ಮುಂಬೈ: ಪೊಲೀಸ್ ಸಮವಸ್ತ್ರ ಧರಿಸಿರುವ ಯುವಕನೊಬ್ಬ ಕ್ರಿಕೆಟ್ ನೆಟ್ಸ್ನಲ್ಲಿ ಅಭ್ಯಾಸ ನಿರತ ಬ್ಯಾಟ್ಸ್ಮನ್ಗೆ ಭರ್ಜರಿ ವೇಗದ ಬೌಲಿಂಗ್ ಮಾಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಶುಕ್ರವಾರ ವೈರಲ್ ಆಗಿದೆ. ಅಲ್ಲದೆ ಆತನ ಬೌಲಿಂಗ್ ಕೌಶಲಕ್ಕೂ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
ಐದು ಬಾರಿಯ ಐಪಿಎಲ್ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. ಇದರ ಬೆನ್ನಲ್ಲೇ ಕ್ರಿಕೆಟ್ ಪ್ರೇಮಿಗಳು ಅದನ್ನು ವ್ಯಾಪಕವಾಗಿ ಹಂಚಿಕೊಂಡಿದ್ದಾರೆ.
"ಹಲೋ 100, ಉರಿವೇಗದ ಬೌಲಿಂಗ್ಗಾಗಿ ನಾವು ದೂರು ದಾಖಲಿಸಲು ಬಯಸುತ್ತೇವೆ' ಎಂದು ಮುಂಬೈ ಇಂಡಿಯನ್ಸ್ ತಂಡ ಟ್ವಿಟರ್ನಲ್ಲಿ ವಿಡಿಯೋ ಹಂಚಿಕೊಂಡಿದೆ. ಆದರೆ ಈ ಪೊಲೀಸ್ ಯಾರು? ಯಾಕೆ ನೆಟ್ಸ್ನಲ್ಲಿ ಸಮವಸ್ತ್ರದಲ್ಲೇ ಬೌಲಿಂಗ್ ನಡೆಸಿದರು ಎಂಬುದು ಸ್ಪಷ್ಟವಾಗಿಲ್ಲ. ಸ್ಥಳಿಯ ಅಕಾಡೆಮಿಯೊಂದರ ವಿಡಿಯೋ ಇದಾಗಿದೆ ಎಂದು ಹೇಳಲಾಗುತ್ತಿದೆ.