ಕ್ರೀಡೆ

ಐಸಿಸಿ ವರ್ಷದ ಟೆಸ್ಟ್​ ತಂಡದಲ್ಲಿ ಮೂವರು ಭಾರತೀಯರಿಗೆ ಸ್ಥಾನ

ನವದೆಹಲಿ: ವೇಗಿ ಜಸ್​ಪ್ರೀತ್​ ಬುಮ್ರಾ, ಆಲ್ರೌಂಡರ್​ ರವೀಂದ್ರ ಜಡೇಜಾ ಮತ್ತು ಆರಂಭಿಕ ಯಶಸ್ವಿ ಜೈಸ್ವಾಲ್​ ಸಹಿತ ಭಾರತದ ಮೂವರು ಆಟಗಾರರು ಐಸಿಸಿಯ 2024ರ ಸಾಲಿನ ವರ್ಷದ ಟೆಸ್ಟ್​ ತಂಡದಲ್ಲಿ ಸ್ಥಾನ ಸಂಪಾದಿಸಿದ್ದಾರೆ. ಆಸ್ಟ್ರೆಲಿಯಾದ ಪ್ಯಾಟ್​ ಕಮ್ಮಿನ್ಸ್​ ಈ ತಂಡದ ನಾಯಕರಾಗಿ ಆಯ್ಕೆಯಾಗಿದ್ದಾರೆ. ಐಸಿಸಿ ವರ್ಷದ ಏಕದಿನ ತಂಡದಲ್ಲಿ ಭಾರತ, ಆಸೀಸ್​, ಇಂಗ್ಲೆಂಡ್​, ದ. ಆಫ್ರಿಕಾದ ಒಬ್ಬರೂ ಆಟಗಾರರಿಲ್ಲ. ಶ್ರೀಲಂಕಾ (4), ಅಫ್ಘಾನಿಸ್ತಾನ (3), ಪಾಕಿಸ್ತಾನ (3) ಪ್ರಾಬಲ್ಯ ಸಾಧಿಸಿದೆ.

ಐಸಿಸಿ ವರ್ಷದ ಟೆಸ್ಟ್​ ತಂಡ: ಜೈಸ್ವಾಲ್​, ಬೆನ್​ ಡಕೆಟ್​, ವಿಲಿಯಮ್ಸನ್​, ರೂಟ್​, ಹ್ಯಾರಿ ಬ್ರೂಕ್​, ಕಮಿಂಡು ಮೆಂಡಿಸ್​, ಜೇಮಿ ಸ್ಮಿತ್​ (ವಿ.ಕೀ), ಜಡೇಜಾ, ಕಮ್ಮಿನ್ಸ್​ (ನಾಯಕ), ಮ್ಯಾಟ್​ ಹೆನ್ರಿ, ಬುಮ್ರಾ.

ಮಹಿಳಾ ಏಕದಿನ ತಂಡದಲ್ಲಿ ಭಾರತದ ಸ್ಮೃತಿ, ದೀಪ್ತಿಗೆ ಸ್ಥಾನ

ಐಸಿಸಿ ಪ್ರಕಟಿಸಿರುವ ವರ್ಷದ ಮಹಿಳಾ ಏಕದಿನ ತಂಡದಲ್ಲಿ ಭಾರತದ ಸ್ಮೃತಿ ಮಂದನಾ ಮತ್ತು ದೀಪ್ತಿ ಶರ್ಮ ಸ್ಥಾನ ಪಡೆದಿದ್ದಾರೆ. ದಕ್ಷಿಣ ಆಫ್ರಿಕಾದ ಲೌರಾ ವೊಲ್ವಾರ್ಡ್​ ಈ ತಂಡದ ನಾಯಕಿಯಾಗಿದ್ದಾರೆ.

ವರ್ಷದ ಮಹಿಳಾ ಏಕದಿನ ತಂಡ: ಸ್ಮೃತಿ, ವೊಲ್ವಾರ್ಡ್​ (ನಾಯಕಿ), ಚಾಮರಿ ಅಟಪಟ್ಟು, ಹ್ಯಾಲಿ ಮ್ಯಾಥ್ಯೂಸ್​, ಮರಿಜಾನ್​ ಕಾಪ್​, ಗಾರ್ಡ್​ನರ್​, ಸುದರ್​ಲ್ಯಾಂಡ್​, ಆಮಿ ಜೋನ್ಸ್​ (ವಿ.ಕೀ), ದೀಪ್ತಿ ಶರ್ಮ, ಎಕ್ಲೆಸ್ಟೋನ್​, ಕೇಟ್​ ಕ್ರಾಸ್​.