ನವದೆಹಲಿ: 2022ರ ವರ್ಷಾಂತ್ಯದಲ್ಲಿ ದೆಹಲಿ-ಡೆಹ್ರಾಡೂನ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಕ್ರಿಕೆಟಿಗ ರಿಷಭ್ ಪಂತ್ (Rishabh Pant) ಗುಣಮುಖರಾಗಿ ಕ್ರಿಕೆಟ್ಗೆ ಮರಳಿದ್ದು, ತಮ್ಮ ಬಿರುಸಿನ ಬ್ಯಾಟಿಂಗ್ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ.
ಹೊಸ ವರ್ಷಕ್ಕೆ ತಾಯಿಗೆ ಸರ್ಪ್ರೈಸ್ ಕೊಡಲೆಂದು ತಮ್ಮ ತವರೂರಿಗೆ ಹೋಗುವಾಗ ಪಂತ್ ಚಲಾಯಿಸುತ್ತಿದ್ದ ಕಾರು ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡಿತ್ತು. ಇದನ್ನು ಗಮನಿಸಿದ ಉತ್ತರಾಖಂಡ ಸಾರಿಗೆ ಸಂಸ್ಥೆಯ ನೌಕರ ಹಾಗೂ ಸ್ಥಳೀಯರು ಪಂತ್ರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದರು. ಇದೀಗ ಪಂತ್ ಮಾಡಿರುವ ಈ ಒಂದು ಕೆಲಸ ಎಲ್ಲರ ಗಮನ ಸೆಳೆಯುತ್ತಿದ್ದು, ಕ್ರಿಕೆಟಿಗನ (Rishabh Pant) ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಅಪಘಾತದ ವೇಳೆ ತಮ್ಮನ್ನು ರಕ್ಷಿಸಿದವರಿಗೆ ಧನ್ಯವಾದ ಅರ್ಪಿಸಿರುವ ರಿಷಭ್ (Rishabh Pant) ಅವರಿಗೆ ವಿಶೇಷ ಉಡುಗೊರೆಯನ್ನು ನೀಡಿ ಸಹಾಯ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ರಿಷಭ್ ಪಂತ್ ಅಪಘಾತಕ್ಕೀಡಾಗಿದ್ದ ವೇಳೆ ಅವರನ್ನು ರಕ್ಷಿಸಿದ್ದ ಇಬ್ಬರು ಯುವಕರಿಗೆ ಕ್ರಿಕೆಟಿಗ ಹೊಸ ಹೋಂಡಾ ಆ್ಯಕ್ಟಿವಾ ಸ್ಕೂಟರ್ ಗಿಫ್ಟ್ ನೀಡಿದ್ದು, ರಿಷಭ್ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಪತ್ರಕರ್ತ ಭರತ್ ಸುಂದರೇಶನ್ ಎಂಬುವವರು ರಿಷಭ್ ಪಂತ್ ಯುವಕರಾದ ರಜತ್ ಹಾಗೂ ನಿಶುಗೆ ಅಪಘಾತದಿಂದ ಚೇತರಿಸಿಕೊಂಡ ಬಳಿಕ ಹೋಂಡಾ ಆ್ಯಕ್ಟಿವಾ ಸ್ಕೂಟರ್ ಗಿಫ್ಟ್ ನೀಡಿರುವ ವಿಚಾರವನ್ನು ರಿವೀಲ್ ಮಾಡಿದ್ದು, ಯುವರಕನ್ನು ಮಾತನಾಡಿಸಿದ್ಧಾರೆ. ಈ ವಿಡಿಯೋ ವೈರಲ್ ಆಗಿದ್ದು, ರಿಷಭ್ (Rishabh Pant) ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.