ನವದೆಹಲಿ: ಮಧ್ಯಮ ಕ್ರಮಾಂಕದ ವೈಲ್ಯದಿಂದಾಗಿ ಸತತ 2 ಸೋಲು ಅನುಭವಿಸಿ ತತ್ತರಿಸಿರುವ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಮತ್ತು ಪ್ರಮುಖ ಆಟಗಾರರ ಗೈರಿನ ನಡುವೆಯೂ ಕಳೆದ ಪಂದ್ಯದಲ್ಲಿ ಚೇತೋಹಾರಿ ಗೆಲುವು ದಾಖಲಿಸಿರುವ ರಾಜಸ್ಥಾನ ರಾಯಲ್ಸ್ ತಂಡಗಳು ಐಪಿಎಲ್-14ರಲ್ಲಿ ಗುರುವಾರದ ಮೊದಲ ಪಂದ್ಯದಲ್ಲಿ ಮುಖಾಮುಖಿ ಆಗಲಿವೆ. ಚೆನ್ನೆ$ ಚರಣದಲ್ಲಿ ಆಡಿದ 5 ಪಂದ್ಯಗಳಲ್ಲಿ 2ರಲ್ಲಷ್ಟೇ ಗೆದ್ದು, 3ರಲ್ಲಿ ಸೋತಿರುವ ರೋಹಿತ್ ಶರ್ಮ ಬಳಗ ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಾದರೂ ಗೆಲುವಿನ ಲಯ ಕಂಡುಕೊಳ್ಳುವ ತವಕದಲ್ಲಿದೆ. ಸಂಜು ಸ್ಯಾಮ್ಸನ್ ಸಾರಥ್ಯದ ರಾಜಸ್ಥಾನ ತಂಡವೂ ಆಡಿದ 5 ಪಂದ್ಯಗಳಲ್ಲಿ 2ರಲ್ಲಷ್ಟೇ ಗೆದ್ದು, 3ರಲ್ಲಿ ಸೋತಿದ್ದು, ಕಳೆದ ಪಂದ್ಯದಲ್ಲಿ ಕೆಕೆಆರ್ ವಿರುದ್ಧ ಸಿಕ್ಕ ಗೆಲುವಿನ ಲಯವನ್ನು ಕಾಯ್ದುಕೊಳ್ಳುವ ಹಂಬಲದಲ್ಲಿದೆ. ಇದು ಹಗಲು ಪಂದ್ಯವಾಗಿರುವುದರಿಂದ ಇಬ್ಬನಿ ಸಮಸ್ಯೆ ಪಂದ್ಯಕ್ಕೆ ಯಾವುದೇ ರೀತಿಯಲ್ಲೂ ಬಾಧಿಸುವ ಭೀತಿ ಇಲ್ಲ. ಹೀಗಾಗಿ ಟಾಸ್ ಕೂಡ ನಿರ್ಣಾಯಕ ಪಾತ್ರ ವಹಿಸದು ಎನ್ನಲಾಗಿದೆ.
ಮುಂಬೈಗೆ ಬ್ಯಾಟಿಂಗ್ ಕಳವಳ
ರೋಹಿತ್ ಶರ್ಮ (201 ರನ್) ಟೂನಿರ್ಯಲ್ಲಿ ಮುಂಬೈಗೆ ಉತ್ತಮ ಆರಂಭ ಒದಗಿಸುವಲ್ಲಿ ಸಲರಾಗುತ್ತಿದ್ದಾರೆ. ಆದರೆ ಮಧ್ಯಮ ಕ್ರಮಾಂಕದಲ್ಲಿ ಇಶಾನ್ ಕಿಶನ್ (73 ರನ್) ಹಾದಿರ್ಕ್ ಪಾಂಡ್ಯ (36 ರನ್), ಕೃನಾಲ್ ಪಾಂಡ್ಯ (29) ಮತ್ತು ಕೈರಾನ್ ಪೊಲ್ಲಾರ್ಡ್ (65 ರನ್) ಅವರಿಂದ ಸಮರ್ಥ ಆಟ ಬರುತ್ತಿಲ್ಲ. ಇದು ಮುಂಬೈಗೆ ಬೃಹತ್ ಮೊತ್ತ ಪೇರಿಸಲು ಅಡ್ಡಿಯಾಗುತ್ತಿದೆ. ಇದೀಗ ಫಿರೋಜ್ ಷಾ ಕೋಟ್ಲಾ ಮೈದಾನದ ಪಿಚ್ನಲ್ಲಾದರೂ ಬ್ಯಾಟ್ಸ್ಮನ್ಗಳು ರನ್ಪ್ರವಾಹ ಹರಿಸುವ ನಿರೀೆ ಮುಂಬೈ ತಂಡದ್ದಾಗಿದೆ. ಎಂದಿನಂತೆ ಬೌಲಿಂಗ್ ವಿಭಾಗ ಬಲಿಷ್ಠವಾಗಿದ್ದು, ಮುಂಬೈಗೆ ಈ ವಿಚಾರದಲ್ಲಿ ಯಾವುದೇ ತಲೆನೋವು ಇಲ್ಲ. ಆದರೆ ಜಯಂತ್ ಯಾದವ್ ಮತ್ತೊಂದು ಅವಕಾಶ ಪಡೆಯುವ ಸಾಧ್ಯತೆ ಇಲ್ಲ.
ಸ್ಟಾರ್ಸ್ ಗೈರಿನ ಹಿನ್ನಡೆಯಲ್ಲಿ ರಾಯಲ್ಸ್
ಜೋಫ್ರಾ ಆರ್ಚರ್, ಬೆನ್ ಸ್ಟೋಕ್ಸ್, ಲಿಯಾಮ್ ಲಿವಿಂಗ್ಸ್ಟೋನ್ ಮತ್ತು ಆಂಡ್ರ್ಯೂ ಟೈ ಅವರಂಥ ವಿದೇಶಿ ಸ್ಟಾರ್ಗಳು ವಿವಿಧ ಕಾರಣಗಳಿಂದಾಗಿ ತಂಡದಿಂದ ಹೊರಗುಳಿದಿರುವ ನಡುವೆಯೂ ರಾಜಸ್ಥಾನ ತಂಡ ಕಳೆದ ಪಂದ್ಯದಲ್ಲಿ ಗೆಲುವಿನ ಹಾದಿಗೆ ಮರಳಿತ್ತು. ಆದರೆ ತಂಡದ ಬ್ಯಾಟಿಂಗ್ ಕ್ರಮಾಂಕ ಇನ್ನೂ ಸ್ಪಷ್ಟತೆ ಕಂಡಿಲ್ಲ. ಜೋಸ್ ಬಟ್ಲರ್ ಮತ್ತು ನಾಯಕ ಸಂಜು ಸ್ಯಾಮ್ಸನ್ ಬ್ಯಾಟಿಂಗ್ನಲ್ಲೇ ಇನ್ನೂ ಸ್ಥಿರತೆ ಮೂಡಿಲ್ಲ. ಶಿವಂ ದುಬೆ, ಡೇವಿಡ್ ಮಿಲ್ಲರ್ ಮತ್ತು ರಿಯಾನ್ ಪರಾಗ್ ಉತ್ತಮ ಆರಂಭ ಪಡೆಯುತ್ತಿದ್ದರೂ, ಅದನ್ನು ದೊಡ್ಡ ಮೊತ್ತವಾಗಿ ಪರಿವತಿರ್ಸುತ್ತಿಲ್ಲ. ಆಲ್ರೌಂಡರ್ ಕ್ರಿಸ್ ಮಾರಿಸ್ (9 ವಿಕೆಟ್, 48 ರನ್) ತಮಗೆ ನೀಡಲಾಗಿರುವ ಬೃಹತ್ ಸಂಭಾವನೆಗೆ ನ್ಯಾಯ ಸಲ್ಲಿಸುವ ಪ್ರಯತ್ನದಲ್ಲಿದ್ದಾರೆ. ಬೌಲಿಂಗ್ನಲ್ಲಿ ಚೇತನ್ ಸಕಾರಿಯ, ಜೈದೇವ್ ಉನಾದ್ಕತ್ ಮತ್ತು ಮುಸ್ತಾಫಿಜುರ್ ಉತ್ತಮ ದಾಳಿಯನ್ನೇ ಸಂಟಿಸುತ್ತಿದ್ದಾರೆ. ಆದರೆ ಸ್ಪಿನ್ನರ್ಗಳಾದ ರಾಹುಲ್ ತೆವಾಟಿಯಾ ಮತ್ತು ಕನ್ನಡಿಗ ಶ್ರೇಯಸ್ ಗೋಪಾಲ್ ನಿರ್ವಹಣೆ ಕಳವಳಕಾರಿಯಾಗಿದೆ.
ಮುಂಬೈ ಇಂಡಿಯನ್ಸ್: ಕ್ವಿಂಟನ್ ಡಿಕಾಕ್ ಅಸ್ಥಿರ ನಿರ್ವಹಣೆಯಿಂದಾಗಿ ರೋಹಿತ್ಗೆ ಉತ್ತಮ ಆರಂಭಿಕ ಸಾಥ್ ಲಭಿಸಿಲ್ಲ. ಹೀಗಾಗಿ ಕ್ರಿಸ್ ಲ್ಯಾನ್ ಮತ್ತೆ ಕಣಕ್ಕಿಳಿಯುವ ಸಾಧ್ಯತೆ ತಳ್ಳಿಹಾಕುವಂತಿಲ್ಲ. ಲಯದಲ್ಲಿಲ್ಲದ ಪಾಂಡ್ಯ ಸಹೋದರರಲ್ಲಿ ಒಬ್ಬರು ಹೊರಗುಳಿದರೂ ಅಚ್ಚರಿ ಇಲ್ಲ. ಜಯಂತ್ ಯಾದವ್ ಬದಲಿಗೆ ಆಡಂ ಮಿಲ್ನೆ ಮರಳಿ ಕಣಕ್ಕಿಳಿಯಬಹುದು.
ಕಳೆದ ಪಂದ್ಯ: ಪಂಜಾಬ್ ಕಿಂಗ್ಸ್ ವಿರುದ್ಧ 9 ವಿಕೆಟ್ ಸೋಲು.
ರಾಜಸ್ಥಾನ ರಾಯಲ್ಸ್: ಆಡಿದ 5 ಪಂದ್ಯಗಳಲ್ಲಿ 1 ವಿಕೆಟ್ ಮಾತ್ರ ಕಬಳಿಸಿರುವ ಸ್ಪಿನ್ನರ್ ರಾಹುಲ್ ತೆವಾಟಿಯಾ ಈ ಬಾರಿ ಕಳೆದ ಸಲದಷ್ಟು ಪರಿಣಾಮಕಾರಿ ಎನಿಸಿಲ್ಲ. ಶ್ರೇಯಸ್ ಗೋಪಾಲ್ ಕೂಡ ಕಳೆದ 2 ಪಂದ್ಯಗಳಲ್ಲಿ ವಿಕೆಟ್ ಗಳಿಸಿಲ್ಲ. ಆದರೆ ತಂಡದಲ್ಲಿ ಸದ್ಯ ಇವರಿಗೆ ಬದಲಿ ಆಯ್ಕೆಯಾಗಿ ಮತ್ತೋರ್ವ ಸ್ಪಿನ್ನರ್ ಹಾಗೂ ಕನ್ನಡಿಗ ಕೆಸಿ ಕಾರ್ಯಪ್ಪ ಲಭ್ಯರಿದ್ದಾರೆ. ವಿದೇಶಿ ಆಟಗಾರರ ಬದಲಾವಣೆಗಂತೂ ತಂಡದಲ್ಲಿ ಬದಲಿ ಆಯ್ಕೆಯೇ ಲಭ್ಯವಿಲ್ಲ.
ಕಳೆದ ಪಂದ್ಯ: ಕೆಕೆಆರ್ ವಿರುದ್ಧ 6 ವಿಕೆಟ್ ಜಯ.
ಮುಖಾಮುಖಿ: 22
ಮುಂಬೈ: 11
ರಾಜಸ್ಥಾನ: 11
ಆರಂಭ: ಮಧ್ಯಾಹ್ನ 3.30
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್