ದುಬೈ: ಪ್ರಸಕ್ತ ಐಪಿಎಲ್‌ನಲ್ಲಿ ಅತಿವೇಗದ ಎಸೆತ ಎಸೆದ ವೇಗ ಬೌಲರ್ ಎಂಬ ಹಿರಿಮೆಗೆ ಪಾತ್ರರಾಗಿದ್ದ ಸನ್‌ರೈಸರ್ಸ್ ಹೈದರಾಬಾದ್ ತಂಡದ ಉಮ್ರಾನ್ ಮಲಿಕ್, ಮುಂಬರುವ ಟಿ20 ವಿಶ್ವಕಪ್ ಟೂರ್ನಿ ವೇಳೆ ಭಾರತ ತಂಡದ ನೆಟ್‌ಬೌಲರ್ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಜಮ್ಮು ಕಾಶ್ಮೀರ 21 ವರ್ಷದ ಉಮ್ರಾನ್, ಸನ್‌ರೈಸರ್ಸ್ ಪರ ಆಡಿದ 4 ಪಂದ್ಯಗಳಲ್ಲಿ ಉತ್ತಮ ಬೌಲಿಂಗ್ ಮೂಲಕ ಗಮನಸೆಳೆದಿದ್ದರು. ‘ಉಮ್ರಾನ್ ಮಲಿಕ್ ರಾಷ್ಟ್ರೀಯ ತಂಡದೊಂದಿಗೆ ನೆಟ್ ಬೌಲರ್ ಆಗಿ ಕಾರ್ಯನಿರ್ವಹಿಸಲಿದ್ದಾರೆ. ನೆಟ್ಸ್‌ನಲ್ಲಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮರಂಥ ಗುಣಮಟ್ಟದ ಬೌಲರ್‌ಗಳಿಗೆ ಬೌಲಿಂಗ್ ಮಾಡುವ ಅವಕಾಶ ಅವರಿಗೆ ಲಭಿಸಲಿದೆ’ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
ಕಳೆದ ಬುಧವಾರ ಉಮ್ರಾನ್ ಮಲಿಕ್ ಆರ್‌ಸಿಬಿ ಎದುರು 153 ಕಿಲೋಮೀಟರ್ ವೇಗವಾಗಿ ಎಸೆತವೊಂದನ್ನು ಎಸೆದಿದ್ದರು. ಜಮ್ಮು ಕಾಶ್ಮೀರದಿಂದ ಐಪಿಎಲ್ ಆಡಿದ 3ನೇ ಆಟಗಾರ ಎನಿಸಿಕೊಂಡಿದ್ದರು. ಇದುವರೆಗೂ ಆಡಿರುವ 4 ಟಿ20 ಪಂದ್ಯಗಳಿಂದ 5 ವಿಕೆಟ್ ಕಬಳಿಸಿದ್ದಾರೆ.