ಕ್ರೀಡೆ

IPL 2024: ಈ ಸೀಸನ್​ನಲ್ಲಿ ಕ್ರಿಕೆಟ್ ಫ್ಯಾನ್ಸ್​ಗಳ ಮುಂದೆ ಕಾಣಿಸಿಕೊಳ್ಳದ ಸ್ಟಾರ್​ ಆಟಗಾರರಿವರು!

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ (IPL) 2024ರ ಆವೃತ್ತಿಗೆ ಸದ್ಯ ದಿನಗಣನೆ ಆರಂಭಗೊಂಡಿದ್ದು, ಈ ಬಾರಿ ಅದ್ದೂರಿ ಓಪನಿಂಗ್​ ಕಾರ್ಯಕ್ರಮ ಚೆನ್ನೈನ ಚೇಪಾಕ್​ ಸ್ಟೇಡಿಯಂನಲ್ಲಿ ನಡೆಯಲಿದೆ. ಈ ಕುರಿತು ಈಗಾಗಲೇ ಬಿಸಿಸಿಐ ಅಧಿಕೃತ ಮಾಹಿತಿ ಪ್ರಕಟಿಸಿದ್ದು, ಈ ಸೀಸನ್​ನ ಮೊದಲ 21 ದಿನಗಳ ಪಂದ್ಯಗಳ ವೇಳಾಪಟ್ಟಿಯನ್ನು ಸಹ ಬಿಡುಗಡೆಗೊಳಿಸಿದೆ.

ಮಾರ್ಚ್​​ 22ರಂದು ನಡೆಯಲಿರುವ ಐಪಿಎಲ್​ 2024ರ ಕಿಕ್​ಸ್ಟಾರ್ಟ್​ ಪಂದ್ಯದಲ್ಲಿ ವಿರಾಟ್ ಕೊಹ್ಲಿ ನಾಯಕತ್ವದ ರಾಯಲ್ ಚಾಲೆಂಜರ್ಸ್​ ಬೆಂಗಳೂರು ಮತ್ತು ಐದು ಬಾರಿ ಚಾಂಪಿಯನ್ಸ್​ ಪಟ್ಟ ಅಲಂಕರಿಸಿರುವ ಮಹೇಂದ್ರ ಸಿಂಗ್​ ಧೋನಿ ಕ್ಯಾಪ್ಟನ್ಸಿಯ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು​ ಸೆಣಸಾಡಲಿದೆ. ಮೊದಲ ಪಂದ್ಯದ ಮೂಲಕ ಯಾರು ಈ ಸೀಸನ್​ ಶುಭಾರಂಭ ಮಾಡಲಿದ್ದಾರೆ ಎಂಬುದು ಸದ್ಯ ಕ್ರಿಕೆಟ್ ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿಸುತ್ತಿದೆ.

ಒಂದೆಡೆ ಈ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ಸ್ಟಾರ್ ಆಟಗಾರರು ಕಣಕ್ಕಿಳಿಯುವ ಮೂಲಕ ಭರ್ಜರಿ ಮನರಂಜನೆ ನೀಡಲು ಸಜ್ಜಾದರೆ, ಮತ್ತೊಂದೆಡೆ ಬಹುನಿರೀಕ್ಷಿತ ಆಟಗಾರರೇ ಈ ಸೀಸನ್​ನಿಂದ ಹೊರಗುಳಿದಿದ್ದಾರೆ. ಹಾಗಾದ್ರೆ, ಯಾವ ತಂಡದ ಸ್ಟಾರ್​ ಕ್ರಿಕಟಿಗ ಐಪಿಎಲ್​ ಲೀಗ್​ನಿಂದ ಹೊರಗುಳಿದಿದ್ದಾರೆ ಎಂಬುದರ ವಿವರ ಹೀಗಿದೆ ನೋಡಿ.

ಮೊಹಮ್ಮದ್​ ಶಮ್ಮಿ: ಗುಜರಾತ್ ಟೈಟನ್ಸ್​

ಲುಂಗಿ ಎನ್​ಗಿಡಿ: ಡೆಲ್ಲಿ ಕ್ಯಾಪಿಟಲ್ಸ್​​

ಪ್ರಸಿದ್ಧ್​ ಕೃಷ್ಣ: ರಾಜಸ್ಥಾನ ರಾಯಲ್ಸ್​

ಮಾರ್ಕ್​ ವುಡ್​: ಲಕ್ನೋ ಸೂಪರ್ ಜೈಂಟ್ಸ್​

ಜೇಸನ್​ ರಾಯ್​: ಕೊಲ್ಕತ್ತಾ ನೈಟ್​ ರೈಡರ್ಸ್​​

ಗಸ್​ ಅಟ್ಕಿನ್​​ಸನ್​: ಕೊಲ್ಕತ್ತಾ ನೈಟ್​ ರೈಡರ್ಸ್​​

ಹ್ಯಾರಿ ಬ್ರೂಕ್: ಡೆಲ್ಲಿ ಕ್ಯಾಪಿಟಲ್ಸ್​