ಕ್ರೀಡೆ

ಸಿಎಸ್​ಕೆ ಅಲ್ಲ ಈ ಬಾರಿ ಐಪಿಎಲ್​ನ ಅತಿ ಬುದ್ಧಿವಂತ ಫ್ರಾಂಚೈಸಿ ಆರ್​ಸಿಬಿ ಎನ್ನುವುದಕ್ಕೆ ಇದೇ ಸಾಕ್ಷಿ! RCB

ಬೆಂಗಳೂರು: ಐಪಿಎಲ್​ ಇತಿಹಾಸದಲ್ಲಿ ಇದುವರೆಗೂ ಒಮ್ಮೆಯೂ ಕಪ್ ಗೆಲ್ಲದ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ( RCB ) ತಂಡ ಸಾಕಷ್ಟು ಟೀಕೆಗಳು ಹಾಗೂ ಟ್ರೋಲ್​ಗಳಿಗೆ ಗುರಿಯಾಗಿದೆ. ಮಾಜಿ ಕ್ರಿಕೆಟಿಗರು ಸೇರಿದಂತೆ ಕ್ರೀಡಾ ಪಂಡಿತರು ಕೂಡ ಆರ್​ಸಿಬಿ ವಿರುದ್ಧ ಟೀಕಾ ಪ್ರಹಾರ ನಡೆಸಿದ ಸಾಕಷ್ಟು ಉದಾಹರಣೆಗಳು ಕಣ್ಣ ಮುಂದಿವೆ. ತಮ್ಮ ಎಡವಟ್ಟುಗಳಿಂದಲೇ ಎಷ್ಟೋ ಬಾರಿ ಅಭಿಮಾನಿಗಳ ಆಕ್ರೋಶಕ್ಕೂ ಆರ್​ಸಿಬಿ ಫ್ರಾಂಚೈಸಿ ಗುರಿಯಾಗಿದೆ. ಈ ಬಾರಿಯೂ ಅದೇ ಮಿಸ್ಟೇಕ್​ ಮಾಡಲು ಹೊರಟಿದ್ದ ಆರ್​ಸಿಬಿ ಕೊನೆ ಗಳಿಗೆಯಲ್ಲಿ ತನ್ನ ಬುದ್ಧಿವಂತಿಕೆ ಪ್ರದರ್ಶಿಸಿ ಅಭಿಮಾನಿಗಳ ಮನಸ್ಸನ್ನು ಗೆದ್ದಿದೆ.

ನ.24ರ ಭಾನುವಾರ ಮತ್ತು ನ.25 ಸೋಮವಾರ ಎರಡು ದಿನಗಳ ಕಾಲ ಸೌದಿ ಅರೇಬಿಯಾದ ಜೆಡ್ಡಾದಲ್ಲಿ ಐಪಿಎಲ್​ 2025ರ ಮೆಗಾ ಹರಾಜು ನಡೆದಿದ್ದು ಗೊತ್ತೇ ಇದೆ. ಮೊದಲ ದಿನದ ಹರಾಜಿನಲ್ಲಿ ಆರ್​ಸಿಬಿ ಮ್ಯಾನೇಜ್​ಮೆಂಟ್​ ನಡೆಗೆ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ಅದಕ್ಕೆ ಕಾರಣ ಕನ್ನಡಿಗ ರಾಹುಲ್​ ಸೇರಿದಂತೆ ಪ್ರಮುಖ ಆಟಗಾರರಿಗೆ ಬಿಡ್​ ಮಾಡದೇ ಇರುವುದು. ಆದರೆ, ಎರಡನೇ ದಿನದ ಹರಾಜಿನಲ್ಲಿ ಬಹಳ ಬುದ್ಧಿವಂತಿಕೆಯಿಂದ ಹೆಜ್ಜೆ ಇಟ್ಟ ಆರ್​ಸಿಬಿ ಉತ್ತಮ ಆಟಗಾರರನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ತಂಡದಲ್ಲಿ ಸಮತೋಲವನ್ನು ಕಾಯ್ದುಕೊಂಡಿದೆ.

ಈ ಹಿಂದೆ ಆರ್​ಸಿಬಿಯಲ್ಲಿ ಸಾಮಾನ್ಯವಾಗಿ ಕಾಡುತ್ತಿದ್ದ ಸಮಸ್ಯೆಯೆಂದರೆ, ತಂಡದ ಸಮತೋಲನ. ಬ್ಯಾಟಿಂಗ್​ ವಿಭಾಗ ಬಲಿಷ್ಠವಾಗಿದ್ದರೆ ಬೌಲಿಂಗ್​ ವಿಭಾಗ ದುರ್ಬಲವಾಗಿತ್ತು. ಅಲ್ಲದೆ, ಆಲ್​ರೌಂಡರ್​ಗಳ ಕೊರತೆಯೂ ಕಾಡುತ್ತಿತ್ತು. ಆದರೆ, ಈ ಬಾರಿ ಈ ಮಿಸ್ಟೇಕ್​ಗಳನ್ನು ಪುನಾರಾವರ್ತಿಸದೇ ಸಮತೋಲಿತ ತಂಡವನ್ನು ಕಟ್ಟಿದ್ದಾರೆ. ರಾಹುಲ್​ಗೆ ಬಿಡ್​ ಮಾಡದಿದ್ದಕ್ಕೆ ಅಭಿಮಾನಿಗಳು ಆಕ್ರೋಶಗೊಂಡಿದ್ದರು. ಆದರೆ, ರಾಹುಲ್​ ಪ್ರದರ್ಶನ ಇತ್ತೀಚೆಗೆ ಹೇಳಿಕೊಳ್ಳುವಷ್ಟು ಉತ್ತಮವಾಗಿಲ್ಲ. ಹೀಗಾಗಿ ಒಂದು ಹಂತದವರೆ ಬಿಡ್​ ಮಾಡಿದ್ದ ಆರ್​ಸಿಬಿ ಬಿಡ್​ ಮೊತ್ತ ಹೆಚ್ಚಾದಾಗ ಸ್ಪರ್ಧೆಯಿಂದ ಹಿಂದೆ ಸರಿಯಿತು.

ಗಮನಾರ್ಹ ಸಂಗತಿ ಏನೆಂದರೆ, ಈ ಬಾರಿ ಆರ್​ಸಿಬಿ ಸಂಪೂರ್ಣ ಹೊಸ ತಂಡದಂತಿದೆ. ಕೆಲವೇ ಮಂದಿಯನ್ನು ಹೊರತುಪಡಿಸಿ ಹಳೆಯ ಆಟಗಾರರಿಗೆ ಮತ್ತೆ ಮಣೆಯಾಕದೇ ಹೊಸ ಮುಖಗಳನ್ನು ಆರ್​ಸಿಬಿಗೆ ಪರಿಚಯಿಸಿದೆ. ಗ್ಲೇನ್​ ಮ್ಯಾಕ್ಸ್​ವೆಲ್​, ಫಾಫ್​ ಡುಪ್ಲೆಸಿಸ್​, ಮೊಹಮ್ಮದ್​ ಸಿರಾಜ್​, ಕೆಮರೂನ್​ ಗ್ರೀನ್, ಲಾಕಿ ಫರ್ಗುಸನ್, ಮಹಿಪಾಲ್ ಲೊಮ್ರೋರ್ ಹಾಗೂ ಅನುಜ್ ರಾವತ್ ಸೇರಿದಂತೆ ಬಹುತೇಕ ಆಟಗಾರರಿಗೆ ಆರ್​ಸಿಬಿ ಮತ್ತೆ ಮಣೆ ಹಾಕಲಿಲ್ಲ.

ಈ ಬಾರಿ ಉತ್ತಮ ಆಯ್ಕೆಗಳನ್ನು ಮಾಡಿದ್ದಾರೆ. ವಿಶ್ವ ನಂಬರ್ 2 ಟಿ20 ಬ್ಯಾಟ್ಸ್​ಮನ್​ ಫಿಲ್​ ಸಾಲ್ಟ್​ ಹಾಗೂ ಆಲ್​ರೌಂಡರ್​ ಲಿಯಾಮ್​ ಲಿವಿಂಗ್​ಸ್ಟೋನ್, ವೇಗದ ಬೌಲರ್​ ಜೋಶ್​ಹ್ಯಾಸಲ್​ವುಡ್​ ಹಾಗೂ ಸ್ವಿಂಗ್​ ಸ್ಪೆಷಲಿಸ್ಟ್​ ಭುವನೇಶ್ವರ್​ ಕುಮಾರ್​ ಆರ್​ಸಿಬಿ ಪಾಳಯಕ್ಕೆ ಸೇರಿದ್ದು, ತಂಡಕ್ಕೆ ಬಲ ತುಂಬಿದ್ದಾರೆ. ಸಂಪೂರ್ಣ ಹೊಸತನಕ್ಕೆ ಆರ್​ಸಿಬಿ ಸಾಕ್ಷಿಯಾಗಿದೆ. ಆದರೆ, ಇದಕ್ಕೆ ವಿರುದ್ಧವಾಗಿ ಸಿಎಸ್​ಕೆ ಹರಾಜಿನಲ್ಲಿ ಗಮನ ಸೆಳೆದಿದೆ.

ಸಿಎಸ್​ಕೆ ತಂಡದಲ್ಲಿ ಹೊಸತನವೇನು ಕಾಣುತ್ತಿಲ್ಲ. ಬಹುತೇಕ ಹಳೆಯ ತಂಡವೇ ಮತ್ತೆ ರಚನೆಯಾಗಿದಂತಿದೆ. ಸಿಎಸ್​ಕೆ ಈಗಾಗಲೇ ಎಂ.ಎಸ್​. ಧೋನಿ ಅವರನ್ನು ಅನ್​ಕ್ಯಾಪ್ಡ್​ ಪ್ಲೇಯರ್​ ಆಗಿ ಕೇವಲ 4 ಕೋಟಿ ರೂ. ಉಳಿಸಿಕೊಂಡಿದೆ. ಧೋನಿಯ ಜತೆ ರುತುರಾಜ್​ ಗಾಯಕ್ವಾಡ್​, ಮತೀಶಾ ಪತಿರಾನ, ಶಿವಂ ದುಬೆ ಹಾಗೂ ರವೀಂದ್ರ ಜಡೇಜಾ ರನ್ನು ಹರಾಜಿಗೂ ಮುನ್ನ ರಿಟೇನ್​ ಪಟ್ಟಿಯಲ್ಲಿ ಉಳಿಸಿಕೊಂಡಿತು. ಆಗ ತಂಡದಿಂದ ಕೈಬಿಟ್ಟಿದ್ದ ಡೆವೊನ್ ಕಾನ್ವೇ ಹಾಗೂ ರಚಿನ್​ ರವೀಂದ್ರ ಅವರನ್ನು ಸಿಎಸ್​ಕೆ ಮತ್ತೆ ಖರೀದಿ ಮಾಡಿದೆ. ಇನ್ನು ಈ ಹಿಂದೆ ಸಿಎಸ್​ಕೆಯಲ್ಲಿದ್ದ ರವಿಚಂದ್ರನ್​ ಅಶ್ವಿನ್​ ಮತ್ತೆ ತಂಡ ಸೇರಿಕೊಂಡಿದ್ದಾರೆ. ಹೀಗಾಗಿ ಆಡುವ ಹನ್ನೊಂದರ ಬಳಗದ ಬಹುತೇಕ ಆಟಗಾರರು ಹಿಂದಿನವರೇ ಎಂಬುದೇ ಗಮನಾರ್ಹ.ಹೀಗಾಗಿ ಸಿಎಸ್​ಕೆಯಲ್ಲಿ ಹೊಸತನವೇನು ಕಂಡಿಲ್ಲ. ಅಲ್ಲದೆ, ಈ ಹಿಂದಿನ ಸೀಸನ್​ನಲ್ಲಿ ಸಿಎಸ್​ಕೆ ಪ್ರದರ್ಶನವೂ ಕೂಡ ನಿರೀಕ್ಷಿತವಾಗಿರಲಿಲ್ಲ. ಉಳಿದ ಎಲ್ಲ ತಂಡಗಳಿಗೆ ಹೋಲಿಸಿದರೆ ಈ ಬಾರಿ ಆರ್​ಸಿಬಿ ಸಂಪೂರ್ಣ ಹೊಸತನದಿಂದ ಕಾಣಿಸಿಕೊಳ್ಳಲಿದೆ.

ಸಂಪೂರ್ಣ ಆರ್​ಸಿಬಿ ತಂಡ

ಜೋಶ್​ ಹ್ಯಾಸಲ್​ವುಡ್​ (12.50 ಕೋಟಿ), ಫಿಲ್​ ಸಾಲ್ಟ್​ (11.50 ಕೋಟಿ), ಜಿತೇಶ್​ ಶರ್ಮ (11 ಕೋಟಿ), ಲಿಯಾಮ್​ ಲಿವಿಂಗ್​ಸ್ಟೋನ್​ (8.75 ಕೋಟಿ), ರಸಿಕ್​ ಸಲಾಂ (6 ಕೋಟಿ), ಸುಯಶ್​ ಶರ್ಮ (2.60 ಕೋಟಿ). ಭುವನೇಶ್ವರ್​ ಕುಮಾರ್​ (10.75 ಕೋಟಿ), ಕೃನಾಲ್​ ಪಾಂಡ್ಯ (5.75 ಕೋಟಿ), ಟಿಮ್​ ಡೇವಿಡ್​ (3 ಕೋಟಿ), ಜೇಕಬ್​ ಬೆಥೆಲ್​ (2.60 ಕೋಟಿ), ದೇವದತ್​ ಪಡಿಕ್ಕಲ್​ (2 ಕೋಟಿ), ನುವಾನ್​ ತುಷಾರ (1.60 ಕೋಟಿ), ರೊಮಾರಿಯೊ ಶೆರ್ಡ್​ (1.50 ಕೋಟಿ), ಸ್ವಪ್ನಿಲ್​ ಸಿಂಗ್​ (50 ಲಕ್ಷ), ಮನೋಜ್​ ಭಾಂಡಗೆ (30 ಲಕ್ಷ), ಸ್ವಸ್ತಿಕ್​ ಚಿಕರ (30 ಲಕ್ಷ), ಮೋಹಿತ್​ ರಾಥೀ (30 ಲಕ್ಷ), ಅಭಿನಂದನ್​ ಸಿಂಗ್​ (30 ಲಕ್ಷ), ಲುಂಗಿ ಎನ್​ಗಿಡಿ (1 ಕೋಟಿ).

ಆರ್​ಸಿಬಿ ತಂಡ ಸಂಯೋಜನೆ – IPL 2025

ಬ್ಯಾಟರ್​ಗಳು: ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ದೇವದತ್ ಪಡಿಕ್ಕಲ್, ಸ್ವಸ್ತಿಕ್ ಚಿಕಾರಾ.

ವಿಕೆಟ್​ ಕೀಪರ್ಸ್​: ಫಿಲ್​ ಸಾಲ್ಟ್​ ಮತ್ತು ಜಿತೇಶ್​ ಶರ್ಮ

ಆಲ್​ರೌಂಡರ್ಸ್​ : ಲಿಯಾಮ್ ಲಿವಿಂಗ್‌ಸ್ಟೋನ್, ಕೃನಾಲ್ ಪಾಂಡ್ಯ, ಸ್ವಪ್ನಿಲ್ ಸಿಂಗ್, ಟಿಮ್ ಡೇವಿಡ್, ರೊಮಾರಿಯೋ ಶೆಫರ್ಡ್, ಮನೋಜ್ ಭಾಂಡಗೆ ಹಾಗೂ ಜಾಕೋಬ್ ಬೆಥೆಲ್.

ಫಾಸ್ಟ್​ ಬೌಲರ್ಸ್​: ಜೋಶ್ ಹ್ಯಾಸಲ್‌ವುಡ್, ರಸಿಖ್ ದಾರ್, ಭುವನೇಶ್ವರ್ ಕುಮಾರ್, ನುವಾನ್ ತುಷಾರ, ಯಶ್ ದಯಾಳ್, ಲುಂಗಿ ಎನ್‌ಗಿಡಿ ಹಾಗೂ ಅಭಿನಂದನ್ ಸಿಂಗ್.

ಸ್ಪಿನ್ನರ್‌ಗಳು: ಸುಯಶ್ ಶರ್ಮಾ ಹಾಗೂ ಮೋಹಿತ್ ರಾಥಿ.

ಆರ್​ಸಿಬಿ ಆಡುವ ಹನ್ನೊಂದರ ಬಳಗ (ಅಂದಾಜು)

ಫಿಲ್ ಸಾಲ್ಟ್, ವಿರಾಟ್ ಕೊಹ್ಲಿ, ಲಿಯಾಮ್ ಲಿವಿಂಗ್‌ಸ್ಟೋನ್, ದೇವದತ್ ಪಡಿಕ್ಕಲ್, ಟಿಮ್ ಡೇವಿಡ್, ರಜತ್ ಪಾಟಿದಾರ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಯಶ್ ದಯಾಲ್, ಜೋಶ್ ಹ್ಯಾಸ್​ಲ್‌ವುಡ್ ಹಾಗೂ ಸುಯಾಶ್ ಶರ್ಮಾ.

ಹರಾಜಿನಲ್ಲಿ CSK ಖರೀದಿಸಿದ ಪ್ಲೇಯರ್ಸ್ ಪಟ್ಟಿ​

1. ಡೆವೊನ್ ಕಾನ್ವೇ – 6.25 ಕೋಟಿ ರೂ.

2. ರಾಹುಲ್ ತ್ರಿಪಾಠಿ – 3.4 ಕೋಟಿ ರೂ.

3. ರಚಿನ್ ರವೀಂದ್ರ – 4 ಕೋಟಿ ರೂ.

4. ರವಿಚಂದ್ರನ್ ಅಶ್ವಿನ್ – 9.75 ಕೋಟಿ ರೂ.

5. ಖಲೀಲ್ ಅಹಮದ್ – 4.80 ಕೋಟಿ ರೂ.

6. ನೂರ್ ಅಹಮದ್ – 10 ಕೋಟಿ ರೂ.

7. ಸ್ಯಾಮ್ ಕರನ್​ – 2.40 ಕೋಟಿ ರೂ.

8. ವಿಜಯ್ ಶಂಕರ್ – 1.2 ಕೋಟಿ ರೂ.

9. ಶೇಕ್ ರಶೀದ್ – 30 ಲಕ್ಷ ರೂ.

10. ಅಂಶುಲ್ ಕಾಂಬೋಜ್ – 3.4 ಕೋಟಿ ರೂ.

11. ಮುಖೇಶ್ ಚೌಧರಿ – 30 ಲಕ್ಷ ರೂ.

12. ದೀಪಕ್ ಹೂಡಾ – 1.7 ಕೋಟಿ ರೂ.

13. ಗುರ್ಜಪ್ನೀತ್ ಸಿಂಗ್ – 2.2 ಕೋಟಿ ರೂ.

14. ನಾಥನ್ ಎಲ್ಲಿಸ್ – 2 ಕೋಟಿ ರೂ.

15. ಜೇಮಿ ಓವರ್ಟನ್ – 1.5 ಕೋಟಿ ರೂ.

16. ಕಮಲೇಶ್ ನಾಗರಕೋಟಿ – 30 ಲಕ್ಷ ರೂ.

17. ರಾಮಕೃಷ್ಣ ಘೋಷ್ – 30 ಲಕ್ಷ ರೂ.

18. ಶ್ರೇಯಸ್ ಗೋಪಾಲ್ – 30 ಲಕ್ಷ ರೂ.

19. ವಂಶ್ ಬೇಡಿ – 55 ಲಕ್ಷ ರೂ.

20. ಅಂದ್ರೆ ಸಿದ್ದಾರ್ಥ್ – 30 ಲಕ್ಷ ರೂ.

ಉಳಿಸಿಕೊಂಡಿರುವ ಆಟಗಾರರ ಪಟ್ಟಿ

ರುತುರಾಜ್ ಗಾಯಕ್ವಾಡ್, ಮತೀಶಾ ಪತಿರಾನ, ಶಿವಂ ದುಬೆ, ರವೀಂದ್ರ ಜಡೇಜಾ ಮತ್ತು ಎಂ.ಎಸ್. ಧೋನಿ.

ಒಟ್ಟಾರೆ ಆರ್​ಸಿಬಿ ತಂಡ ಈ ಬಾರಿ ಹರಾಜಿನಲ್ಲೇ ಭರವಸೆ ಮೂಡಿಸಿದ್ದು, ಈ ಸಲ ಕಪ್​ ನಮ್ಮದೇ ಎಂದು ಜೋರಾಗಿ ಹೇಳುವಂತೆ ಮಾಡಿದೆ. ಏಕೆಂದರೆ, ಬ್ಯಾಟಿಂಗ್​ ಮತ್ತು ಬೌಲಿಂಗ್​ನಲ್ಲಿ ಈ ಬಾರಿ ಆರ್​ಸಿಬಿ ತಂಡ ಸಮತೋಲನ ಕಾಯ್ದುಕೊಂಡಿದೆ. ಕಳೆದ 17 ಸೀಸನ್​ಗಳಿಂದ ಕೇಳಿಬರುತ್ತಿದ್ದ ಈ ಸಲ ಕಮ್​ ನಮ್ಮದೇ ಎಂಬ ಮಾತು ಈ ಬಾರಿಯಾದರೂ ನಿಲ್ಲುತ್ತಾ ಕಾಯಬೇಕಿದೆ. (ಏಜೆನ್ಸೀಸ್​)