ಮುಲ್ಲನ್ಪುರ: ಬೃಹತ್ ಮೊತ್ತ ಪೇರಿಸಿಯೂ ಅಭಿಷೇಕ್ ಶರ್ಮ ಬ್ಯಾಟಿಂಗ್ ಅಬ್ಬರದ ಎದುರು ಮಣಿದಿರುವ ಪಂಜಾಬ್ ಕಿಂಗ್ಸ್ ಮತ್ತು ಸಿಎಸ್ಕೆ ತಂಡವನ್ನು ಅಲ್ಪ ಮೊತ್ತಕ್ಕೆ ಕಟ್ಟಿಹಾಕಿ ಭರ್ಜರಿ ಗೆಲುವು ದಾಖಲಿಸಿರುವ ಕೋಲ್ಕತ ನೈಟ್ರೈಡರ್ಸ್ ತಂಡಗಳು ಐಪಿಎಲ್ 18ನೇ ಆವೃತ್ತಿಯಲ್ಲಿ ಮಂಗಳವಾರ ಮುಖಾಮುಖಿ ಆಗಲಿವೆ. ಕಳೆದ ವರ್ಷ ಕೆಕೆಆರ್ ನಾಯಕರಾಗಿ ಚಾಂಪಿಯನ್ ಪಟ್ಟಕ್ಕೇರಿಸಿದ್ದ ಶ್ರೇಯಸ್ ಅಯ್ಯರ್ ಈ ಬಾರಿ ಅದೇ ತಂಡದ ವಿರುದ್ಧ ಪಂಜಾಬ್ ಕಿಂಗ್ಸ್ ನಾಯಕರಾಗಿ ಆಡಲಿದ್ದು, ಮಾಜಿ ತಂಡದ ವಿರುದ್ಧ ಅವರ ನಿರ್ವಹಣೆ ಕುತೂಹಲ ಕೆರಳಿಸಿದೆ.
ಅಜಿಂಕ್ಯ ರಹಾನೆ ಪಡೆ ಆಡಿದ 6 ಪಂದ್ಯಗಳಲ್ಲಿ ತಲಾ 3 ಜಯ, ಸೋಲಿನೊಂದಿಗೆ ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದ್ದರೆ, ಪಂಜಾಬ್ ಕಿಂಗ್ಸ್ 5 ಪಂದ್ಯಗಳಲ್ಲಿ 3 ಜಯ, 2 ಸೋಲಿನೊಂದಿಗೆ 6ನೇ ಸ್ಥಾನದಲ್ಲಿದೆ. ಉಭಯ ತಂಡಗಳು ತಲಾ 6 ಅಂಕ ಗಳಿಸಿದ್ದರೂ, ರನ್ರೇಟ್ ಲೆಕ್ಕಾಚಾರದಲ್ಲಿ ಕೆಕೆಆರ್ ಮುನ್ನಡೆ ಸಾಧಿಸಿದೆ. ಈ ಪಂದ್ಯದಲ್ಲಿ ಗೆದ್ದ ತಂಡಕ್ಕೆ ಅಂಕಪಟ್ಟಿಯಲ್ಲಿ ಪ್ರಗತಿ ಸಾಧಿಸುವ ಅವಕಾಶವಿದೆ.
*ಮುಖಾಮುಖಿ: 33
ಪಂಜಾಬ್: 12
ಕೆಕೆಆರ್: 21
ಆರಂಭ: ರಾತ್ರಿ 7.30
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಹಾಟ್ಸ್ಟಾರ್
ಪಂಜಾಬ್ಗೆ ಬ್ಯಾಟಿಂಗ್ ಶಕ್ತಿ
ಪಂಜಾಬ್ ತಂಡ ಟೂರ್ನಿಯಲ್ಲಿ ಇದುವರೆಗೆ 3 ಪಂದ್ಯಗಳಲ್ಲಿ 200 ಪ್ಲಸ್, ಅದರಲ್ಲೂ 2ರಲ್ಲಿ 240 ಪ್ಲಸ್ ಮೊತ್ತ ಪೇರಿಸಿದೆ. ಇದು ಪಂಜಾಬ್ ತಂಡದ ಬ್ಯಾಟಿಂಗ್ ವಿಭಾಗದ ಶಕ್ತಿಗೆ ಸಾಯಾಗಿದೆ. ಈ ಬಾರಿ ಬಲಿಷ್ಠ ಬೌಲಿಂಗ್ ವಿಭಾಗವನ್ನು ಹೊಂದಿರುವ ಕೆಕೆಆರ್ ಎದುರು ಪಂಜಾಬ್ ಬ್ಯಾಟಿಂಗ್ ವಿಭಾಗಕ್ಕೆ ಸತ್ವ ಪರೀೆ ಎದುರಾಗಲಿದೆ. ನಾಯಕ ಶ್ರೇಯಸ್, ಪ್ರಿಯಾಂಶ್, ಪ್ರಭ್ಸಿಮ್ರನ್, ನೇಹಲ್ ವಧೇರ, ಶಶಾಂಕ್ ಸಿಂಗ್, ಸ್ಟೋಯಿನಿಸ್ ಬ್ಯಾಟಿಂಗ್ ವಿಭಾಗಕ್ಕೆ ಬಲ ತುಂಬಿದ್ದಾರೆ. ಬೌಲಿಂಗ್ನಲ್ಲಿ ಕಳೆದ ಪಂದ್ಯದಲ್ಲಿ ಎಡಗೈ ವೇಗಿ ಅರ್ಷದೀಪ್ ಸಿಂಗ್ ಒಬ್ಬರೇ ಪ್ರತಿಹೋರಾಟ ನಡೆಸಿದ್ದರು. ಲಾಕಿ ಗ್ಯುರ್ಸನ್ ಗಾಯ ದೊಡ್ಡ ಹಿನ್ನಡೆಯಾಗಿತ್ತು. ಇದಲ್ಲದೆ ಗ್ಲೆನ್ ಮ್ಯಾಕ್ಸ್ವೆಲ್ ಮತ್ತು ಸ್ಪಿನ್ನರ್ ಯಜುವೇಂದ್ರ ಚಾಹಲ್ ವೈಲ್ಯ ಪಂಜಾಬ್ಗೆ ಹೊಡೆತ ನೀಡುತ್ತಿದೆ. ಮ್ಯಾಕ್ಸ್ವೆಲ್ 5 ಪಂದ್ಯಗಳಲ್ಲಿ 34 ರನ್ ಮಾತ್ರ ಗಳಿಸಿದ್ದರೆ, ಚಾಹಲ್ ಕೇವಲ ಎರಡೇ ವಿಕೆಟ್ ಗಳಿಸಿದ್ದಾರೆ.
ವಿಶ್ವಾಸದಲ್ಲಿ ಕೆಕೆಆರ್
ಅಸ್ಥಿರ ನಿರ್ವಹಣೆಯ ನಡುವೆ ಕಳೆದ ಪಂದ್ಯದಲ್ಲಿ ಸಿಎಸ್ಕೆ ತಂಡವನ್ನು 103 ರನ್ಗಳಿಗೆ ಕಟ್ಟಿಹಾಕಿ ಗೆದ್ದಿರುವುದು ಕೆಕೆಆರ್ ಆತ್ಮವಿಶ್ವಾಸವನ್ನು ವೃದ್ಧಿಸಿದೆ. ಸ್ಪಿನ್ನರ್ಗಳಾದ ವರುಣ್ ಚಕ್ರವರ್ತಿ, ಸುನೀಲ್ ನಾರಾಯಣ್, ವೇಗಿಗಳಾದ ಹರ್ಷಿತ್ ರಾಣಾ, ವೈಭವ್ ಅರೋರ ಪಂಜಾಬ್ ಬ್ಯಾಟಿಂಗ್ ವಿಭಾಗವನ್ನು ಕಟ್ಟಿಹಾಕುವ ಸವಾಲು ಹೊಂದಿದ್ದಾರೆ. ಬ್ಯಾಟಿಂಗ್ನಲ್ಲಿ ಡಿಕಾಕ್, ನಾರಾಯಣ್, ರಹಾನೆ, ರುವಂಶಿ, ರಿಂಕು ಸಿಂಗ್ ಉತ್ತಮ ಲಯದಲ್ಲಿದ್ದಾರೆ. ಆಂಡ್ರೆ ರಸೆಲ್ ಅವರ ಸ್ಫೋಟಕ ಹೊಡೆತಗಳನ್ನಷ್ಟೇ ಕೆಕೆಆರ್ ತಂಡ ಸದ್ಯಕ್ಕೆ ಮಿಸ್ ಮಾಡಿಕೊಳ್ಳುತ್ತಿದೆ.