ಅಲ್ ಅಮಿರತ್ (ಓಮನ್): ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಹಾಗೂ ಪಾಕಿಸ್ತಾನ ತಂಡಗಳು 19 ವಯೋಮಿತಿ ಏಷ್ಯಾಕಪ್ ಏಕದಿನ ಟೂರ್ನಿಯಲ್ಲಿ ಭಾನುವಾರ ಮುಖಾಮುಖಿ ಆಗಲಿವೆ. ಕಳೆದ ಆವೃತ್ತಿಯ ಸೋಲಿಗೆ ಮುಯ್ಯಿ ತೀರಿಸಿಕೊಳ್ಳುವ ಅವಕಾಶ ಭಾರತ ತಂಡದ ಮುಂದಿದೆ.
ನೇಪಾಳ ವಿರುದ್ಧ 10 ವಿಕೆಟ್ಗಳ ಜಯ ಸಾಧಿಸಿದ್ದ ಭಾರತ, 128 ರನ್ ಗುರಿಯನ್ನು 19.1 ಓವರ್ಗಳಲ್ಲಿ ಯಶಸ್ವಿಯಾಗಿ ಚೇಸ್ ಮಾಡಿತ್ತು. ಪಾಕಿಸ್ತಾನ ತಂಡ ತನ್ನ ಮೊದಲ ಪಂದ್ಯದಲ್ಲಿ ಯುಎಇ ಎದುರು 9 ವಿಕೆಟ್ಗಳಿಂದ ಜಯಿಸಿದ್ದು, 225 ರನ್ ಗುರಿಯನ್ನು 37.3 ಓವರ್ಗಳಲ್ಲಿ ಯಶಸ್ವಿಯಾಗಿ ಬೆನ್ನಟ್ಟಿತ್ತು. ಎ ಗುಂಪಿನ ಅಗ್ರಸ್ಥಾನಕ್ಕೆ ಎರಡು ತಂಡಗಳು ಕಾದಾಟ ನಡೆಸಲಿದ್ದು, ಗೆದ್ದ ತಂಡ ಸೆಮಿಫೈನಲ್ ಸ್ಥಾನವನ್ನೂ ಬಹುತೇಕ ಖಾತ್ರಿಪಡಿಕೊಳ್ಳಲಿದೆ. ಹಿಂದಿನ ಪಂದ್ಯದಲ್ಲಿ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಪುತ್ರ ಆರ್ಯವೀರ್ ಸೆಹ್ವಾಗ್ ಅಜೇಯ 70 ರನ್ ಕಲೆಹಾಕಿದ್ದು, ಉತ್ತಮ ಲಯದಲ್ಲಿದ್ದಾರೆ. ನಾಯಕ ಲಕ್ಷ$್ಯ ಸಹ ಅಜೇಯ 53 ರನ್ಗಳಿಸಿ ಆರ್ಯವೀರ್ಗೆ ಸಮರ್ಥ ಬೆಂಬಲ ನೀಡಿದ್ದರು.
ದಿಗ್ಗಜ ರಾಹುಲ್ ದ್ರಾವಿಡ್ ಕಿರಿಯ ಪುತ್ರ ಹಾಗೂ ಕನ್ನಡಿಗ ಅನ್ವಯ್ ದ್ರಾವಿಡ್ ವಿಕೆಟ್ ಕೀಪರ್-ಬ್ಯಾಟರ್ ಆಗಿ ಮುಂದುವರಿಯಲಿದ್ದಾರೆ. ಪಾಕ್ ಬೌಲರ್ಗಳ ಎದುರು ಭಾರರತೀಯ ಬ್ಯಾಟರ್ಗಳಿಗೆ ಕಠಿಣ ಪರೀಕ್ಷೆ ಎದುರಾಗುವ ನಿರೀಕ್ಷೆ ಇದೆ. ದುಬೈನಲ್ಲಿ ನಡೆದ ಕಳೆದ ಆವೃತ್ತಿಯಲ್ಲಿ ಭಾರತ 191 ರನ್ಗಳಿಂದ ಸೋಲು ಅನುಭವಿಸಿತ್ತು. ಆಗ, ಪಾಕ್ ತಂಡವನ್ನು ಮುನ್ನಡೆಸಿದ್ದ ರ್ಹಾನ್ ಯೂಸ್ ಹಾಲಿ ಆವೃತ್ತಿಯಲ್ಲೂ ನಾಯಕನಾಗಿದ್ದಾರೆ. ಟೂರ್ನಿಯಲ್ಲಿ ಒಟ್ಟು 8 ತಂಡಗಳು ಭಾಗವಹಿಸಿದ್ದು, ನವೆಂಬರ್ 14ಕ್ಕೆ ಫೈನಲ್ ನಿಗದಿಯಾಗಿದೆ.
ಆರಂಭ: ಬೆಳಗ್ಗೆ 10.30
ನೇರಪ್ರಸಾರ: ಸೋನಿ ಸ್ಪೋರ್ಟ್ಸ್ ನೆಟ್ವರ್ಕ್.