ಮುಂಬೈ: ಪ್ರೊ ಕಬಡ್ಡಿ ಲೀಗ್ 11ನೇ ಆವೃತ್ತಿಯ ಆಟಗಾರರ ಹರಾಜು ಪ್ರಕ್ರಿಯೆ ಗುರುವಾರ ಮತ್ತು ಶುಕ್ರವಾರ ಮುಂಬೈನಲ್ಲಿ ನಡೆಯಲಿದೆ. 500ಕ್ಕೂ ಅಧಿಕ ಆಟಗಾರರು ಹರಾಜಿನಲ್ಲಿ ಭಾಗವಹಿಸಲಿದ್ದಾರೆ. ಪ್ರದಿಪ್ ನರ್ವಾಲ್, ಪವನ್ ಸೆಹ್ರಾವತ್, ಮಣಿಂದರ್ ಸಿಂಗ್, ಸಚಿನ್ ಹರಾಜಿನಲ್ಲಿ ಕಾಣಿಸಿಕೊಳ್ಳಲಿರುವ ಪ್ರಮುಖ ಆಟಗಾರರಾಗಿದ್ದಾರೆ.
12 ತಂಡಗಳು ಈಗಾಗಲೆ ಒಟ್ಟು 88 ಆಟಗಾರರನ್ನು ರಿಟೇನ್ ಮಾಡಿಕೊಂಡಿದ್ದು, ಹರಾಜಿನಲ್ಲಿ ಗರಿಷ್ಠ 212 ಆಟಗಾರರ ಖರೀದಿಗೆ ಅವಕಾಶವಿದೆ. ಈ ಪೈಕಿ 22 ಎಲೈಟ್ ಆಟಗಾರರಾಗಿದ್ದಾರೆ. ಹರಾಜಿನಲ್ಲಿ ಆಟಗಾರರ ಖರೀದಿಗೆ ಪ್ರತಿ ತಂಡ 5 ಕೋಟಿ ರೂ. ಬಜೆಟ್ ಮಿತಿ ಹೊಂದಿದೆ. ಆಟಗಾರರನ್ನು ಎ, ಬಿ, ಸಿ, ಡಿ ಎಂಬ 4 ಕೆಟಗರಿಯಲ್ಲಿ ವಿಂಗಡಿಸಲಾಗಿದ್ದು, ಕ್ರಮವಾಗಿ 30, 20, 13, 9 ಲಕ್ಷ ರೂ. ಮೂಲಬೆಲೆ ಹೊಂದಿದ್ದಾರೆ.
ಆಲ್ರೌಂಡರ್, ರೈಡರ್, ಡಿೆಂಡರ್ಗಳೆಂದು ಪ್ರತ್ಯೇಕ ಪಟ್ಟಿಯಲ್ಲಿ ಆಟಗಾರರ ಹರಾಜು ಪ್ರಕ್ರಿಯೆ ನಡೆಯಲಿದೆ. ಪ್ರತಿ ತಂಡ ಕನಿಷ್ಠ 18ರಿಂದ ಗರಿಷ್ಠ 25 ಆಟಗಾರರನ್ನು ಹೊಂದಬಹುದಾಗಿದೆ. ಪ್ರತಿ ತಂಡ ಕನಿಷ್ಠ ಇಬ್ಬರು ಮತ್ತು ಗರಿಷ್ಠ ನಾಲ್ವರು ವಿದೇಶಿ ಆಟಗಾರರನ್ನು ಹೊಂದಿರಬೇಕು.
ಹರಾಜು ಪ್ರಕ್ರಿಯೆ ಆರಂಭ: ರಾತ್ರಿ 7.00
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಡಿಸ್ನಿ+ಹಾಟ್ಸ್ಟಾರ್.