ಒಟ್ಟಾವಾ: ಈಕೆಯ ವಯಸ್ಸು ಏಳು ವರ್ಷ ಅಷ್ಟೇ. ಭಾರ ಎತ್ತುವುದೆಂದರೆ ಬಲು ಸಲೀಸು ಈಕೆಗೆ. ದೊಡ್ಡವರು ಎತ್ತುವ ಭಾರವನ್ನು ಈಕೆ ನಾಜೂಕಾಗಿ ಎತ್ತಿ ಭೇಷ್ ಅನ್ನಿಸಿಕೊಂಡಿದ್ದಾಳೆ. ಭಾರ ಎತ್ತುವ ಶೈಲಿಗಳ ಪೈಕಿ ಡೆಡ್ಲಿಫ್ಟ್, ಸ್ನ್ಯಾಚ್, ಕ್ಲೀನ್ ಆ್ಯಂಡ್ ಜರ್ಕ್, ಸ್ಕ್ವಾಟ್ಗಳಲ್ಲಿ ತನ್ನ ಪ್ರತಿಭೆ ತೋರಿಸಿ ಮೆಚ್ಚುಗೆ ಪಡೆದುಕೊಂಡಿದ್ದಾಳೆ.
ಕೆನಡಾದ ಈ ಪುಟಾಣಿ ವೇಟ್ಲಿಫ್ಟರ್ ಹೆಸರು ರೋರಿ ವ್ಯಾನ್. 4 ಅಡಿ ಉದ್ದ ಇರುವ ಈಕೆ ಈಗ 80 ಕಿಲೋ ಡೆಡ್ಲಿಫ್ಟ್, 32 ಕಿಲೋ ಸ್ನ್ಯಾಚ್, 42 ಕಿಲೋ ಕ್ಲೀನ್ ಆ್ಯಂಡ್ ಜರ್ಕ್ ವೇಟ್ಲಿಫ್ಟಿಂಗ್ ಮಾಡುವ ಸಾಮರ್ಥ್ಯ ಹೊಂದಿದ್ದಾಳೆ. ಇಷ್ಟಾಗ್ಯೂ ನೀವು ಇಂಪ್ರೆಸ್ ಆಗಿಲ್ಲ ಅನ್ನೋದಾದರೆ, 61 ಕಿಲೋ ಸ್ಕ್ಯಾಟ್ ಕೂಡ ಮಾಡಿ ತೋರಿಸ್ತಾಳೆ ಈಕೆ.
ಐದನೇ ಹುಟ್ಟುಹಬ್ಬದ ದಿನ ವೇಟ್ ಲಿಫ್ಟಿಂಗ್ ತರಬೇತಿ ಪಡೆಯಲಾರಂಭಿಸಿದ ಈಕೆ ಎರಡು ವರ್ಷದ ಅವಧಿಯಲ್ಲಿ ಉತ್ತಮ ಸಾಧನೆ ತೋರಿದ್ದಾಳೆ. ಕಳೆದ ವಾರ ಅಮೆರಿಕದಲ್ಲಿ ನಡೆದ ವೇಟ್ಲಿಫ್ಟಿಂಗ್ನಲ್ಲಿ 30 ಕಿಲೋ ವಿಭಾಗದಲ್ಲಿ ಅಂಡರ್ 11, ಅಂಡರ್ 13 ಯೂತ್ ನ್ಯಾಷನಲ್ ಚಾಂಪಿಯನ್ ಆಗಿದ್ದಳು. ಸದ್ಯದ ಮಟ್ಟಿಗೆ ವೇಟ್ ಲಿಫ್ಟಿಂಗ್ ಇತಿಹಾಸದಲ್ಲಿ ಏಳು ವರ್ಷದ ಬಾಲಕ/ಬಾಲಕಿಯರ ಪೈಕಿ ಈಕೆಯೇ ಬಲಿಷ್ಠ ವೇಟ್ಲಿಫ್ಟರ್ ಎಂದು ಈಕೆಯ ತಂದೆ ಕಾವನ್ ವ್ಯಾನ್ ಹೇಳಿದ್ದಾರೆ. (ಏಜೆನ್ಸೀಸ್)
ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್ಗಾಗಿ ನಮ್ಮ ಫೇಸ್ಬುಕ್ ಪುಟ ಲೈಕ್ ಮಾಡಿ ಮತ್ತು ಫಾಲೋ ಮಾಡಿ..