ಕ್ರೀಡೆ

ಇಂದು ವಿನಾಯಕ್ ಜೋಷಿ-ವರ್ಷಾ ಬೆಳವಾಡಿ ಮದುವೆ

ಬೆಂಗಳೂರು: ನಟ-ನಿರೂಪಕ ವಿನಾಯಕ್ ಜೋಷಿ ಮತ್ತು ಮಾಜಿ ಬ್ಯಾಡ್ಮಿಂಟನ್ ಆಟಗಾರ್ತಿ ವರ್ಷಾ ಬೆಳವಾಡಿ ಅವರ ಮದುವೆ ಶುಕ್ರವಾರ ಬೆಳಗ್ಗೆ ಬನಶಂಕರಿ 2ನೇ ಹಂತದಲ್ಲಿರುವ ಧರ್ಮಗಿರಿ ಮಂಜುನಾಥ ಸ್ವಾಮಿ ದೇವಸ್ಥಾನದಲ್ಲಿ ನಡೆಯಲಿದೆ.

ರಾಷ್ಟ್ರೀಯ-ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಟೂರ್ನಿಗಳಲ್ಲಿ ಆಡಿರುವ ಮಾಜಿ ವಿಶ್ವ ನಂ. 120 ಷಟ್ಲರ್ ವರ್ಷಾ, ಕಳೆದ ವರ್ಷವಷ್ಟೇ ನಿವೃತ್ತಿ ಹೊಂದಿದ್ದು, ಇದೀಗ ಅಕಾಡೆಮಿಯೊಂದರಲ್ಲಿ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವಿನಾಯಕ್ ಮತ್ತು ವರ್ಷಾ ಹಲವು ವರ್ಷಗಳ ಸ್ನೇಹಿತರಾಗಿದ್ದು, ಅವರದ್ದು ಲವ್ ಕಂ ಅರೇಂಜ್ಡ್ ಮದುವೆಯಾಗಿದೆ. ಕರೊನಾ ಭೀತಿಯಿಂದಾಗಿ 15ರಿಂದ 55 ವರ್ಷ ವಯಸ್ಸಿನವರು ಮಾತ್ರ ವಿವಾಹ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ ಎನ್ನಲಾಗಿದೆ.

ಪ್ರಕಾಶ್ ಬೆಳವಾಡಿ-ಸುಧಾವಾಡಿ ಬೆಳವಾಡಿ ಕುಟುಂಬಕ್ಕೆ ಸೇರಿದ ವರ್ಷಾ ಸಿನಿಮಾ ಹಿನ್ನೆಲೆಯನ್ನೂ ಹೊಂದಿದ್ದು, ತಮಿಳು ಸಿನಿಮಾವೊಂದರಲ್ಲಿ ಅವರು ನಟಿಸಿದ್ದಾರೆ. ಬಾಲ್ಯದಲ್ಲಿ ಜತೆಯಾಗಿ ಡ್ಯಾನ್ಸ್ ಮಾಡಿದ್ದ ವಿನಾಯಕ್-ವರ್ಷಾ, 25 ವರ್ಷಗಳ ಬಳಿಕ ಕಾಮನ್ ಫ್ರೆಂಡ್ ಮೂಲಕ ಮತ್ತೊಮ್ಮೆ ಭೇಟಿಯಾಗಿದ್ದರು. ನಂತರ ಅವರ ಸ್ನೇಹ-ಭೇಟಿ ಮತ್ತೆ ಮುಂದುವರಿದಿತ್ತು.