ವಿಜೇತರೊಂದಿಗೆ ಕೆಎಸ್ಸಿಎ ಕಾರ್ಯದರ್ಶಿ ಸಚಿನ್ ಪಿ.ಎಸ್, ವಿನ್ಮೋರ್ ಅಕಾಡೆಮಿ ಪ್ರಾಂಶುಪಾಲ ಡೇವಿಡ್, ಪಂಚಜನ್ಯ ಅಕಾಡೆಮಿ ಸ್ಥಾಪಕ ಸುರೇಶ್ ಬಾಬು.
ಬೆಂಗಳೂರು: ಕರ್ನಾಟಕ ರಾಜ್ಯ ಚೆಸ್ ಸಂಸ್ಥೆ (ಕೆಎಸ್ಸಿಎ) ಆಶ್ರಯದಲ್ಲಿ ಆಯೋಜಿಸಿದ್ದ 7 ವಯೋಮಿತಿ ಓಪನ್ ಹಾಗೂ ಬಾಲಕಿಯರ ಚೆಸ್ (Chess) ಚಾಂಪಿಯನ್ಷಿಪ್ನಲ್ಲಿ ಕ್ರಮವಾಗಿ ನಿಮಲನ ಧರಣಿಪತಿ, ರಿಹಾನ್ಯಿ ಮುನಗಾಲಾ ಪ್ರಶಸ್ತಿ ಗೆದ್ದುಕೊಂಡಿದ್ದು, ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆಯಲಿರುವ ರಾಷ್ಟ್ರೀಯ ಚೆಸ್ ಚಾಂಪಿಯನ್ಷಿಪ್ನಲ್ಲಿ ಕರ್ನಾಟಕವನ್ನು ಪ್ರತಿನಿಧಿಸಲಿದ್ದಾರೆ.
ಓಪನ್ ವಿಭಾಗದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಿಮಲನ ಅಂತಿಮ ಸುತ್ತಿನಲ್ಲಿ ಸಾತ್ವಿಕ್ ವಿ ಭಟ್ರನ್ನು ಮಣಿಸಿ 9 ಅಂಕದೊಂದಿಗೆ ಅಗ್ರಸ್ಥಾನ ಪಡೆದರೆ, ಸೈಷನ್ ಸೂರ್ಯ ಸಿ. (7.5 ಅಂಕ) ದ್ವೀತಿಯ ಸ್ಥಾನಕ್ಕೆ ತೃಪ್ತಿಪಟ್ಟರು. ಬಾಲಕಿಯರ ವಿಭಾಗದಲ್ಲಿ ಬೆಂಗಳೂರಿನ ರಿಹಾನ್ಯಿ 9 ಅಂಕಗಳಿಸಿದರೆ, ಧನಿಷ್ಕಾ ಗಣೇಶ್ 7 ಅಂಕದೊಂದಿಗೆ ರನ್ನರ್ ಅಪ್ ಎನಿಸಿದರು.