RCB-CSK : ಮೇ.3ರಂದು ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಚೈನ್ನೈ ಸೂಪರ್ ಕಿಂಗ್ಸ್- ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಂದ್ಯ ಕ್ರೀಡಾಭಿಮಾನಿಗಳಲ್ಲಿ ಮರೆಯಾಲಾರದ ಪಂದ್ಯವಾಗಿದೆ. ಆರ್ಸಿಬಿ ಪರ ರೋಮಾರಿಯೋ ಶೆಫರ್ಡ್ ಆಡಿದ ಆಟ(14 ಎಸೆತಕ್ಕೆ 53 ರನ್) ಮತ್ತು 2 ರನ್ಗಳ ಆರ್ಸಿಬಿಗೆ ರೋಚಕ ಜಯ ದಾಖಲಾಗಿದೆ.
ಈ ಪಂದ್ಯದ ವೇಳೆ ಮೈದಾನದಲ್ಲಷ್ಟೇ ಅಲ್ಲ ಹೊರಗೂ ಎರಡು ಕುಟುಂಬಗಳ ನಡುಬೆ ಭಾರೀ ಜಗಳ ನಡೆದಿದೆ. ಅಲ್ಲದೆ, ಈ ಕುರಿತು ಕಬ್ಬನ್ಪಾರ್ಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಎನ್ಡಿಟಿ ವರದಿ ಮಾಡಿದೆ.
ವರದಿ ಪ್ರಕಾರ, ಇಬ್ಬರು ಉನ್ನತ ಸರ್ಕಾರಿ ಅಧಿಕಾರಿಗಳ ಕುಟುಂಬಗಳು ಘರ್ಷಣೆಯಲ್ಲಿ ಭಾಗಿಯಾಗಿವೆ. ಒಬ್ಬರು ಹಿರಿಯ ಐಪಿಎಸ್ ಅಧಿಕಾರಿ ಮತ್ತು ಇನ್ನೊಬ್ಬರು ಆದಾಯ ತೆರಿಗೆ ಆಯುಕ್ತರು ಎಂದು ವರದಿಯಾಗಿದೆ.
ಐಪಿಎಸ್ ಅಧಿಕಾರಿಯ ಮಗ ಮತ್ತು ಮಗಳು ಹಾಗೂ ತೆರಿಗೆ ಆಯುಕ್ತರ ಕುಟುಂಬದ ವ್ಯಕ್ತಿಯ ನಡುವಿನ ವಾಗ್ವಾದವೇ ಈ ಘಟನೆಗೆ ಕಾರಣ ಎಂದು ವರದಿ ಉಲ್ಲೇಖಿಸಿದೆ.
ವಿಐಪಿ(VIP BOX) ಐಎಎಸ್ ಅಧಿಕಾರಿಯ ಮಗಳು ಮತ್ತು ಮಗ ಪಂದ್ಯ ನೋಡುತ್ತಾ ಕುಳಿತಿದ್ದರು. ಮಗಳು ಶೌಚಾಲಯಕ್ಕೆ ಹೋಗಿದ್ದಾಳೆ.ಬರುಷ್ಟರಲ್ಲಿ ಆಕೆಯ ಸೀಟು ಅನ್ನ ಬೇರೆಯವರು ಅಕ್ರಮಿಸಿಕೊಂಡಿದ್ದಾರೆ. ಸೀಟ್ ಕೇಳಿದ್ದಕ್ಕೆ ಆದಾಯ ತೆರಿಗೆ ಅಧಿಕಾರಿ ಕುಟುಂಬಸ್ಥ ವ್ಯಕ್ತಿ ನಿರಾಕರಣೆ ಮಾಡಿದ್ದಾನೆ. ಆಕೆಯ ಸಹೋದರ(ಐಎಎಸ್ ಅಧಿಕಾರಿ ಮಗ) ಕಟುಂಬಸ್ಥರ ಜತೆ ತೀವ್ರ ವಾಗ್ವಾದಕ್ಕಿಳಿದ್ದಾನೆ. ಕೆಲ ಸಮಯದ ನಂತರ ಮನೆಯಲ್ಲಿದ್ದ ಐಎಎಸ್ ಅಧಿಕಾರಿ ಮತ್ತು ಅತನ ಹಂಡತಿ ಮೈದಾನಕ್ಕೆ ಬಂತು ಆ ವ್ಯಕ್ತಿ ವಿರುದ್ಧ ದೂರು ದಾಖಲಿಸಿದ್ದಾರೆ.
ಇದನ್ನೂ ಓದಿ:ಏನಿದು ‘ಮಾಕ್ ಡ್ರಿಲ್’! ಕೇಂದ್ರ ಸರ್ಕಾರದ ಆದೇಶ ಹಿಂದಿರುವ ಉದ್ದೇಶವೇನು? ಈ ವೇಳೆ ಜನರೇನು ಮಾಡ್ಬೇಕು? | Mock Drill
ಈ ಘಟನೆ ರಾತ್ರಿ 9:40 ರಿಂದ 10:20 ರ ನಡುವೆ ನಡೆದಿದೆ. ಆರೋಪಿ ಮತ್ತು ಆತನ ಪತ್ನಿಯನ್ನು ಎರಡು ಗಂಟೆಗಳ ನಂತರ ಪೊಲೀಸ್ ಠಾಣೆಗೆ ಕರೆಸಲಾಯಿತು. ಆದರೆ, ನಂತರ ಹೊರಹೋಗಲು ಅವಕಾಶ ನೀಡಲಾಯಿತು. ತನಿಖೆಯ ನಂತರ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಹೇಳಿದ್ದಾರೆ ಎಂದು ವರದಿಯಾಗಿದೆ.(ಏಜೆನ್ಸೀಸ್)