ಕ್ರೀಡೆ

ವಿಪಿಎಲ್ ಕ್ರಿಕೆಟ್​ಗೆ ಚಾಲನೆ: ಇಂದು ಸೆಮಿಫೈನಲ್, ಫೈನಲ್ ಪಂದ್ಯಗಳು

ಬೆಂಗಳೂರು: ಕನ್ನಡದ ನಂ.1 ವಿಜಯವಾಣಿ ದಿನಪತ್ರಿಕೆ ತಮ್ಮ ಉದ್ಯೋಗಿಗಳಿಗಾಗಿ ಬೆಂಗಳೂರು ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಜ್ಞಾನಭಾರತಿ ದೈಹಿಕ ಶಿಕ್ಷಣ ಮೈದಾನದಲ್ಲಿ ಆಯೋಜಿಸಿರುವ ವಿಜಯವಾಣಿ ಪ್ರೀಮಿಯರ್ ಲೀಗ್​ಗೆ (ವಿಪಿಎಲ್)ಗೆ ಶನಿವಾರ ಚಾಲನೆ ದೊರೆಯಿತು.

ಎರಡು ದಿನಗಳ ಪಂದ್ಯಾವಳಿಗೆ ಸಂಗೀತ ನಿರ್ದೇಶಕ ಮತ್ತು ಬಿಗ್ ಬಾಸ್ ಖ್ಯಾತಿಯ ವಾಸುಕಿ ವೈಭವ್ ಮತ್ತು ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಡಾ. ಕೆ.ಆರ್. ವೇಣುಗೋಪಾಲ್ ಚಾಲನೆ ನೀಡಿದರು.

ಮೊದಲ ದಿನ ‘ಮಯೂರ’, ‘ಜಿಲ್ಲಾ ತಂಡ-2’ ‘ವಿ ರಾಕರ್ಸ್’, ‘ಟೀಂ ಸಮುರಾಯ್’, ‘ಮೊಫಿಷಿಯಲ್ ಮಾರ್ವಲೆಸ್’, ‘ಸರ್ಕ್ಯೂಲೇಷನ್ ಚೀತಾ’, ‘ಜನೋ ಜಾಕ್ಸ್’, ‘ಪ್ರಿಂಟಿಂಗ್’ ತಂಡಗಳು ಸ್ಪರ್ಧಿಸಿದ್ದವು. ಜಿಲ್ಲಾ ತಂಡ-2, ‘ಟೀಂ ಸಮುರಾಯ್’,‘ಸರ್ಕ್ಯೂಲೇಷನ್ ಚೀತಾ’ ‘ಪ್ರಿಂಟಿಂಗ್’ ತಮ್ಮ ಪಂದ್ಯಗಳನ್ನು ಗೆದ್ದು ಸೆಮಿಫೈನಲ್ ತಲುಪಿವೆ.

ಪತ್ರಕರ್ತರು ತಮ್ಮ ಕೆಲಸದ ಒತ್ತಡದಿಂದ ಹೊರಬಂದು ಸ್ವಲ್ಪ ರಿಲಾಕ್ಸ್ ಮಾಡಲು ಇಂಥ ಪಂದ್ಯಾವಳಿಗಳು ಆವಶ್ಯಕ. ವಿಜಯವಾಣಿ ಬಳಗದ ಮೊದಲ ಪ್ರಯತ್ನ ಮೆಚ್ಚಬೇಕು. | ಬಿ.ಕೆ. ರವಿ ಬೆಂ. ವಿವಿ ಕುಲಸಚಿವ

ಕ್ರೀಡಾಸಕ್ತಿ ಮೆರೆದ ಮಹಿಳೆಯರು

ಪಂದ್ಯಾವಳಿಯಲ್ಲಿ ಮಹಿಳೆಯರಿಗೆ ಅವಕಾಶ ನೀಡಲೆಂದು ಪ್ರತಿ ತಂಡದಲ್ಲಿ ಆಟಗಾರ್ತಿ ಇರಬೇಕೆಂಬ ನಿಯಮ ರೂಪಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಮಹಿಳಾ ಉದ್ಯೋಗಿಗಳು ಕೂಡ ಪಂದ್ಯಗಳಲ್ಲಿ ಪಾಲ್ಗೊಂಡು, ಕ್ರೀಡಾಸಕ್ತಿ ಮೆರೆದರು.

ಬೆಂ.ವಿವಿ ಕುಲಸಚಿವ ಡಾ. ಬಿ.ಕೆ.ರವಿ, ಕುಲಸಚಿವ (ಮೌಲ್ಯಮಾಪನ) ಸಿ. ಶಿವರಾಜು, ವಿಜಯವಾಣಿ ಸಂಪಾದಕ ಕೆ.ಎನ್. ಚನ್ನೇಗೌಡ, ಬೆಂ. ವಿವಿ ದೈಹಿಕ ಶಿಕ್ಷಣ ಕಾಲೇಜಿನ ಪ್ರಾಂಶುಪಾಲ ಡಾ. ಪಿ.ಸಿ. ಕೃಷ್ಣಸ್ವಾಮಿ, ಮುಖ್ಯ ಅಭಿಯಂತರ ಬಿ.ಟಿ. ಚಂದ್ರಶೇಖರ್ ಮತ್ತಿತರರಿದ್ದರು.

ಕುಲಪತಿ ಭರ್ಜರಿ ಬ್ಯಾಟಿಂಗ್!

ಬೆಂಗಳೂರು ವಿವಿ ಕುಲಪತಿ ಡಾ. ಕೆ.ಆರ್. ವೇಣುಗೋಪಾಲ್ ಎಡಗೈನಲ್ಲಿ ಬ್ಯಾಟಿಂಗ್ ಮಾಡಿ ಬೌಂಡರಿಯತ್ತ ಚೆಂಡನ್ನು ಅಟ್ಟುವ ಮೂಲಕ ಕಾಲೇಜಿನ ದಿನಗಳನ್ನು ನೆನಪು ಮಾಡಿಕೊಂಡರು. ಆ ದಿನಗಳಲ್ಲಿ ನಾನು ಬೆಂ.ವಿವಿಯನ್ನು ಪ್ರತಿನಿಧಿಸುತ್ತಿದ್ದೆ ಎಂದರು.

ಇಂದು ಸೆಮಿ ಮತ್ತು ಫೈನಲ್ ಪಂದ್ಯಗಳು

ವಿಪಿಎಲ್​ನ ಸೆಮಿಫೈನಲ್ಸ್ ಮತ್ತು ಫೈನಲ್ ಪಂದ್ಯಗಳು ಭಾನುವಾರ ನಡೆಯಲಿವೆ. ವಿನ್ನರ್ ಮತ್ತು ರನ್ನರ್ ತಂಡಕ್ಕೆ ಪ್ರತ್ಯೇಕವಾಗಿ ಟ್ರೋಫಿ ನೀಡಲಾಗುತ್ತದೆ. ಪಂದ್ಯ ಶ್ರೇಷ್ಠ ಮತ್ತು ಸರಣಿ ಶ್ರೇಷ್ಠ ಪ್ರಶಸ್ತಿಗಳನ್ನು ಸಹ ನೀಡಲಾಗುತ್ತದೆ. ಈ ಎಲ್ಲ ಟ್ರೋಫಿಗಳನ್ನು ‘ಪ್ಲಾನೆಟ್ ಸ್ಪೋರ್ಟ್ಸ್’ ಪ್ರಾಯೋಜಿಸಿದೆ.

ಚಿತ್ರನಟ ವಿಕ್ಕಿ ವರುಣ್ ಭಾಗಿ

ವಿಪಿಲ್ ಪಂದ್ಯಾವಳಿಯ ವಿಜೇತರಿಗೆ ‘ಕೆಂಡ ಸಂಪಿಗೆ’ ಚಿತ್ರದ ನಟ ವಿಕ್ಕಿ ವರುಣ್ ಪ್ರಶಸ್ತಿ ವಿತರಿಸಲಿದ್ದಾರೆ. ಪ್ಲಾನೆಟ್ ಸ್ಪೋರ್ಟ್ಸ್​ನ ಪ್ರಶಾಂತ್ ಮತ್ತು ವಿಆರ್​ಎಲ್ ಮೀಡಿಯಾ ಅಡ್ಮಿನ್ ಮ್ಯಾನೇಜರ್ ಶೋಭಾ ಕುಲಕರ್ಣಿ ಉಪಸ್ಥಿತರಿರುವರು.

ಸ್ಪೂರ್ತಿ ತುಂಬಿದ ವಿಜಯವಾಣಿ ಸಹೋದ್ಯೋಗಿಗಳು

ಇದು ವಿಜಯವಾಣಿ ಉದ್ಯೋಗಿಗಳಿಗಾಗಿ ಆಯೋಜಿಸಿರುವ ಪಂದ್ಯಾವಳಿಯಾಗಿದ್ದರಿಂದ, ವಿಜಯವಾಣಿ ಎಲ್ಲ ವಿಭಾಗದ ಉದ್ಯೋಗಿಗಳು ಮೈದಾನಕ್ಕೆ ಬಂದು ಸಹೋದ್ಯೋಗಿಗಳ ಎಲ್ಲ ತಂಡಗಳಿಗೆ ಸ್ಪೂರ್ತಿ ತುಂಬಿದರು. ಇದು ಚೊಚ್ಚಲ ಪಂದ್ಯಾವಳಿಯಾಗಿದ್ದರಿಂದ, ಈ ಬಗ್ಗೆ ಎಲ್ಲರಿಗೂ ಕುತೂಹಲವಿತ್ತು. ಆಟದಲ್ಲಿ ಸೋಲು-ಗೆಲವು ಸಾಮಾನ್ಯ ಎಂದು ಭಾವಿಸಿ ಉದ್ಯೋಗಿಗಳು ಕ್ರೀಡಾ ಸ್ಪೂರ್ತಿ ಮೆರೆದದ್ದು ವಿಶೇಷವಾಗಿತ್ತು.