ನವದೆಹಲಿ: ಪ್ರಸಕ್ತ ದೆಹಲಿಯಲ್ಲಿ ನಡೆಯುತ್ತಿರುವ ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟೆಸ್ಟ್ನ ( IND vs WI Test) ನಾಲ್ಕನೇ ದಿನದಾಟದಲ್ಲಿ ಆನ್ಫೀಲ್ಡ್ ಅಂಪೈರ್ ಕೊಟ್ಟ ತೀರ್ಪಿನ ವಿರುದ್ಧ ಸದ್ಯ ಟೀಮ್ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ ಅಸಮಾಧಾನಗೊಂಡಿದ್ದಾರೆ.
ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ 2ನೇ ಟೆಸ್ಟ್ ಪಂದ್ಯದ 4ನೇ ದಿನದ ಮೊದಲ ಇನ್ನಿಂಗ್ಸ್ನಲ್ಲಿ ಜಾನ್ ಕ್ಯಾಂಪ್ಬೆಲ್ಗೆ ಬೌಲ್ ಮಾಡಿದ ಜಸ್ಪ್ರೀತ್ ಬುಮ್ರಾ, ತಮ್ಮ ಓವರ್ನಲ್ಲಿ ಜಾನ್ ಎಲ್‌ಬಿಡಬ್ಲ್ಯೂ ಆಗಿದ್ದಾರೆ ಎಂದು ಆನ್ಫೀಲ್ಡ್ ಅಂಪೈರ್ನತ್ತ ಕೂಗಿದರು. ಆದರೆ, ಇದಕ್ಕೆ ಔಟ್ ಕೊಡದ ಹಿನ್ನಲೆ ಥರ್ಡ್ ಅಂಪೈರ್‌ಗೆ ಬುಮ್ರಾ ಮೇಲ್ಮನವಿ ಸಲ್ಲಿಸಿದರು. ಆದರೆ, ಅಲ್ಲಿಯೂ ತನ್ನ ಪರ ತೀರ್ಪು ಬರದಿದ್ದಾಗ ಆನ್ಫೀಲ್ಡ್ ಅಂಪೈರ್ ಮೇಲೆ ತಮ್ಮ ಬೇಸರ, ಅಸಮಾಧಾನವನ್ನು ವ್ಯಕ್ತಪಡಿಸಿದರು. ಈ ದೃಶ್ಯ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.
ಇದನ್ನೂ ಓದಿ: ಕರಗಿದ ಯುದ್ಧದ ಕಾರ್ಮೋಡ: 2 ವರ್ಷದ ಬಳಿಕ ಇಸ್ರೇಲಿ ಒತ್ತೆಯಾಳುಗಳಿಗೆ ಹಮಾಸ್ನಿಂದ ಬಿಡುಗಡೆ ಭಾಗ್ಯ! Israeli Hostages
55ನೇ ಓವರ್‌ನ ಐದನೇ ಎಸೆತದಲ್ಲಿ ಈ ಘಟನೆ ನಡೆಯಿತು. ಬುಮ್ರಾ ಎಸೆದ ಚೆಂಡು, ಕ್ಯಾಂಪ್‌ಬೆಲ್ ಅವರ ಪ್ಯಾಡ್‌ಗಳಿಗೆ ತಗುಲಿ, ಹೊರ ಹೋಯಿತು. ಇದು ಖಚಿತವಾಗಿ ಔಟ್ ಎಂದೇ ಬುಮ್ರಾ ಡಿಆರ್ಎಸ್ಗೆ ಮನವಿ ಮಾಡಿದರು. ಈ ಪರಿಶೀಲನೆಯಲ್ಲಿ, ಚೆಂಡು ಬ್ಯಾಟ್ ಮತ್ತು ಪ್ಯಾಡ್ ಎರಡರ ಮಧ್ಯೆ ಹಾದುಹೋದಾಗ ಅಲ್ಟ್ರಾಎಡ್ಜ್‌ನಲ್ಲಿ ಸ್ವಲ್ಪ ಸ್ಪೈಕ್ ಕಂಡುಬಂದಿದೆ. ಇದನ್ನು ಔಟ್ ಎಂದು ನಿರ್ಣಯಿಸಲು ಸಾಧ್ಯವಾಗದ ಹಿನ್ನೆಲೆ ಮೂರನೇ ಅಂಪೈರ್ ಅಲೆಕ್ಸ್ ವಾರ್ಫ್, ಆನ್ಫೀಲ್ಡ್ ಅಂಪೈರ್‌ಗೆ ನಿಮ್ಮ ನಿರ್ಧಾರಕ್ಕೆ ಬದ್ಧರಾಗಿ ಎಂದರು. ಹೀಗೇಳುತ್ತಿದ್ದಂತೆ, ಅದು ನಾಟೌಟ್ ಎಂದು ರಿಚರ್ಡ್ಸ್ ಘೋಷಿಸಿದರು.
ಇನ್ನು ಅಂಪೈರ್ ನಿರ್ಧಾರದಿಂದ ಹಾಗೂ ಒಂದು ರಿವ್ಯೂವ್ ಕಳೆದುಕೊಂಡ ಬೇಸರದಿಂದ ಅಂಪೈರ್ನತ್ತ ಸಾಗಿದ ಬುಮ್ರಾ, ಇದು ಔಟ್ ಅಂತ ನಿಮಗೆ ಗೊತ್ತಿತ್ತು. ಆದರೆ, ಟೆಕ್ನಾಲಜಿಗೆ ಇದನ್ನು ಸಾಬೀತುಪಡಿಸಲು ಸಾಧ್ಯವಾಗಲಿಲ್ಲ ಎಂದು ನಗುತ್ತಲೇ ಹೇಳಿದರು,(ಏಜೆನ್ಸೀಸ್).