ಶ್ರೇಯಾಂಕಾ ಪಾಟೀಲ್  ಏಜೆನ್ಸಿ
ಕ್ರೀಡೆ

ಶ್ರೇಯಾಂಕಾ ಪಾಟೀಲ್ ಆಟಕ್ಕೆ ಒಲಿಯದ ಜಯ: ಸೋತರೂ ಫೈನಲ್​ಗೇರಿದ ಕರ್ನಾಟಕ ಮಹಿಳಾ ತಂಡ

ಶ್ರೇಯಾಂಕಾ ಪಾಟೀಲ್ (71*ರನ್, 29 ಎಸೆತ, 7 ಬೌಂಡರಿ, 5 ಸಿಕ್ಸರ್) ಸ್ಫೋಟಕ ಬ್ಯಾಟಿಂಗ್ ಹೊರತಾಗಿಯೂ ಕರ್ನಾಟಕ ತಂಡ ಬಿಸಿಸಿಐ ಮಹಿಳಾ ಟಿ20 ದೇಶೀಯ ಟೂರ್ನಿಯ ಸೂಪರ್ ಲೀಗ್‌ನಲ್ಲಿ ದೆಹಲಿ ಎದುರು 3 ವಿಕೆಟ್‌ಗಳಿಂದ ಪರಾಭವಗೊಂಡಿತು

ಅಹಮದಾಬಾದ್: ಶ್ರೇಯಾಂಕಾ ಪಾಟೀಲ್ (71*ರನ್, 29 ಎಸೆತ, 7 ಬೌಂಡರಿ, 5 ಸಿಕ್ಸರ್) ಸ್ಫೋಟಕ ಬ್ಯಾಟಿಂಗ್ ಹೊರತಾಗಿಯೂ ಕರ್ನಾಟಕ ತಂಡ ಬಿಸಿಸಿಐ ಮಹಿಳಾ ಟಿ20 ದೇಶೀಯ ಟೂರ್ನಿಯ ಸೂಪರ್ ಲೀಗ್‌ನಲ್ಲಿ ದೆಹಲಿ ಎದುರು 3 ವಿಕೆಟ್‌ಗಳಿಂದ ಪರಾಭವಗೊಂಡಿತು. ಈ ಸೋಲಿನ ಹೊರತಾಗಿಯೂ ಸೂಪರ್ ಲೀಗ್ ಎ ಗುಂಪಿನಲ್ಲಿ ಅಗ್ರಸ್ಥಾನ ಕಾಯ್ದುಕೊಂಡ ಶುಭಾ ಸತೀಶ್ ಬಳಗ ೈನಲ್‌ಗೇರಿದ್ದು, ಬಿ ಗುಂಪಿನ ಅಗ್ರಸ್ಥಾನಿ ರೈಲ್ವೇಸ್ ಎದುರು ಶುಕ್ರವಾರ ಪ್ರಶಸ್ತಿಗಾಗಿ ಸೆಣಸಲಿದೆ. ಮೊದಲು ಬ್ಯಾಟಿಂಗ್ ನಡೆಸಿದ ಕರ್ನಾಟಕ ತಂಡ 86 ರನ್‌ಗೆ 5 ವಿಕೆಟ್ ಕಳೆದುಕೊಂಡಾಗ ಕ್ರೀಸ್‌ಗಿಳಿದ ಶ್ರೇಯಾಂಕಾ ಚೊಚ್ಚಲ ಟಿ20 ಅರ್ಧಶತಕ ಸಿಡಿಸಿದರು. ಈ ಮೂಲಕ ಕರ್ನಾಟಕ 8 ವಿಕೆಟ್‌ಗೆ 175 ರನ್ ಪೇರಿಸಿತು. ಪ್ರತಿಯಾಗಿ ದೆಹಲಿ ತನಿಷಾ ಸಿಂಗ್ (77*)-ಶ್ವೇತಾ ಸೆಹ್ರಾವತ್ (53) ಭರ್ಜರಿ ಜತೆಯಾಟದ ನೆರವಿನಿಂದ 17 ಓವರ್‌ಗಳಲ್ಲಿ 7 ವಿಕೆಟ್‌ಗೆ 178 ರನ್‌ಗಳಿಸಿ, ಕರ್ನಾಟಕದ ಸತತ 9 ಪಂದ್ಯಗಳ ಅಜೇಯ ಓಟಕ್ಕೆ ಬ್ರೇಕ್ ಹಾಕಿತು.