ಪಿಟಿ ಉಷಾ ಸಂಗ್ರಹ ಚಿತ್ರ
ಕ್ರೀಡೆ

ಎಸ್​ಒಎಂ ಚುನಾವಣೆಯಲ್ಲಿ ಸೋತ ಪಿಟಿ ಉಷಾ!

ಸೈನಾ, ಅಂಜು, ಡೋಲಾ, ರಾಣಿ ಆಯ್ಕೆ

ನವದೆಹಲಿ: ಭಾರತೀಯ ಒಲಿಂಪಿಕ್ಸ್​ ಸಂಸ್ಥೆಯ (ಐಒಎ) ಹಾಲಿ ಅಧ್ಯೆ ಪಿ.ಟಿ. ಉಷಾ, ಅತ್ಯುತ್ತಮ ಅರ್ಹತೆಯ ಮಹಿಳಾ ಕ್ರೀಡಾಪಟು (ಎಸ್​ಒಎಂ) ಚುನಾವಣೆಯಲ್ಲಿ ಸೋಲು ಕಂಡಿದ್ದಾರೆ. ಮಾಜಿ ಬ್ಯಾಡ್ಮಿಂಟನ್​ ತಾರೆ ಸೈನಾ ನೆಹ್ವಾಲ್​, ಮಾಜಿ ಲಾಂಗ್​ಜಂಪ್​ ತಾರೆ ಅಂಜು ಬಾಬಿ ಜಾರ್ಜ್​, ಮಾಜಿ ಬಿಲ್ಗಾರ್ತಿ ಡೋಲಾ ಬ್ಯಾನರ್ಜಿ ಮತ್ತು ಹಾಕಿ ತಂಡದ ಮಾಜಿ ನಾಯಕಿ ರಾಣಿ ರಾಂಪಾಲ್​ ನಾಲ್ವರು ಮಹಿಳಾ ಎಸ್​ಒಎಂಗಳಾಗಿ ಆಯ್ಕೆಯಾಗಿದ್ದಾರೆ.

ತಲಾ 40 ಪುರುಷ-ಮಹಿಳೆಯರನ್ನು ಒಳಗೊಂಡಂತೆ 80 ಮಾಜಿ ಕ್ರೀಡಾತಾರೆಯರು ಮತದಾನ ಮಾಡಿದರು. ಪುರುಷ ಎಸ್​ಒಎಂಗಳಾಗಿ ಮಾಜಿ ಶೂಟರ್​ ಗಗನ್​ ನಾರಂಗ್​, ಬಾಕ್ಸರ್​ ವಿಜೇಂದರ್​ ಸಿಂಗ್​, ಮಾಜಿ ಕುಸ್ತಿಪಟು ಯೋಗೇಶ್ವರ್​ ದತ್​ ಮತ್ತು ಮಾಜಿ ಟೇಬಲ್​ ಟೆನಿಸ್​ ಆಟಗಾರ ಕಮಲೇಶ್​ ಮೆಹ್ತಾ ಶನಿವಾರವೇ ಅವಿರೋಧ ಆಯ್ಕೆಯಾಗಿದ್ದರು.

ಇನ್ನು ಯಾವುದಾದರೂ ರಾಷ್ಟ್ರೀಯ ಕ್ರೀಡಾ ಒಕ್ಕೂಟ (ಎನ್​ಎಸ್​ಎಫ್​​) ನಾಮನಿರ್ದೇಶನ ಮಾಡಿದರೆ ಮಾತ್ರ ಪಿ.ಟಿ. ಉಷಾ ಡಿ.5ರ ಐಒಎ ಚುನಾವಣೆಯಲ್ಲಿ ಮರುಆಯ್ಕೆಗೆ ಸ್ಪರ್ಧಿಸಬಹುದಾಗಿದೆ.