮಗಳ ವಿರುದ್ಧ ವಿರಾಟ್ ಕೊಹ್ಲಿ ಎಷ್ಟೋ ಬಾರಿ ಸಿಟ್ಟಾಗಿದ್ದು ಉಂಟು. ವೈಯಕ್ತಿಕ ಜೀವನಕ್ಕೆ ದಕ್ಕೆ ಉಂಟಾಗುತ್ತದೆ. ದಯವಿಟ್ಟು ನಮ್ಮ ಪಾಡಿಗೆ ಬಿಡಿ ಎಂದು ಹೇಳಿದ್ದರು. ಜೂನ್ 2 ರಂದು ಭಾರತ ತಂಡ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ ಪಂದ್ಯ ಹಾಗೂ ಇಂಗ್ಲೆಂಡ್ ವಿರುದ್ಧ 5 ಪಂದ್ಯಗಳ ಟೆಸ್ಟ್ ಸರಣಿ ಆಡುವ ಸಲುವಾಗಿ ಭಾರತ ತಂಡ ಇಂಗ್ಲೆಂಡ್ನತ್ತ ಪ್ರಯಾಣ ಬೆಳೆಸಿತು.