ಟೋಕಿಯೋ: ಕೋವಿಡ್ 19 ಪಿಡುಗಿನ ಹಿನ್ನೆಲೆಯಲ್ಲಿ ಮುಂದೂಲ್ಪಟ್ಟಿರುವ ಟೋಕಿಯೋ ಒಲಿಂಪಿಕ್ಸ್ ನಿಖರವಾಗಿ ಒಂದು ವರ್ಷ ತಡವಾಗಿ ಆರಂಭವಾಗಲಿದೆ.
ಸೋಮವಾರ ಈ ಬಗ್ಗೆ ಮಾಹಿತಿ ನೀಡಿರುವ ಟೋಕಿಯೋ ಒಲಿಂಪಿಕ್ಸ್ ಸಂಟನಾ ಸಮಿತಿಯ ಅಧ್ಯಕ್ಷ ಯೋಶಿರೋ ಮೋರಿ ಮತ್ತು ಸಿಇಒ ಟೋಶಿರೋ ಮೊಟೋ 2021ರ ಜುಲೈ 23ರಿಂದ ಆಗಸ್ಟ್ 8ವರೆಗೆ ಕ್ರೀಡಾಕೂಟ ನಡೆಯಲಿದೆ ಎಂದು ಹೇಳಿದ್ದಾರೆ.
ಈ ಹಿಂದೆ ನಿಗದಿಯಾಗಿದ್ದಂತೆ ಟೋಕಿಯೋ ಒಲಿಂಪಿಕ್ಸ್ 2020ರ ಜುಲೈ 24ಕ್ಕೆ ಆರಂಭವಾಗಿ ಆಗಸ್ಟ್ 9ಕ್ಕೆ ಮುಕ್ತಾಯವಾಗಬೇಕಿತ್ತು. ಆದರೆ ಜಗತ್ತಿನಾದ್ಯಂತ ಕರೊನಾ ಪಿಡುಗು ಹಬ್ಬಿರುವ ಹಿನ್ನೆಲೆಯಲ್ಲಿ ಕ್ರೀಡಾಕೂಟವನ್ನು ಅನಿವಾರ್ಯವಾಗಿ ಮುಂದೂಡಬೇಕಾಗಿ ಬಂದಿತ್ತು.
ಈ ಹಿಂದೆ ಕ್ರೀಡಾಕೂಟವನ್ನು ಬೇಸಿಗೆಯ ಬದಲು ಜಪಾನ್ನ ವಸಂತಕಾಲದಲ್ಲಿ ಆಯೋಜಿಸುವ ಬಗ್ಗೆ ಚಿಂತನೆ ನಡೆದಿತ್ತು. ಆಗ ಜಪಾನ್ನಲ್ಲಿ ಚೆರ್ರಿ ಹಣ್ಣು ಕಟಾವಿಗೆ ಬಂದಿರುತ್ತದೆ ಎಂಬುದು ಇದಕ್ಕೆ ಕಾರಣವಾಗಿತ್ತು. ಆದರೆ ಯುರೋಪಿಯನ್ ಸಕರ್ ಮತ್ತು ನಾರ್ತ್ ಅಮೆರಿಕನ್ ಸ್ಪೋರ್ಟ್ಸ್ನ ದಿನಾಂಕದೊಂದಿಗೆ ತಾಕಲಾಟ ಉಂಟಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಬೇಸಿಗೆಯಲ್ಲೇ ಕ್ರೀಡಾಕೂಟ ಆಯೋಜಿಸುವ ಬಗ್ಗೆ ನಿರ್ಧರಿಸಲಾಯಿತು ಎನ್ನಲಾಗಿದೆ.