ಉನ್ನತಿ ಹೂಡಾ ಏಜೆನ್ಸಿ
ಕ್ರೀಡೆ

ಸಯ್ಯದ್​ ಮೋದಿ ಬ್ಯಾಡ್ಮಿಂಟನ್​ ಟೂರ್ನಿ: ಉಪಾಂತ್ಯಕ್ಕೇರಿದ ತ್ರೀಸಾ-ಗಾಯತ್ರಿ, ತನ್ವಿ, ಉನ್ನತಿ

ಹ್ಯಾಟ್ರಿಕ್​ ಪ್ರಶಸ್ತಿ ನಿರೀಕ್ಷೆಯಲ್ಲಿರುವ ಅಗ್ರ ಶ್ರೇಯಾಂಕಿತ ತ್ರೀಸಾ-ಗಾಯತ್ರಿ ಜೋಡಿ ಶುಕ್ರವಾರ ಕ್ವಾರ್ಟರ್​ಫೈನಲ್​ ಆಡದೆ ವಾಕ್​ಓವರ್​ ಮೂಲಕ ಮುನ್ನಡೆದರು.

ಲಖನೌ: ಆತಿಥೇಯ ಭಾರತದ ಹಾಲಿ ಚಾಂಪಿಯನ್​ ಡಬಲ್ಸ್​ ಜೋಡಿಯಾದ ತ್ರೀಸಾ ಜೋಲಿ-ಗಾಯತ್ರಿ ಗೋಪಿಚಂದ್​, ಮಹಿಳಾ ಸಿಂಗಲ್ಸ್​ ವಿಭಾಗದಲ್ಲಿ ತನ್ವಿ ಶರ್ಮ ಮತ್ತು ಉನ್ನತಿ ಹೂಡಾ ಅವರು ಸಯ್ಯದ್​ ಮೋದಿ ಅಂತಾರಾಷ್ಟ್ರೀಯ ಸೂಪರ್-300 ಬ್ಯಾಡ್ಮಿಂಟನ್​ ಟೂರ್ನಿಯಲ್ಲಿ ಉಪಾಂತ್ಯಕ್ಕೇರಿದ್ದಾರೆ.

ಹ್ಯಾಟ್ರಿಕ್​ ಪ್ರಶಸ್ತಿ ನಿರೀಕ್ಷೆಯಲ್ಲಿರುವ ಅಗ್ರ ಶ್ರೇಯಾಂಕಿತ ತ್ರೀಸಾ-ಗಾಯತ್ರಿ ಜೋಡಿ ಶುಕ್ರವಾರ ಕ್ವಾರ್ಟರ್​ಫೈನಲ್​ ಆಡದೆ ವಾಕ್​ಓವರ್​ ಮೂಲಕ ಮುನ್ನಡೆದರು. ಅವರ ಎದುರಾಳಿಯಾದ ಫ್ರಾನ್ಸ್​ನ ಮಾಗೋರ್ಟ್​ ಲಂರ್ಬಟ್​ ಮತ್ತು ಕ್ಯಾಮಿಲ್ಲೆ ಪೊಗ್ನಂಟೆ ಜೋಡಿ ಗಾಯದಿಂದಾಗಿ ಟೂರ್ನಿಯಿಂದ ಹಿಂದೆ ಸರಿಯಿತು.

ಮಹಿಳಾ ಸಿಂಗಲ್ಸ್​ 8ರ ಘಟ್ಟದಲ್ಲಿ 2ನೇ ಶ್ರೇಯಾಂಕಿತೆ 17 ವರ್ಷದ ತನ್ವಿ ಶರ್ಮ ಇಂಡೋನೇಷ್ಯಾದ ನಿ ಕಡೆಕ್​ ಧಿಂಡಾ ಅಮರ್ತ್ಯ ಪ್ರತಿವಿಗೆ 21-19, 18-21, 21-14ರಿಂದ ಸೋಲುಣಿಸಿದರೆ, 3ನೇ ಶ್ರೇಯಾಂಕಿತೆ ಉನ್ನತಿ ಹೂಡಾ ದೇಶಬಾಂಧವೆ ಅನ್ಮೋಲ್​ ರ್ಖಬ್​ ವಿರುದ್ಧ 21-19, 15-21, 21-18ರಿಂದ ಗೆದ್ದರು. ಸೆಮೀಸ್​ನಲ್ಲಿ ತನ್ವಿ-ಉನ್ನತಿ ಮುಖಾಮುಖಿ ಆಗಲಿದ್ದು, ಭಾರತದ ಓರ್ವ ಆಟಗಾರ್ತಿ ಫೈನಲ್​ಗೇರುವುದು ಖಚಿತಗೊಂಡಿದೆ. ಮಿಶ್ರ ಡಬಲ್ಸ್​ನಲ್ಲಿ ಭಾರತದ ಸಾತ್ವಿಕ್​ ರೆಡ್ಡಿ ಕನಪುರಂ ಮತ್ತು ರೆಶಿಕಾ ಉದಯಸೂರ್ಯನ್​ ಜೋಡಿ ಉಪಾಂತ್ಯಕ್ಕೇರಿದೆ.